ಸೋಮವಾರ, ನವೆಂಬರ್ 30, 2015

'ಬುಗುರಿ' ಪ್ರೀತಿಯ ಸುತ್ತಾ....

'ಬುಗುರಿ' ಪ್ರೀತಿಯ ಸುತ್ತಾ....
   ಕೆಪಿಟಿಸಿಎಲ್ ’ಅಕೌಂಟ್ಸ್ ಆಫಿಸರ್’ ನೇಮಕಾತಿಗೆ ನಡೆಸಿದ ಪರೀಕ್ಷೆಯಲ್ಲಿ ನಾನು ಹೆಚ್ಚು ಅಂಕ ಗಳಿಸಿದ್ದರಿಂದ ಮೂಲ ದಾಖಲಾತಿ ಪರಿಶೀಲನೆಗೆ ನನ್ನನ್ನು ಕರೆದಿದ್ದರು. ಪ್ರಯಾಣದಲ್ಲಿ ಯಾವುದೇ ರೀತಿಯಲ್ಲಿ ತೊಂದರೆಯಾಗಿ ಸಮಯಕ್ಕೆ ಸರಿಯಾಗಿ ಹಾಜರಾಗಳು ಕಷ್ಟವಾಗಬಹುದೆಂದು ಯೋಚಿಸಿ, ಮನಸ್ಸಲ್ಲಿ ನೂರಾರು ಕನಸ್ಸುಗಳನ್ನು ಹೊತ್ತು ಎಲ್ಲಾ ಸರ್ಟಿಫಿಕೇಟುಗಳನ್ನು ಪುನಾಃ ಪುನಃ ಪರಿಶೀಲಿಸಿ, ಒಂದು ದಿನ ಮುಂಚಿತವಾಗಿಯೇ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದೆ. ಒಂದು ದಿನ ಮುಂಚಿತವಾಗಿ ಬೆಂಗಳೂರಿಗೆ ಬಂದ್ದಿದ್ದರಿಂದ, ಸಮಯ ಕಳೆಯಲು ಮಂತ್ರಿ ಮಾಲ್ ಗೆ ಗೆಳೆಯನೊಂದಿಗೆ ಬಂದಿದ್ದೆ. ಮನಸ್ಸಿನಲ್ಲಿ ಯಾವುದೋ ರೀತಿಯ ತಳಮಳ, ನಾಳೆ ಎಲ್ಲವೂ ಸರಿಯಾಗಿರುತ್ತದೋ ಇಲ್ಲವೋ ಎಂಬ ಆತಂಕದಿಂದಲೇ ಆ ಮಾಲ್ ನಲ್ಲಿರುವ ಥಿಯೇಟರಿನ ಸ್ಕ್ರೀನ್ ನಂಬ್ರ ೬ ನ ಕತ್ತಲು ಕೋಣೆಗೆ ಗೆಳೆಯನೊಂದಿಗೆ ಉದ್ವೇಗದಿಂದಲೇ ಹೆಜ್ಜೆ ಕಾಕಿದ್ದೆ. 
   ಅದು ಗಣೇಶ್ ಅಭಿನಯದ ’ಬುಗುರಿ’ ನಿನೆಮಾ. ಸಿನೆಮಾ ನೋಡಿ ಹೊರ ಬರುತ್ತಿದ್ದಂತೆ, ವಾಹ್.. ಚೆನ್ನಾಗಿತ್ತಲ್ವ ಅನ್ನಿಸಿತು. ನನ್ನ ಜೀವನಕ್ಕೂ ಈ ಸಿನೆಮಾ ಎಲ್ಲೋ ಒಂದು ಕಡೆ ಹತ್ತಿರವಾಗಿದೆಯಲ್ಲಾ ಅನ್ನಿಸಿತು. ನಿಜವಾಗಿಯೂ ಈ ಸಿನೆಮಾ ಶತದಿನ ಪೂರೈಸಬೇಕಿತ್ತು. ಅದೇಕೋ ’ಉಪ್ಪಿ೨’ ಮತ್ತು ’ರಂಗಿತರಂಗ’ದ ಮಧ್ಯೆ ಬುಗುರಿ ರಭಸವಾಗಿ ತಿರುಗಲೇ ಇಲ್ಲ ಅನಿಸುತ್ತದೆ.
   ಸಿನೆಮಾದ ಕೊನೆಯಲ್ಲಿ ಬರುವ ಸಂದೇಶ  "ನಿಮ್ಮ ಜೀವನದಲ್ಲೂ ಇಂಥ ಘಟನೆ ಸಂಭವಿಸಿರಬಹುದು...... ಎಂಬ ವಾಕ್ಯದೊಂದಿಗೆ ಪ್ರಾರಂಭವಾಗಿ ಸುಮಾರು ಒಂದು ನಿಮಿಷದಷ್ಟು ಓದಲಿರುವ ವಾಕ್ಯಗಳನ್ನು ವೀಕ್ಷಕರೆಲ್ಲರೂ ಎದ್ದು ನಿಂತು ಓದುತ್ತಲೇ ನಿಧಾನವಾಗಿ ಥಿಯೇಟರಿಂದ ಹೊರಗೆ ಹೋಗುವ ಬಾಗಿಲ ಕಡೆಗೆ ಹೆಜ್ಜೆ ಹಾಕುತ್ತಾರೆ. ಜೀವನದಲ್ಲಿ ಯಾವುದೋ ಕಾರಣಕ್ಕೆ ಪ್ರೀತಿಯನ್ನು ತ್ಯಾಗ ಮಾಡಬೇಕಾಗಿ ಬಂದಾಗ ಹತಾಶರಾಗ ಬೇಕೆಂದಿಲ್ಲ, ಈ ಸಿನೆಮಾ ನೋಡಿದರಾಯಿತು. ಪ್ರೀತಿಸಿ ಕೈಕೊಟ್ಟ ಹುಡುಗ/ಹುಡುಗಿ ದ್ವೇಷ ಸಾಧಿಸಲು ಹೋಗುವ ಮುನ್ನ ಈ ಸಿನೆಮಾ ನೋಡ ಬೇಕು. ಇತ್ತೀಚಿನ ಒಂದು ಉದಾಹರಣೆ: ಹುಡುಗ ಉನ್ನತ ಉದ್ಯೋಗದಲ್ಲಿದ್ದು, ಹಲವಾರು ವರ್ಷಗಳ ಹಿಂದೆ ಪ್ರೀತಿಸಿದ ಹುಡುಗಿ ಫೇಸ್ ಬುಕ್ ನಲ್ಲಿ ಸಿಕ್ಕಾಗ, ಹುಡುಗಿಗೆ ಮದುವೆಯಾಗಿದ್ದರೂ, ಪತಿಯನ್ನು ಭಯೋತ್ಪಾದಕಂತೆ ಬಿಂಬಿಸಿ ಜೈಲಿಗಟ್ಟಲು ಪ್ರಯತ್ನಿಸಿ ಹುಡುಗಿಯನ್ನು ಪಡೆಯಲು ಬಯಸುವಂತವನು ಈ ಸಿನೆಮಾವನ್ನೊಮ್ಮೆ ನೋಡಬೇಕು.  ಒಟ್ಟಾರೆ ಎಲ್ಲರು ಕುಟುಂಬ ಸಮೇತರಾಗಿ ನೋಡಬೇಕಾದ ಒಂದು ಒಳ್ಳೆಯ ಸಿನೆಮಾ. ಒಂದು ಒಳ್ಳೆಯ ಮಾತು, ಒಂದು ಘಟನೆ ಜೀವನದ ದಿಕ್ಕನ್ನೇ ಬದಲಿಸಬಹುದು. ನಾವು ನೋಡಿದ ಸಿನೆಮಾ ಹೇಗಿರಬೇಕೆಂದರೆ ಅದು ನಮ್ಮನ್ನು ಬಹಳ ದಿನಗಳವರೆಗೆ ಕಾಡುತ್ತಿರ ಬೇಕು.
   ನನಗೆ ಯಾಕೋ ಈ ಸಿನೆಮಾದ ಕಥೆ ಹೇಳಲೇ ಬೇಕೆನಿಸುತ್ತದೆ. ಕಥೆ ಹೀಗಿದೆ... ಕೇಳಿ:
       ಮಲೇಷಿಯಾದಲ್ಲಿ ನೆಲೆಸಿರುವ ನಾಯಕ ಗಣೇಶ್ ಐಷಾರಾಮಿ ಕಾರಿನಿಂದ ಇಳಿಯುತ್ತಾನೆ. ಹಿಂದೆಯೇ ಅವನ ಅಷಿಸ್ಟೆಂಟ್ ಸಾಧುಕೋಕಿಲ ಶೂಟ್ ಕೇಸ್ ನೊಂದಿಗೆ ಇನ್ನೊಂದು ಕಾರಿನಿಂದ ಇಳಿಯುತ್ತಾನೆ. ’ಹಲೋ’ ಎನ್ನುವ ಸಾಫ್ಟ್ವೇರನ್ನು ಡೆವಲಪ್ ಮಾಡಿರುವ ನಾಯಕ ಆ ಸಾಫ್ಟ್ವೇರ್ ಇದ್ದರೆ ಮೊಬೈಲ್ ಬ್ಯಾಟರಿ ಚಾರ್ಜ್ ಮಾಡುವ ಅಗತ್ಯವಿಲ್ಲವೆಂದು ಕಂಡುಹಿಡಿಯುತ್ತಾನೆ. ಈಗ ಒಳ್ಳೆಯ ಹೆಸರು ಮತ್ತು ಶ್ರಿಮಂತಿಕೆಯನ್ನು ಗಳಿಸಿರುತ್ತಾನೆ. ತನ್ನ ತಂಗಿಯ ಮದುವೆಯನ್ನು ಅದ್ದೂರಿಯಾಗಿಯೇ ಮಾಡಿರುತ್ತಾನೆ. ನಾಯಕನ ಮದುವೆಯ ಸಿಧ್ದತೆ ನಡೆಯುತ್ತಿರುತ್ತದೆ. ಒಂದು ಬೆಟ್ಟದ ತುದಿಯಲ್ಲಿ ಪ್ರಕೃತಿಯ ರಮಣೀಯ ವಾತಾವರಣದಲ್ಲಿ ತಾನು ಮದುವೆಯಾಗ ಬೇಕಾದ ಹುಡುಗಿ (ಎರಡನೆ ನಾಯಕಿ) ನಾಯಕನ ಹೆಸರನ್ನು ಜೋರಾಗಿ ಕರೆಯುತ್ತಾಳೆ. ಅದು ಪ್ರತಿಧ್ವನಿಸುವುದನ್ನು ಕೇಳಿ ಅನಂದ ಪಡುತ್ತಾಳೆ. ಆಗ ನಾಯಕನೂ ಹುಡುಗಿಯ ಹೆಸರನ್ನು ಜೋರಾಗಿ ಕರೆಯುತ್ತಿರುವಾಗಲೇ ತನಗೆ ಅರಿವಿಲ್ಲದಂತೆ ಬೇರೊಂದು ಹುಡುಗಿಯ ಹೆಸರನ್ನು ಕರೆಯುತ್ತಾನೆ. ಅದನ್ನು ಕೇಳಿ ತಬ್ಬಿಬ್ಬಾದ ಹುಡುಗಿ, ಮೌನವಾದ ನಾಯಕ. ಐದು ವರ್ಷದ ಹಿಂದೆ ನಡೆದ ಕಥೆ ಹೇಳುತ್ತಾನೆ.
     ನಾಯಕನ ತಂದೆ ತನ್ನ ಮಗನ ಇಂಜಿನಿಯರಿಂಗ್ ಓದಿಗಾಗಿ ಲಕ್ಷಾಂತರ ಹಣ ಸಾಲ ಮಾಡಿ ತನ್ನ ಮಗನನ್ನು ದೊಡ್ಡ ಇಂಜಿನಿಯರ್ ಮಾಡುವ ಕನಸು ಕಂಡಿರುತ್ತಾನೆ. ತನ್ನ ಮಗನನ್ನು ತುಂಬಾ ಪ್ರೀತಿಸಿರುತ್ತಾನೆ. ತನ್ನ ಮಗನ ಇಂಜಿನಿಯರಿಂಗ್ ಕಲಿತು ಮುಗಿದರೆ ಸಾಕು ತಾನು ಮತ್ತೆ ನಿರಾಳವೆಂದು ಅಭಿಮಾನದಿಂದ ಹೇಳುತ್ತಿರುತ್ತಾನೆ.  ಹುಡುಗಾಟದವನಾದ ನಾಯಕ ಜಾಲಿಯಾಗಿ ತನ್ನ ಗೆಳೆಯ ಸಾಧುಕೋಕಿಲನೊಂದಿಗೆ ಸೇರಿ ಮಾಡುವ ವಿಭಿನ್ನ ನಡವಲಿಕೆಯಿಂದ ಒಂದು ಹುಡುಗಿಗೆ (ಮೊದಲನೆ ನಾಯಕಿ) ಹತ್ತಿರವಾಗುತ್ತಾ  ಹೋಗುತ್ತಾನೆ. ಲಿಂಗು ಹೆಸರಿನ ಹುಡುಗಿ ನಾಯಕಿಯ ಸ್ನೇಹಿತೆ ಮತ್ತು ನಾಯಕನ ಗೆಳೆಯ ಸಾಧುಕೋಕಿಲನ ನಡುವೆ ನಡೆಯುವ ನಗು ತರುವಂತ ದ್ರಶ್ಯಗಳು, ಮಾತುಗಳು ಎಂಥವರನ್ನೂ ನಗಿಸುತ್ತದೆ. ನಾಯಕ ಮತ್ತು ನಾಯಕಿ ಗಾಢವಾಗಿ ಪ್ರೀತಿಸಿ, ಇನ್ನೇನು ನಾಯಕಿ ನಾಯಕನೊಂದಿಗೆ ಮನೆ ಬಿಟ್ಟು ಬರಲು ತಯಾರಾಗಿರುತ್ತಾಳೆ.
     ಇಂಜಿನಿಯರಿಂಗ್ ಪದವಿಯ ಫಲಿತಾಂಶ ನೋಡಿ ಮನೆಯ ಒಳಗೆ ನಿಧಾನವಾಗಿ ಕಾಲಿಡುತ್ತಿರುವ ನಾಯಕನ ಮುಖ ಬಾಡಿ ಹೋಗಿದೆ. ಮೌನವಾಗಿದ್ದಾನೆ. ಮನೆಯ ಒಳಗೆ ಎಲ್ಲರೂ ನಾಯಕನ ಪದವಿಯ ಫಲಿತಾಂಶ ತಿಳಿದುಕೊಳ್ಳಲು ಕಾಯುತ್ತಾ, ಸಂಭ್ರಮದಿಂದ ಹಬ್ಬ ಮಾಡಲು ಕಾಯುತ್ತಿರುತ್ತಾರೆ. ನಾಯಕನ ತಂದೆಯಂತು ಮಗನ ಫಲಿತಾಂಶದ ಸುದ್ದಿ ಕೇಳಲು ತುದಿಗಾಲಲ್ಲಿ ನಿಂತಿರುತ್ತಾರೆ. ’ಇಲ್ಲಾ.. ನಾನು ಫೇಲಾಗಿ ಬಿಟ್ಟೆ’ ಎಂಬ ನಡುಗುವ ಧ್ವನಿ ನಾಯಕನ ಬಾಯಿಯಿಂದ ಹೊರ ಬಿದ್ದದ್ದೆ ತಡ ಮನೆಯವರೆಲ್ಲ ಹತಾಶರಾಗುತ್ತಾರೆ. ನಾಯಕನ ತಂದೆ ಕುರ್ಚಿಯಲ್ಲಿ ಕುಸಿದು ಕುಳಿಯುತ್ತಾರೆ. ನಾಯಕ ತನ್ನ ತಂದೆಯನ್ನು ಸಮಧಾನ ಪಡಿಸಲು, ಮುಂದೆ ತಾನು ಚೆನ್ನಾಗಿ ಓದಿ ಪಾಸಾಗುತ್ತೇನೆ ಎಂದು ತಂದೆಯನ್ನು ಸ್ಪರ್ಶಿಸುವಾಗುವಾಗ ತಂದೆಯ ಪ್ರಾಣ ಪಕ್ಷಿ ಹೋಗಿರುತ್ತದೆ. ನಾಯಕ ಆಘಾತಗೊಳ್ಳುತ್ತಾನೆ. ಎಲ್ಲರು ನಾಯಕನನ್ನು ಶಪಿಸುತ್ತಾರೆ. ಊರಿಗೆ ಊರೇ ತಂದೆಯನ್ನು ಬಲಿ ತೆಗೆದುಕೊಂಡನೆಂದು ಬೊಬ್ಬಿಡುತ್ತಾರೆ.
   ಒಂದು ಬಯಲಿನಲ್ಲಿ ತಾನು ಪ್ರೀತಿಸಿದ ಹುಡುಗಿಯನ್ನು ಮಾತಾಡಿಸುತ್ತಿರುವ ನಾಯಕ ನನ್ನ ಒಂದೇ ಒಂದು ಸೋಲು ನನ್ನನ್ನೇ ಬದಲಾಯಿಸಿ ಬಿಟ್ಟಿತು. ಜೀವನದಲ್ಲಿ ಒಳ್ಳೆಯ ಪಾಠವನ್ನೇ ಕಲಿಸಿ ಬಿಟ್ಟಿತು. ಈ ಕ್ಷಣದಿಂದ ನಿನ್ನಿಂದ ದೂರ ಹೋಗಲು ಬಯಸುತ್ತೇನೆ. ನನ್ನನ್ನು ಮರೆತು ಬಿಡು ಎನ್ನುತ್ತಾನೆ. ನಾಯಕಿ ಕೋಪಗೊಂಡು ತನ್ನ ಮೇಲೆ ಎಗರಾಡುತ್ತಾಳೆ ಎಂದು ಕೊಂಡ್ದಿದ್ದ ನಾಯಕನ ನಿರೀಕ್ಷೆ ಸುಳ್ಳಾಗುತ್ತದೆ. ನಾಯಕಿಯೂ ಅದೇ ಮಾತನ್ನಾಡಲು ತಯಾರಾಗಿರುತ್ತಾಳೆ. ಕಾರಣ ಅವಳ ಸಂಭಂದಿಕಳು ಮನೆ ಬಿಟ್ಟು ಹೋಗಿ ಅವಳ ತಂದೆಗೆ ಲಘು ಹ್ರದಯಾಘಾತವಾಗಿ ಆಸ್ಪತ್ರೆ ಸೇರಿರುತ್ತಾನೆ. ಅತ್ತ ಲಿಂಗುವಿಗೂ ಬೇರೆ ಹುಡುಗನೊಂದಿಗೆ ಮದುವೆ ನಿಶ್ಚಯವಾಗುತ್ತದೆ. ಇಲ್ಲಿಗೆ ನಾಯಕ ತಾನು ಮದುವೆಯಾಗಲು ನಿಶ್ಚಯಿಸಿದ್ದ ಹುಡುಗಿಗೆ ಹೇಳುತ್ತಿರುವ ಕಥೆ ಮುಗಿಯುತ್ತದೆ.
  ಮುಂದಿನದು ಸಿನೆಮಾದ ಸೆಕೆಂಡ್ ಹಾಫ್. ಈ ಹಾಫ್ ನಲ್ಲಿ ನಾಯಕ ತುಂಬಾ ಜವಾಬ್ದಾರಿಯುತನಾಗಿರುತ್ತಾನೆ.ತಾನು ಆಂದುಕೊಂಡದ್ದು ಸಾಧಿಸುವ ಮೂಲಕ ಜೀವನದಲ್ಲಿ ಒಂದನ್ನು ಪಡೆದುಕೊಂಡಿದ್ದ ನಾಯಕ ಇನ್ನೊಂದನ್ನು ಅಂದರೆ ತಾನು ಪ್ರೀತಿಸಿದ ಹುಡುಗಿಯನ್ನು ಕಳೆದುಕೊಂಡಿರುತ್ತಾನೆ. ಒಂದು ದಿನ ನಾಯಕನಿಗೆ ತಾನು ಹಿಂದೆ ಪ್ರೀತಿಸಿದ ಹುಡುಗಿ, ಐದು ವರ್ಷದ ಹಿಂದೆ ಕಳೆದ ದಿನಗಳು ತುಂಬಾ ಕಾಡುತ್ತವೆ. ತಾನು ಮದುವೆಯಾಗಲು ಹೊರಟಿರುವ ಹುಡುಗಿಗೆ ತಾನು ಐದು ವರ್ಷದ ಹಿಂದೆ ಪ್ರೀತಿಸಿದ್ದ ಹುಡುಗಿಯನ್ನು ಒಮ್ಮೆ ನೋಡ ಬೇಕೆಂದು ಹೇಳಿ ತನ್ನ ಗೆಳೆಯನೊಂದಿಗೆ ತಾನು ಈಗ ವಾಸವಾಗಿರುವ ದೇಶ ಮಲೇಷಿಯಾದಿಂದ ನೇರವಾಗಿ ಭಾರತದ ಮಂಗಳೂರಿಗೆ ವಿಮಾನ ಏರುತ್ತಾನೆ. ಇಲ್ಲಿ ನಾಯಕ ಮತ್ತು ಅವನ ಅಸಿಸ್ಟೆಂಟ್ ಆಗಿರುವ ಗೆಳೆಯ, ಹುಡುಗಿಯನ್ನು ಹುಡುಕುವ ಹುಡುಕಾಟ, ಕುಳಿತು ನೋಡುವ ಪ್ರೇಕ್ಷಕರಲ್ಲಿ ಕುತೂಹಲವನ್ನುಂಟು ಮಾಡುತ್ತದೆ. ಕುಳಿತು ನೋಡುತ್ತಿದ್ದ ನಾನೂ ಕೆಲವು ಕ್ಷಣ ಎಲ್ಲಿ ಇದ್ದೇನೆ ಎಂಬುದನ್ನು ಮರೆತು ಮುಂದೆ ಏನಾಗ ಬಹುದೆಂದು ಕಾತರನಾಗಿದ್ದೆ. ಮಂಗಳೂರಿಗೆ ಬಂದ ನಾಯಕ ಮತ್ತು ಅವನ ಅಸಿಸ್ಟೆಂಟ್ ನೇರವಾಗಿ ನಾಯಕ ಹಿಂದೆ ಪ್ರೀತಿಸಿದ್ದ ಹುಡುಗಿಯ ಮನೆಗೆ ಹೋಗುತ್ತಾರೆ. ಆದರೆ ಆ ಮನೆ ಮಾರಟವಾಗಿ ಬೇರೆ ಯಾರೊ ಕೊಂಡು ಕೊಂಡಿರುತ್ತಾರೆ. ಸಾಧುಕೋಕಿಲನ ಬಳಿ ಅವನು ಹಿಂದೆ ಇಷ್ಟಪಟ್ಟಿದ್ದ ಹುಡುಗಿಯ ಹಳೆಯ ಫೋನ್ ನಂಬರ್ ಇರುತ್ತದೆ. ಅದು ಚಾಲ್ತಿಯಲ್ಲಿ ಇದೆಯ ಇಲ್ವಾ ಎಂದು ಪರೀಕ್ಷಿಸಲು ಡಯಲು ಮಾಡುತ್ತಾನೆ. ಪೋನ್ ರಿಂಗಾಗುತ್ತದೆ. ಅತ್ತ ಕಡೆಯಿಂದ ಹಲೋ ಎನ್ನುವ ಲಿಂಗುವಿನ ಧ್ವನಿ ಕೇಳಿ ಇಬ್ಬರೂ ಸಂತೋಷಗೊಳ್ಳುತ್ತಾರೆ. ಲಿಂಗುವಿಗೆ ಮದುವೆಯಾಗಿ ಇಬ್ಬರು ಮಕ್ಕಳಿರುತ್ತಾರೆ. ಗಂಡ ಕುಳಿತುಕೊಂಡು ಶರಾಬು ಕುಡಿಯುತ್ತಾ ತೂರಾಡುತ್ತಿರುತ್ತಾನೆ. ಆದರೆ ನಾಯಕ ಪ್ರೀತಿಸಿದ ಹುಡುಗಿಯ ಪತ್ತೆಯಾಗುವುದಿಲ್ಲ. ತಮ್ಮ ಐಷಾರಾಮಿ ಕಾರಿನಲ್ಲಿ ಸೀದಾ ಹುಡುಗಿಯ ಎರಡನೆ ಗೆಳತಿಯಲ್ಲಿಗೆ ಬರುತ್ತಾರೆ. ಆಕೆ ನಾಟ್ಯ ಶಿಕ್ಷಕಿಯಾಗಿ ನಾಟ್ಯ ಕಲಿಸುತ್ತಿರುತ್ತಾಳೆ. ಈ ಇಬ್ಬರು ಗೆಳೆಯರನ್ನು ಕಂಡಾಗ ತುಂಬಾ ಸಂತೋಷಗೊಳ್ಳುತ್ತಾಳೆ. ಆದರೆ ನಾಯಕ ಪ್ರೀತಿಸಿದ ಹುಡುಗಿಯ ಬಗ್ಗೆ ಕೇಳಿದಾಗ, ಐದು ವರ್ಷದ ಹಿಂದೆಯೇ ಅವಳ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಹೇಳುತ್ತಾಳೆ. ಯಾರನ್ನು ವಿಚಾರಿಸಿದಾಗಲೂ ಯಾವುದೇ ಸುಲಿವು ಸಿಗುವುದಿಲ್ಲ. ಫೇಸ್ಬುಕ್, ವಾಟ್ಸಪ್, ಗೂಗಲ್.....ಎಲ್ಲದರಲ್ಲೂ ಹುಡುಕುತ್ತಾರೆ. ಇಲ್ಲ.. ಅವಳನ್ನು ನೋಡಲು ಸಾಧ್ಯನೇ ಇಲ್ಲ ಎಂದು ನೋವು, ಹತಾಶೆಯಿಂದ ಮೌನವಾಗಿ ನಾಯಕ ಮತ್ತು ಅವನ ಗೆಳೆಯ ಒಂದು ಕಡೆ ಕುಳಿತುಕೊಳ್ಳುತ್ತಾರೆ.
    ಈಗ ಥಿಯೇಟರ್ ನ ಕತ್ತಲಮಯ ವಾತಾವರಣದಲ್ಲಿ ನಮ್ಮ ಎದುರಿಗೆ ಸಾಲಾಗಿ ಕುಳಿತ ಹುಡುಗಿಯರ ಹರಟೆ, ಕಿಲಕಿಲ ನಗು ಕೇಳಿಸುತ್ತಿಲ್ಲ. ಹಿಂದಿನ ಸೀಟ್ ಗಳಲ್ಲಿ ಕುಳಿತಿರುವ ಹುಡುಗರ ಸಿಳ್ಳೆ, ಚಪ್ಪಾಳೆ ನಿಂತಿದೆ. ಎಲ್ಲರ ಮುಂದೇನಾಗಬಹುದು ಎಂಬ ನೀರವ ಮೌನದಲ್ಲಿ ಸೊಳ್ಳೆಯ ಹಾರ್ಮೋನಿಯಮ್ ವಾದನ ಸ್ಪಷ್ಟವಾಗಿ ಕೇಳುತ್ತದೆ.
     ಬೇಸರದಿಂದ ಮನಸ್ಸು ಭಾರ ಮಾಡಿಕೊಂಡು ಕಾರಿನಲ್ಲಿ ಹಿಂತಿರುಗಿ ಹೊರಟ ಗೆಳೆಯರಿಗೆ ಸಿಗ್ನಲಲ್ಲಿ ಒಂದು ಕಪ್ಪು ಬಣ್ಣದ ಬೆಂಜ್ ಕಾರು ಸಮನಾಂತರ ದೂರದಲ್ಲಿ ನಿಲ್ಲುತ್ತದೆ. ಅದರಲ್ಲಿದ್ದ ನಾಯಿ ನಾಯಕನನ್ನು ನೋಡಿದ ಕೂಡಲೇ ಕಾರಿನಿಂದ ಹಾರಿ ನಾಯಕನ ಕಾರನ್ನು ಹಿಂಬಾಲಿಸುತ್ತದೆ. ಆ ನಾಯಿ ನಾಯಕ ಹಿಂದೆ ನಾಯಕಿಗೆ ಪ್ರೀತಿಯಿಂದ ಕೊಟ್ಟ ಉಡುಗೊರೆಯಾಗಿರುತ್ತದೆ. ಇಬ್ಬರ ಕಾರುಗಳೂ ಒಂದು ಕಡೆ ನಿಲ್ಲುತ್ತವೆ. ನಾಯಕ ಮತ್ತು ನಾಯಕಿ ಇಬ್ಬರೂ ಪರಸ್ಪರ ಮುಖಾಮುಖಿಯಾಗುತ್ತಾರೆ. ಇಬ್ಬರಲ್ಲೂ ಅಜಗಜಾಂತರ ಬದಲಾವಣೆಯಾಗಿರುತ್ತದೆ. ಇಬ್ಬರೂ ಒಂದು ಕ್ಷಣ ಮೌನವಾಗುತ್ತಾರೆ. ಖುಷಿಯಿಂದ ಅಪ್ಪಿಕೊಳ್ಳುತ್ತಾರೆ. ನಾಯಕ ಮತ್ತು ಅವನ ಗೆಳೆಯನನ್ನು ಮನೆಗೆ ಕರೆದುಕೊಂಡು ಹೋದ ನಾಯಕಿ ಅವರನ್ನು ತನ್ನ ತಂದೆ ಮತ್ತು ಅತ್ತೆಗೆ ಪರಿಚಯಿಸುತ್ತಾಳೆ.
    ಒಂದು ಕಡೆ ಎಲ್ಲವನ್ನೂ ಪಡೆಯುತ್ತಾ ಹೋದ ನಾಯಕನ  ಕಥೆಯಾದರೆ, ಇನ್ನೊಂದು ಕಡೆ ಎಲ್ಲವನ್ನೂ ಕಳೆಯುತ್ತಾ ಹೋದ ನಾಯಕಿ. ತನ್ನ ತಂದೆ ಉದ್ಯಮದಲ್ಲಿ ನಷ್ಟ ಅನುಭವಿಸಿ ಎಲ್ಲವನ್ನೂ ಕಳಕೊಂಡಾಗ ತಂದೆಯ ತಂಗಿ ಅಂದರೆ ಅತ್ತೆ ನೆರವಿಗೆ ಬರುತ್ತಾಳೆ. ತನ್ನ ಒಬ್ಬನೇ ಮಗನನ್ನು ಮಗಳಿಗೆ ಅಂದರೆ ನಾಯಕಿಗೆ ಮದುವೆ ಮಾಡಿಸುವಂತೆಯೂ ಕೇಳಿಕೊಂಡಿರುತ್ತಾಳೆ.
   ಈಗ ನಾಯಕಿ ನಾಯಕನನ್ನು ಏನ್ ಮಾಡ್ ಕೊಂಡಿದ್ದೀಯ ಎಂದು ಕೇಳುತ್ತಾಳೆ. ಆಗ ನಾಯಕನ ಅಸಿಸ್ಟೆಂಟ್ ಅವನ್ಗೇನು ಈಗ ಮಿಲಿಯನೇರ್, ’ಹಲೋ’

 ಸಾಫ್ಟ್ವೇರ್ ನ ಜನಕ ಎಂದು ಅಭಿಮಾನದಿಂದ ಹೇಳುತ್ತಾನೆ. ಓಹ್...ಎಂದು ಸಂತೋಷಪಡುತ್ತಾಳೆ. ನಿನ್ನ ಹೆಂಡತಿ ಪುಣ್ಯ ಮಾಡಿರ್ ಬೇಕು ಒಳ್ಳೆಯ ಗಂಡನನ್ನೇ ಪಡೆದಿದ್ದಾಳೆ ಎನ್ನುತ್ತಾಳೆ. ಆಗ ನಾಯಕನ ಅಸಿಸ್ಟೆಂಟ್ ನಾಯಕಿಗೆ ಕೇಳದಂತೆ ನಿನಗೆ ಇನ್ನೂ ಮದುವೆಯಾಗಲಿಲ್ಲವೆಂದು ಹೇಳು ಹೇಳು ಎಂದು ನಾಯಕನನ್ನು ಅವಸರಿಸುತ್ತಾನೆ. ಅಸಿಸ್ಟೆಂಟನ್ನು ಕೈಹಿಡಿದು ಆಚೆ ಕರೆದುಕೊಂಡು ಹೋದ ನಾಯಕ ಇಲ್ಲ... ಕಳೆದ  ಐದು ವರ್ಷಗಳ ಕಾಲದಲ್ಲಿ ಅವಳ ಕಷ್ಟ ಸುಖಗಳಲ್ಲಿ ಇದ್ದದ್ದು ನಾನಲ್ಲ. ಬದಲಾಗಿ ಅವಳ ಅತ್ತೆಯ ಮಗ. ಆದುದರಿಂದ ನನಗೆ ಅವಳನ್ನು ಮದುವೆಯಾಗುವ ಅಹೃತೆ ಇಲ್ಲ ಎನ್ನುತ್ತಾನೆ. ಮದುವೆಯಾಗುವ ಹುಡುಗನಿಗೆ ನಾಯಕನನ್ನು ನಾಯಕಿ ಪರಿಚಯಿಸುತ್ತಾಳೆ. ತನ್ನ ಮದುವೆ ಮುಗಿದ ಮೇಲೇನೆ ಹಿಂದೆ ಹೋಗ ಬೇಕೆನ್ನುತ್ತಾಳೆ. ನಾಯಕ ಆಯ್ತೆನ್ನುತ್ತಾನೆ. ಆದರೆ ನಾಯಕನ ಅಸಿಸ್ಟೆಂಟ್ ಸಾಧುಕೋಕಿಲನಿಗೆ ನಾಯಕ ನಾಯಕಿಯೊಂದಿಗೆ ಮದುವೆಯಾಗದ ಹೊರತು ಒಂದು ಕ್ಷಣನೂ ಇಲ್ಲಿ ನಿಲ್ಲುವುದು ಬೇಡವೆನ್ನುತ್ತಾನೆ.

     ಮದುವೆ ನಡೆಯುತ್ತದೆ. ಯಾರೊಂದಿಗೆ...? 
                                          ನೀವೂ ಒಮ್ಮೆ ಸಿನೆಮಾ ನೋಡಿ


ಭಾನುವಾರ, ಡಿಸೆಂಬರ್ 1, 2013

ಆಘಾತ

ಪಾರತಂತ್ರ್ಯವಾಗಿ ಸಾಕಿದ ಮುದ್ದಿನ ಹಕ್ಕಿ
ಇಂದು ದೂಡಿತೇ ಶರಪಂಜರಕೆ
ತಲ್ವಾರ್ ದಂಪತಿಗಳು ತಮ್ಮ ಮಗಳು ಆರುಷಿಯೊಂದಿಗೆ
ಅಂದು ತೇಲಿತು ಖುಷಿಯ ಲಹರಿ
ಇಂದು ಬರೀ ಹತಾಶೆ, ಆಘಾತ
ಜೇನಗೂಡಿನಂತಹ ಬಾಳು
ಇಂದು ಆಯಿತೇ ಹೋಳು
ನುಚ್ಚುನೂರಾಯಿತೇ ಕಟ್ಟಿಕೊಂಡ ಕನಸು
ಮಣ್ಣುಪಾಲಾಯಿತೇ ಬೆಳೆಸಿಕೊಂಡ ಪ್ರತಿಷ್ಠೆ
ಒಮ್ಮೊಮ್ಮೆ ಶೂನ್ಯವಾಗುವುದೇ  ಬದುಕಿನಲಿ
ಬುದ್ದಿವಂತಿಕೆ, ಪ್ರತಿಭೆ
ಜೀವನ ಹಾವು-ಏಣಿ  ಆಟದಲ್ಲಿ ಪ್ರತ್ಯಕ್ಷ ಸಾಕ್ಷ್ಯವೇ ಬೇಕಿಲ್ಲ ನ್ಯಾಯ-ಅನ್ಯಾಯ ತೀರ್ಮಾನದಲಿ
ಮಾನವೀಯತೆಗೆ ಬೆಲೆ ಕೊಡಲಾದಿತೇ ?
ಸಾಂಧರ್ಬಿಕ ಸಾಕ್ಷ್ಯವೂ ಸಾಕು ಶಿಕ್ಷೆಗೆ ನೂಕಲು
ಕಳೆದು ಹೋದ ಮೇಲೆ ಈ ಪ್ರಪಂಚದಿಂದ
ಬರಬಹುದೇ ಯಾವ ಪ್ರಭಾವದಲ್ಲಾದರೂ ಈ ಭೂಮಿಗೆ
ಮತ್ತೊಮ್ಮೆ ಹೊಸ ಜೀವನಕೆ ?
ಮುಂದುವರಿದಿದೆ ಬದುಕು,
ಪುಸ್ತಕಗಳ ಓದಿಗೆ ಶರಣಾಗಿ ನೋವನು ಮರೆತಿದೆ ಮನಸು
ಅದೇ ವೈದ್ಯ ವ್ರತ್ತಿ ಸೆರೆಮನೆಯಲಿ
ಕೊನೆಯಲ್ಲದ ತೀರ್ಪಿಗೆ ಹೊಸ ತಿರುವಿನ ನಿರೀಕ್ಷೆಯಲಿ.

ಸೋಮವಾರ, ನವೆಂಬರ್ 25, 2013

ಮತ್ತೆ ವಸಂತ.... ಮತ್ತೆ ಹಾಡಿತು ಕೋಗಿಲೆ

ಚಿತ್ರ : ಅಂತರ್ಜಾಲ


ಮಕರಂದ ಪಾನ ಮಾಡಿ ಜೊತೆ ಜೊತೆಯಾಗಿ
ಝೇಂಕಾರ ಮಾಡುತ್ತಾ ನಳನಲಿಯುತ್ತಿರುವ ದುಂಬಿಗಳೇ...
ನೀವಾದರೂ ಹೇಳಬಲ್ಲಿರಾ ಕಾರಣ
ನಾ ಯಾಕೆ ಸಾಹಿತ್ಯಿಕ ವರ್ತುಲದಿಂದ ಹೊರಹೋಗಿದ್ದೆನೆಂದು,
ಬರೆಯುದ ಮರೆತು ಬಿಟ್ಟಿದ್ದೆನೆಂದು.
ಮಿಣುಕುವ ಮಿಂಚುಹುಳುಗಳಿದ್ದರೆ ಸಾಕೆ 'ದೀವಿಟಿಕೆ'ಯಂತೆ ಸ್ಪೂರ್ತಿಯ ತುಂಬಲು ?

ಸ್ವಚ್ಚಂದ ಬಿಳಿ ಸೀರೆಯನ್ನು ಹೊದ್ದು ಮಲಗಿ
ಚಿಂತೆ ಇಲ್ಲದೆ ನಿದ್ದೆ ಹೋಗಿರುವ ಇಬ್ಬನಿಯೇ... ಹೇಳುವೆಯಾ ?
ನಾ ಯಾಕೆ ಬರೆಯಬೇಕೆಂಬ ಮನಸ್ಸ ಚೆಲ್ಲಿ ಹರಿಯಬಿಡಲಿಲ್ಲವೆಂದು,
ಕವಿತೆಗಳ ಗೀಚಬಲ್ಲೆನೆಂಬ ಧೈರ್ಯ ಹೇಗೆ
ಎಲೆಮರೆಯಲ್ಲಿ ಅಡಗಿರುವ ಮಳೆ ಹನಿಯಾಯಿತೆಂದು.

ಗಿಳಿಗಳ ಭಯದಿಂದ ಭೂಮಿಗೆ ಇಳಿದು ಹೋಗ ಬೇಡಿ ಭತ್ತದ ತೆನೆಗೆಳೇ... 
ಅಲ್ಲೇ ನೀರಿನಲ್ಲಿ ನಿಲ್ಲಿ. ಒಮ್ಮೆ ಆಲಿಸಿ 
ಶಬ್ಧಗಳಿಂದ ಶಬ್ಧಗಳನ್ನು ಸೇರಿಸಿ 
ಕವನಗಳನ್ನು ಕಟ್ಟಲಿಲ್ಲವಲ್ಲಾ ಎಂಬ ಕೊರಗನ್ನು 
ಕಲ್ಪನೆ ಮೂಡಲಿಲ್ಲವಲ್ಲಾ ಎಂಬ ನನ್ನ ವ್ಯಥೆಯನ್ನು 
ಬರೆಯಲು ಸಾಧ್ಯವಾಗದ ನನ್ನ ಸಾವಿರ ನೆಪಗಳನ್ನು 
ಉರಿಯುವ ಸಾವಿರ ಸಣ್ಣ ಹಣತೆಗಳು 
ಸೂರ್ಯನ ಬೆಳಕಿನಂತೆ ಸ್ಫೂರ್ತಿಯ ತುಂಬ ಬಲ್ಲುದೇ ?

ಕಳವೆಯ ಎಳೆಯ ಕಾಳಿಗೆ ಆಶಿಸಿ ಬಂದ 
ಎಳೆ ಗಿಳಿಗಳೇ...  ಹೇಳಿ
ಇಂದು ನನ್ನಿಂದ ಕವಿತೆ ಹುಟ್ಟಲು ಕಾರಣವೇನೆಂದು
ಅಕ್ಷರಗಳಿಂದ ಅಕ್ಷರಗಳ ಪೋಣಿಸಲು ಬಂದ ಸ್ಫೂರ್ತಿ ಹೇಗೆಂದು. 
ಸಾವಿರ ನಕ್ಷತ್ರಗಳಿದ್ದರೂ ಚಂದ್ರನೇ ಬೇಕು ತಾನೆ ಬೆಳದಿಂಗಳ ಚೆಲ್ಲಲು 

ಧೂಳು ಹಿಡಿದ ರಟ್ಟಿನ ಹೊತ್ತಗೆಯ 
ತಟ್ಟಿ ತೆಗೆದು, ಕಳೆದು ಹೋದ ನೆನಪುಗಳ 
ಸಾಗರದಲ್ಲಿ ಮಿಂದೆದ್ದು,
ಮತ್ತೆ ಬರೆದೆ ನಾ 
ಓದಿದ ಕೋಗಿಲೆಗೆ ಮತ್ತೆ ವಸಂತ... 
ಮತ್ತೆ ಹಾಡಿತು ಕೋಗಿಲೆ.  

ಶುಕ್ರವಾರ, ನವೆಂಬರ್ 15, 2013

ಸ್ತಬ್ಧಗೊಂಡ ರನ್ ಮೆಷಿನ್...

   ಅಭಿಮಾನಿಗಳಿಂದ ಕ್ರಿಕೆಟ್ ದೇವರೆಂದೇ ಬಿಂಬಿತರಾಗಿರುವ ಸಚಿನ್ ತೆಂಡೂಲ್ಕರ್  ಅವರು ಆಡುತ್ತಿರುವ ೨೦೦ನೇ ಟೆಸ್ಟ್ ಪಂದ್ಯದ ನಂತರ ಮೈದಾನದಲ್ಲಿ ಅವರ ಆಟ ನಮಗೆ ನೋಡಲು ಸಿಗುವುದಿಲ್ಲ. ಮತ್ತೇನಿದ್ದರೂ ತೆಂಡೂಲ್ಕರ್ ಇತಿಹಾಸ. 
     ಬಹುಶಃ ನಾನು ನನ್ನ ಶಾಲಾದಿನಗಳಲ್ಲಿ ರಜೆ ಹಾಕಿದೇನೆಂದರೆ ಅದು ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ನೋಡಲು ಇದ್ದಿರಬೇಕು. ನನ್ನ ಬಾಲ್ಯದ ದಿನಗಳಲ್ಲಿ  ಯಾವುದಾದರು ಮನೆಯಲ್ಲಿ ಕ್ರಿಕೆಟ್ ನೋಡುತ್ತಿದ್ದರೆ, ಸಚಿನ್ ಬ್ಯಾಟಿಂಗ್ ಮಾಡುತ್ತಿದ್ದರೆ, ಅದು ಯಾವುದೇ ಮನೆಯಾಗಿರಲಿ ಒಳಗೆ ಹೋಗಿ ಕ್ರಿಕೆಟ್ ವೀಕ್ಷಿಸುತ್ತಿದ್ದೆ.

ಪ್ರೀತಿಯ ಅಮ್ಮನಿಗಾಗಿ ಸಚಿನ್ ತೆಂಡೂಲ್ಕರ್ ಕೊನೆಯ ಆಟ. ಸಚಿನ್ ವಿದಾಯದ ಪಂದ್ಯವಿದೆಂದು ಕರೆದಿದ್ದರೂ, ಮಾಸ್ಟರ್ ಬ್ಲಾಸ್ಟರ್ ಮಟ್ಟಿಗೆ ಇದು ತಾಯಿಗಾಗಿ ಆಡುತ್ತಿರುವ ಕೊನೆಯ ಟೆಸ್ಟ್. ಬಾಲ್ಯದಲ್ಲಿ ಹಾಗೂ ಕ್ರಿಕೆಟ್ ಕ್ಷೇತ್ರದಲ್ಲಿ ಬೆಳವಣಿಗೆ ಕಾಣುತ್ತಿದ್ದ ಕಾಲದಲ್ಲಿ ಸಚಿನ್ ಆಟವನ್ನು ನೋಡಲು ಅವರ ತಾಯಿ ರಜನಿ ಅವರಿಗೆ ಸಮಯವೇ ಸಿಗುತ್ತಿರಲಿಲ್ಲ.ವಿಶ್ವ ಮೆಚ್ಚಿಕೊಂಡ ಆಟಗಾರನ ತಾಯಿ ರಜನಿ ಅವರು ಈಗ ವ್ಹೀಲ್ ಚೇರ್ ಅವಲಂಬಿಸಿದ್ದಾರೆ. ನಡೆಯುವುದು ಸಾಧ್ಯವಾಗದು.ಮುದ್ದಿನ ಮಗ ಕೊನೆಯ ಬಾರಿಗೆ ಆಡುವುದನ್ನು ನೋಡಲು ಬಯಸಿದ  ತಾಯಿ  ಆಸೆಗೆ ಸ್ಪಂದಿಸಿರುವ ದೇಶದ ಹೆಮ್ಮೆಯ ಪುತ್ರ ತನ್ನ ತಾಯಿಗೆ ಪಂದ್ಯ ನೋಡುವುದಕ್ಕೆ ಅನುಕೂಲವಾಗುವಂತೆ ಮಾಡಿರುವ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದ್ದಾರೆ.


1996 ವಿಶ್ವಕಪ್ ಸೆಮಿಫೈನಲ್ ನಲ್ಲಿ ಸಚಿನ್ ವಿಕೆಟ್ ಬೆನ್ನಿಗೆ 7 ವಿಕೆಟ್ ಒಮ್ಮೆಲೆ ಕಳೆದುಕೊಂಡಾಗ ನಾಟ್ ಔಟ್ ಆಗಿ ಕ್ರಿಸ್ ನಲ್ಲಿದ್ದ ಸಚಿನ್ ಗೆಳೆಯ ವಿನೋದ್ ಕಾಂಬ್ಲಿ ಕೊಲ್ಕತ್ತಾದ ಪ್ರೇಕ್ಷಕರ ದಾಂದಲೆಯಿಂದ ಪಂದ್ಯ ರದ್ದುಗೊಂಡಾಗ ಅತ್ತು ಬಿಟ್ಟ ಕ್ಷಣ. 

ವಿಶ್ವಖ್ಯಾತ ಕ್ರಿಕೆಟಿಗ ಎನಿಸಿದರೂ ಅವರು ಮನೆಯಲ್ಲಿ ತಮ್ಮ ವಿಭಿನ್ನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಮಗನಾಗಿ, ಸಹೋದರನಾಗಿ, ಪತಿಯಾಗಿ, ತಂದೆಯಾಗಿ ಪ್ರಭಾವಿಯಾಗಿ ಹಾಗೂ ಮಾದರಿಯಾಗಿ ನಿಂತಿದ್ದಾರೆ. ಆದ್ದರಿಂದ ಸಚಿನ್ ವತ್ತಿ ಹಾಗೂ ವೈಯಕ್ತಿಕ ಜೀವನ ಎರಡೂ ಆದರ್ಶವಾಗುವಂಥದ್ದು.

ಸಚಿನ್ ಗೆ ಅಭಿಮಾನಿಗಳ ಅಂಕ:
ಬ್ಯಾಟಿಂಗ್ ಶೈಲಿ             ಸ್ವಭಾವ               ವ್ಯಕ್ತಿತ್ವ
   35%                           17%                    48%

video 

                                                  ವಿಡಿಯೋ: ಮೊಹಮ್ಮದ್ ರಶೀಧ್
ಸಚಿನ್ ಆರಂಭದ ದಿನಗಳಲ್ಲಿ ಆಡುತ್ತಿದ್ದುದ್ದನ್ನು ನೆರೆಮನೆಯ ಚಿಕ್ಕ ಕಪ್ಪು ಬಿಳುಪು ದೂರದರ್ಶನದಲ್ಲಿ ನೋಡುತ್ತಿದ್ದರೆ,( ಕೆಲವೂಮ್ಮೆ ಆ ಮನೆಯವರು ನನಗೆ ಗೊತ್ತಾಗದ ಹಾಗೆ ಟಿ. ವಿ. ಆಫ್ ಮಾಡಿದ್ದು ಇದೆ) ಕೊನೆಯ ಆಟವನ್ನು ಕಂಪ್ಯೂಟರ್ ನಲ್ಲಿ ನೋಡಿ ಸಂತೋಷ ಪಟ್ಟೆ. 
ಸಚಿನ್ ತನ್ನ ಕುಟುಂಬದ  ಜೊತೆ
ತನ್ನ ಬಾಲ್ಯದ ಗೆಳೆಯ ವಿನೋದ್ ಕಾಂಬ್ಲಿಯೊಂದಿಗೆ

 ಸರ್ ಡಾನ್ ಬ್ರಾಡ್ಮನ್ ನೊಂದಿಗೆ
ಪತ್ನಿ ಅಂಜಲಿಯೊಂದಿಗೆ ತನ್ನ ಹುಟ್ಟು ಹಬ್ಬದ ಸಂದರ್ಭ
ಬಾಲ್ಯದಲ್ಲಿ ಸಚಿನ್

ನಿರಂತರ ಆಟ ಹಾಗೂ ಪ್ರವಾಸದ ಒತ್ತಡದ ನಡುವೆಯೂ ತೆಂಡೂಲ್ಕರ್ ಸದಾ ಕುಟುಂಬದ ಜತೆಗೆ ಬಲವಾದ ಬೆಸುಗೆಯನ್ನು ಕಾಯ್ದುಕೊಂಡು ಬಂದವರು. ಕ್ರಿಕೆಟ್ ಸರಣಿಯಲ್ಲಿ ಆಡುತ್ತಿದ್ದ ಸಂದರ್ಭದಲ್ಲಿ ತಂದೆ ರಮೇಶ್ ನಿಧನರಾದಾಗ ಬ್ಯಾಟಿಂಗ್ ತಮ್ಮ ಕರ್ತವ್ಯವೆಂದು ಶತಕ ಗಳಿಸಿ, ಅದನ್ನು ತಂದೆಗೆ ಅರ್ಪಿಸಿದ್ದರು. ತನ್ನ ಸಹೋದರ ಅಜಿತ್ ಜತೆಗೆ ಬಾಲ್ಯದಿಂದ ಇಲ್ಲಿಯವರೆಗೆ ಆತ್ಮೀಯ ಬಾಂಧವ್ಯವನ್ನು ಕಾಯ್ದುಕೊಂಡು ಬಂದಿದ್ದಾರೆ.

 
As Tendulkar bids cricket good bye after his ongoing farewell 200th Test in Mumbai, Dr Jagannath, who is also chairman of the Oncology department at Lilavati hospital in Mumbai, saluted the feat by himself committing to help 200 children who desperately need assistance in their battle against cancer.

ತೆಂಡೂಲ್ಕರ್ ತಮ್ಮನ್ನು ಕೆಣಕಿದ ಬೌಲರ್ ಗಳಿಗೆ ಮುಂದಿನ ಪಂದ್ಯಗಳಲ್ಲಿ ಸಿಂಹ ಸ್ವಪ್ನರಾಗುತ್ತಿದ್ದರು.  ಅದರ ಒಂದು  ಝೆಲಕ್  ಇಲ್ಲಿದೆ. 

video
                                         ಜಿಂಬಾಬ್ವೆಯಯ ಓಲಂಗ ಬೌಲಿಂಗನ್ನು ಪುಡಿಗಟ್ಟಿದ ಪರಿ 

ಸಚಿನ್ ತೆಂಡೂಲ್ಕರ್ ಹೇಳುವಂತೆ,
''24 ವರ್ಷ ನನ್ನ ಆಟಕ್ಕೆ ಬೆಂಬಲ ನೀಡಿದ ಎಲ್ಲರಿಗೂ ನನ್ನ ಹೃದಯಾಂತರಾಳದ ನಮನ. ನನ್ನ ಸಂದೇಶಗಳು ನಿಮಗೆ ಇಷ್ಟವಾದವೆಂದು ನಂಬುತ್ತೇನೆ..''