ಸೋಮವಾರ, ನವೆಂಬರ್ 25, 2013

ಮತ್ತೆ ವಸಂತ.... ಮತ್ತೆ ಹಾಡಿತು ಕೋಗಿಲೆ

ಚಿತ್ರ : ಅಂತರ್ಜಾಲ


ಮಕರಂದ ಪಾನ ಮಾಡಿ ಜೊತೆ ಜೊತೆಯಾಗಿ
ಝೇಂಕಾರ ಮಾಡುತ್ತಾ ನಳನಲಿಯುತ್ತಿರುವ ದುಂಬಿಗಳೇ...
ನೀವಾದರೂ ಹೇಳಬಲ್ಲಿರಾ ಕಾರಣ
ನಾ ಯಾಕೆ ಸಾಹಿತ್ಯಿಕ ವರ್ತುಲದಿಂದ ಹೊರಹೋಗಿದ್ದೆನೆಂದು,
ಬರೆಯುದ ಮರೆತು ಬಿಟ್ಟಿದ್ದೆನೆಂದು.
ಮಿಣುಕುವ ಮಿಂಚುಹುಳುಗಳಿದ್ದರೆ ಸಾಕೆ 'ದೀವಿಟಿಕೆ'ಯಂತೆ ಸ್ಪೂರ್ತಿಯ ತುಂಬಲು ?

ಸ್ವಚ್ಚಂದ ಬಿಳಿ ಸೀರೆಯನ್ನು ಹೊದ್ದು ಮಲಗಿ
ಚಿಂತೆ ಇಲ್ಲದೆ ನಿದ್ದೆ ಹೋಗಿರುವ ಇಬ್ಬನಿಯೇ... ಹೇಳುವೆಯಾ ?
ನಾ ಯಾಕೆ ಬರೆಯಬೇಕೆಂಬ ಮನಸ್ಸ ಚೆಲ್ಲಿ ಹರಿಯಬಿಡಲಿಲ್ಲವೆಂದು,
ಕವಿತೆಗಳ ಗೀಚಬಲ್ಲೆನೆಂಬ ಧೈರ್ಯ ಹೇಗೆ
ಎಲೆಮರೆಯಲ್ಲಿ ಅಡಗಿರುವ ಮಳೆ ಹನಿಯಾಯಿತೆಂದು.

ಗಿಳಿಗಳ ಭಯದಿಂದ ಭೂಮಿಗೆ ಇಳಿದು ಹೋಗ ಬೇಡಿ ಭತ್ತದ ತೆನೆಗೆಳೇ... 
ಅಲ್ಲೇ ನೀರಿನಲ್ಲಿ ನಿಲ್ಲಿ. ಒಮ್ಮೆ ಆಲಿಸಿ 
ಶಬ್ಧಗಳಿಂದ ಶಬ್ಧಗಳನ್ನು ಸೇರಿಸಿ 
ಕವನಗಳನ್ನು ಕಟ್ಟಲಿಲ್ಲವಲ್ಲಾ ಎಂಬ ಕೊರಗನ್ನು 
ಕಲ್ಪನೆ ಮೂಡಲಿಲ್ಲವಲ್ಲಾ ಎಂಬ ನನ್ನ ವ್ಯಥೆಯನ್ನು 
ಬರೆಯಲು ಸಾಧ್ಯವಾಗದ ನನ್ನ ಸಾವಿರ ನೆಪಗಳನ್ನು 
ಉರಿಯುವ ಸಾವಿರ ಸಣ್ಣ ಹಣತೆಗಳು 
ಸೂರ್ಯನ ಬೆಳಕಿನಂತೆ ಸ್ಫೂರ್ತಿಯ ತುಂಬ ಬಲ್ಲುದೇ ?

ಕಳವೆಯ ಎಳೆಯ ಕಾಳಿಗೆ ಆಶಿಸಿ ಬಂದ 
ಎಳೆ ಗಿಳಿಗಳೇ...  ಹೇಳಿ
ಇಂದು ನನ್ನಿಂದ ಕವಿತೆ ಹುಟ್ಟಲು ಕಾರಣವೇನೆಂದು
ಅಕ್ಷರಗಳಿಂದ ಅಕ್ಷರಗಳ ಪೋಣಿಸಲು ಬಂದ ಸ್ಫೂರ್ತಿ ಹೇಗೆಂದು. 
ಸಾವಿರ ನಕ್ಷತ್ರಗಳಿದ್ದರೂ ಚಂದ್ರನೇ ಬೇಕು ತಾನೆ ಬೆಳದಿಂಗಳ ಚೆಲ್ಲಲು 

ಧೂಳು ಹಿಡಿದ ರಟ್ಟಿನ ಹೊತ್ತಗೆಯ 
ತಟ್ಟಿ ತೆಗೆದು, ಕಳೆದು ಹೋದ ನೆನಪುಗಳ 
ಸಾಗರದಲ್ಲಿ ಮಿಂದೆದ್ದು,
ಮತ್ತೆ ಬರೆದೆ ನಾ 
ಓದಿದ ಕೋಗಿಲೆಗೆ ಮತ್ತೆ ವಸಂತ... 
ಮತ್ತೆ ಹಾಡಿತು ಕೋಗಿಲೆ.  

ಶುಕ್ರವಾರ, ನವೆಂಬರ್ 15, 2013

ಸ್ತಬ್ಧಗೊಂಡ ರನ್ ಮೆಷಿನ್...

   ಅಭಿಮಾನಿಗಳಿಂದ ಕ್ರಿಕೆಟ್ ದೇವರೆಂದೇ ಬಿಂಬಿತರಾಗಿರುವ ಸಚಿನ್ ತೆಂಡೂಲ್ಕರ್  ಅವರು ಆಡುತ್ತಿರುವ ೨೦೦ನೇ ಟೆಸ್ಟ್ ಪಂದ್ಯದ ನಂತರ ಮೈದಾನದಲ್ಲಿ ಅವರ ಆಟ ನಮಗೆ ನೋಡಲು ಸಿಗುವುದಿಲ್ಲ. ಮತ್ತೇನಿದ್ದರೂ ತೆಂಡೂಲ್ಕರ್ ಇತಿಹಾಸ. 
     ಬಹುಶಃ ನಾನು ನನ್ನ ಶಾಲಾದಿನಗಳಲ್ಲಿ ರಜೆ ಹಾಕಿದೇನೆಂದರೆ ಅದು ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ನೋಡಲು ಇದ್ದಿರಬೇಕು. ನನ್ನ ಬಾಲ್ಯದ ದಿನಗಳಲ್ಲಿ  ಯಾವುದಾದರು ಮನೆಯಲ್ಲಿ ಕ್ರಿಕೆಟ್ ನೋಡುತ್ತಿದ್ದರೆ, ಸಚಿನ್ ಬ್ಯಾಟಿಂಗ್ ಮಾಡುತ್ತಿದ್ದರೆ, ಅದು ಯಾವುದೇ ಮನೆಯಾಗಿರಲಿ ಒಳಗೆ ಹೋಗಿ ಕ್ರಿಕೆಟ್ ವೀಕ್ಷಿಸುತ್ತಿದ್ದೆ.

ಪ್ರೀತಿಯ ಅಮ್ಮನಿಗಾಗಿ ಸಚಿನ್ ತೆಂಡೂಲ್ಕರ್ ಕೊನೆಯ ಆಟ. ಸಚಿನ್ ವಿದಾಯದ ಪಂದ್ಯವಿದೆಂದು ಕರೆದಿದ್ದರೂ, ಮಾಸ್ಟರ್ ಬ್ಲಾಸ್ಟರ್ ಮಟ್ಟಿಗೆ ಇದು ತಾಯಿಗಾಗಿ ಆಡುತ್ತಿರುವ ಕೊನೆಯ ಟೆಸ್ಟ್. ಬಾಲ್ಯದಲ್ಲಿ ಹಾಗೂ ಕ್ರಿಕೆಟ್ ಕ್ಷೇತ್ರದಲ್ಲಿ ಬೆಳವಣಿಗೆ ಕಾಣುತ್ತಿದ್ದ ಕಾಲದಲ್ಲಿ ಸಚಿನ್ ಆಟವನ್ನು ನೋಡಲು ಅವರ ತಾಯಿ ರಜನಿ ಅವರಿಗೆ ಸಮಯವೇ ಸಿಗುತ್ತಿರಲಿಲ್ಲ.ವಿಶ್ವ ಮೆಚ್ಚಿಕೊಂಡ ಆಟಗಾರನ ತಾಯಿ ರಜನಿ ಅವರು ಈಗ ವ್ಹೀಲ್ ಚೇರ್ ಅವಲಂಬಿಸಿದ್ದಾರೆ. ನಡೆಯುವುದು ಸಾಧ್ಯವಾಗದು.ಮುದ್ದಿನ ಮಗ ಕೊನೆಯ ಬಾರಿಗೆ ಆಡುವುದನ್ನು ನೋಡಲು ಬಯಸಿದ  ತಾಯಿ  ಆಸೆಗೆ ಸ್ಪಂದಿಸಿರುವ ದೇಶದ ಹೆಮ್ಮೆಯ ಪುತ್ರ ತನ್ನ ತಾಯಿಗೆ ಪಂದ್ಯ ನೋಡುವುದಕ್ಕೆ ಅನುಕೂಲವಾಗುವಂತೆ ಮಾಡಿರುವ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದ್ದಾರೆ.


1996 ವಿಶ್ವಕಪ್ ಸೆಮಿಫೈನಲ್ ನಲ್ಲಿ ಸಚಿನ್ ವಿಕೆಟ್ ಬೆನ್ನಿಗೆ 7 ವಿಕೆಟ್ ಒಮ್ಮೆಲೆ ಕಳೆದುಕೊಂಡಾಗ ನಾಟ್ ಔಟ್ ಆಗಿ ಕ್ರಿಸ್ ನಲ್ಲಿದ್ದ ಸಚಿನ್ ಗೆಳೆಯ ವಿನೋದ್ ಕಾಂಬ್ಲಿ ಕೊಲ್ಕತ್ತಾದ ಪ್ರೇಕ್ಷಕರ ದಾಂದಲೆಯಿಂದ ಪಂದ್ಯ ರದ್ದುಗೊಂಡಾಗ ಅತ್ತು ಬಿಟ್ಟ ಕ್ಷಣ. 

ವಿಶ್ವಖ್ಯಾತ ಕ್ರಿಕೆಟಿಗ ಎನಿಸಿದರೂ ಅವರು ಮನೆಯಲ್ಲಿ ತಮ್ಮ ವಿಭಿನ್ನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಮಗನಾಗಿ, ಸಹೋದರನಾಗಿ, ಪತಿಯಾಗಿ, ತಂದೆಯಾಗಿ ಪ್ರಭಾವಿಯಾಗಿ ಹಾಗೂ ಮಾದರಿಯಾಗಿ ನಿಂತಿದ್ದಾರೆ. ಆದ್ದರಿಂದ ಸಚಿನ್ ವತ್ತಿ ಹಾಗೂ ವೈಯಕ್ತಿಕ ಜೀವನ ಎರಡೂ ಆದರ್ಶವಾಗುವಂಥದ್ದು.

ಸಚಿನ್ ಗೆ ಅಭಿಮಾನಿಗಳ ಅಂಕ:
ಬ್ಯಾಟಿಂಗ್ ಶೈಲಿ             ಸ್ವಭಾವ               ವ್ಯಕ್ತಿತ್ವ
   35%                           17%                    48%

 

                                                  ವಿಡಿಯೋ: ಮೊಹಮ್ಮದ್ ರಶೀಧ್
ಸಚಿನ್ ಆರಂಭದ ದಿನಗಳಲ್ಲಿ ಆಡುತ್ತಿದ್ದುದ್ದನ್ನು ನೆರೆಮನೆಯ ಚಿಕ್ಕ ಕಪ್ಪು ಬಿಳುಪು ದೂರದರ್ಶನದಲ್ಲಿ ನೋಡುತ್ತಿದ್ದರೆ,( ಕೆಲವೂಮ್ಮೆ ಆ ಮನೆಯವರು ನನಗೆ ಗೊತ್ತಾಗದ ಹಾಗೆ ಟಿ. ವಿ. ಆಫ್ ಮಾಡಿದ್ದು ಇದೆ) ಕೊನೆಯ ಆಟವನ್ನು ಕಂಪ್ಯೂಟರ್ ನಲ್ಲಿ ನೋಡಿ ಸಂತೋಷ ಪಟ್ಟೆ. 
ಸಚಿನ್ ತನ್ನ ಕುಟುಂಬದ  ಜೊತೆ
ತನ್ನ ಬಾಲ್ಯದ ಗೆಳೆಯ ವಿನೋದ್ ಕಾಂಬ್ಲಿಯೊಂದಿಗೆ

 ಸರ್ ಡಾನ್ ಬ್ರಾಡ್ಮನ್ ನೊಂದಿಗೆ
ಪತ್ನಿ ಅಂಜಲಿಯೊಂದಿಗೆ ತನ್ನ ಹುಟ್ಟು ಹಬ್ಬದ ಸಂದರ್ಭ
ಬಾಲ್ಯದಲ್ಲಿ ಸಚಿನ್

ನಿರಂತರ ಆಟ ಹಾಗೂ ಪ್ರವಾಸದ ಒತ್ತಡದ ನಡುವೆಯೂ ತೆಂಡೂಲ್ಕರ್ ಸದಾ ಕುಟುಂಬದ ಜತೆಗೆ ಬಲವಾದ ಬೆಸುಗೆಯನ್ನು ಕಾಯ್ದುಕೊಂಡು ಬಂದವರು. ಕ್ರಿಕೆಟ್ ಸರಣಿಯಲ್ಲಿ ಆಡುತ್ತಿದ್ದ ಸಂದರ್ಭದಲ್ಲಿ ತಂದೆ ರಮೇಶ್ ನಿಧನರಾದಾಗ ಬ್ಯಾಟಿಂಗ್ ತಮ್ಮ ಕರ್ತವ್ಯವೆಂದು ಶತಕ ಗಳಿಸಿ, ಅದನ್ನು ತಂದೆಗೆ ಅರ್ಪಿಸಿದ್ದರು. ತನ್ನ ಸಹೋದರ ಅಜಿತ್ ಜತೆಗೆ ಬಾಲ್ಯದಿಂದ ಇಲ್ಲಿಯವರೆಗೆ ಆತ್ಮೀಯ ಬಾಂಧವ್ಯವನ್ನು ಕಾಯ್ದುಕೊಂಡು ಬಂದಿದ್ದಾರೆ.

 
As Tendulkar bids cricket good bye after his ongoing farewell 200th Test in Mumbai, Dr Jagannath, who is also chairman of the Oncology department at Lilavati hospital in Mumbai, saluted the feat by himself committing to help 200 children who desperately need assistance in their battle against cancer.

ತೆಂಡೂಲ್ಕರ್ ತಮ್ಮನ್ನು ಕೆಣಕಿದ ಬೌಲರ್ ಗಳಿಗೆ ಮುಂದಿನ ಪಂದ್ಯಗಳಲ್ಲಿ ಸಿಂಹ ಸ್ವಪ್ನರಾಗುತ್ತಿದ್ದರು.  ಅದರ ಒಂದು  ಝೆಲಕ್  ಇಲ್ಲಿದೆ. 

                                         ಜಿಂಬಾಬ್ವೆಯಯ ಓಲಂಗ ಬೌಲಿಂಗನ್ನು ಪುಡಿಗಟ್ಟಿದ ಪರಿ 

ಸಚಿನ್ ತೆಂಡೂಲ್ಕರ್ ಹೇಳುವಂತೆ,
''24 ವರ್ಷ ನನ್ನ ಆಟಕ್ಕೆ ಬೆಂಬಲ ನೀಡಿದ ಎಲ್ಲರಿಗೂ ನನ್ನ ಹೃದಯಾಂತರಾಳದ ನಮನ. ನನ್ನ ಸಂದೇಶಗಳು ನಿಮಗೆ ಇಷ್ಟವಾದವೆಂದು ನಂಬುತ್ತೇನೆ..''