'ಬುಗುರಿ' ಪ್ರೀತಿಯ ಸುತ್ತಾ....
ಕೆಪಿಟಿಸಿಎಲ್
’ಅಕೌಂಟ್ಸ್ ಆಫಿಸರ್’ ನೇಮಕಾತಿಗೆ ನಡೆಸಿದ ಪರೀಕ್ಷೆಯಲ್ಲಿ ನಾನು ಹೆಚ್ಚು ಅಂಕ ಗಳಿಸಿದ್ದರಿಂದ ಮೂಲ
ದಾಖಲಾತಿ ಪರಿಶೀಲನೆಗೆ ನನ್ನನ್ನು ಕರೆದಿದ್ದರು. ಪ್ರಯಾಣದಲ್ಲಿ ಯಾವುದೇ ರೀತಿಯಲ್ಲಿ ತೊಂದರೆಯಾಗಿ
ಸಮಯಕ್ಕೆ ಸರಿಯಾಗಿ ಹಾಜರಾಗಳು ಕಷ್ಟವಾಗಬಹುದೆಂದು ಯೋಚಿಸಿ, ಮನಸ್ಸಲ್ಲಿ
ನೂರಾರು ಕನಸ್ಸುಗಳನ್ನು ಹೊತ್ತು ಎಲ್ಲಾ ಸರ್ಟಿಫಿಕೇಟುಗಳನ್ನು ಪುನಾಃ ಪುನಃ ಪರಿಶೀಲಿಸಿ, ಒಂದು
ದಿನ ಮುಂಚಿತವಾಗಿಯೇ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದೆ. ಒಂದು ದಿನ ಮುಂಚಿತವಾಗಿ ಬೆಂಗಳೂರಿಗೆ ಬಂದ್ದಿದ್ದರಿಂದ, ಸಮಯ ಕಳೆಯಲು
ಮಂತ್ರಿ ಮಾಲ್ ಗೆ ಗೆಳೆಯನೊಂದಿಗೆ ಬಂದಿದ್ದೆ. ಮನಸ್ಸಿನಲ್ಲಿ ಯಾವುದೋ ರೀತಿಯ ತಳಮಳ, ನಾಳೆ ಎಲ್ಲವೂ
ಸರಿಯಾಗಿರುತ್ತದೋ ಇಲ್ಲವೋ ಎಂಬ ಆತಂಕದಿಂದಲೇ ಆ ಮಾಲ್ ನಲ್ಲಿರುವ ಥಿಯೇಟರಿನ ಸ್ಕ್ರೀನ್ ನಂಬ್ರ ೬ ನ
ಕತ್ತಲು ಕೋಣೆಗೆ ಗೆಳೆಯನೊಂದಿಗೆ ಉದ್ವೇಗದಿಂದಲೇ ಹೆಜ್ಜೆ ಕಾಕಿದ್ದೆ.
ಅದು ಗಣೇಶ್ ಅಭಿನಯದ
’ಬುಗುರಿ’ ನಿನೆಮಾ. ಸಿನೆಮಾ ನೋಡಿ ಹೊರ ಬರುತ್ತಿದ್ದಂತೆ, ವಾಹ್..
ಚೆನ್ನಾಗಿತ್ತಲ್ವ ಅನ್ನಿಸಿತು. ನನ್ನ ಜೀವನಕ್ಕೂ ಈ ಸಿನೆಮಾ ಎಲ್ಲೋ ಒಂದು ಕಡೆ ಹತ್ತಿರವಾಗಿದೆಯಲ್ಲಾ
ಅನ್ನಿಸಿತು. ನಿಜವಾಗಿಯೂ ಈ ಸಿನೆಮಾ ಶತದಿನ ಪೂರೈಸಬೇಕಿತ್ತು. ಅದೇಕೋ ’ಉಪ್ಪಿ೨’ ಮತ್ತು ’ರಂಗಿತರಂಗ’ದ
ಮಧ್ಯೆ ಬುಗುರಿ ರಭಸವಾಗಿ ತಿರುಗಲೇ ಇಲ್ಲ ಅನಿಸುತ್ತದೆ.
ಸಿನೆಮಾದ ಕೊನೆಯಲ್ಲಿ
ಬರುವ ಸಂದೇಶ "ನಿಮ್ಮ ಜೀವನದಲ್ಲೂ ಇಂಥ ಘಟನೆ
ಸಂಭವಿಸಿರಬಹುದು...... ಎಂಬ ವಾಕ್ಯದೊಂದಿಗೆ ಪ್ರಾರಂಭವಾಗಿ ಸುಮಾರು ಒಂದು ನಿಮಿಷದಷ್ಟು ಓದಲಿರುವ
ವಾಕ್ಯಗಳನ್ನು ವೀಕ್ಷಕರೆಲ್ಲರೂ ಎದ್ದು ನಿಂತು ಓದುತ್ತಲೇ ನಿಧಾನವಾಗಿ ಥಿಯೇಟರಿಂದ ಹೊರಗೆ ಹೋಗುವ ಬಾಗಿಲ
ಕಡೆಗೆ ಹೆಜ್ಜೆ ಹಾಕುತ್ತಾರೆ. ಜೀವನದಲ್ಲಿ ಯಾವುದೋ ಕಾರಣಕ್ಕೆ ಪ್ರೀತಿಯನ್ನು ತ್ಯಾಗ ಮಾಡಬೇಕಾಗಿ ಬಂದಾಗ
ಹತಾಶರಾಗ ಬೇಕೆಂದಿಲ್ಲ, ಈ ಸಿನೆಮಾ ನೋಡಿದರಾಯಿತು. ಪ್ರೀತಿಸಿ ಕೈಕೊಟ್ಟ ಹುಡುಗ/ಹುಡುಗಿ
ದ್ವೇಷ ಸಾಧಿಸಲು ಹೋಗುವ ಮುನ್ನ ಈ ಸಿನೆಮಾ ನೋಡ ಬೇಕು. ಇತ್ತೀಚಿನ ಒಂದು ಉದಾಹರಣೆ: ಹುಡುಗ ಉನ್ನತ
ಉದ್ಯೋಗದಲ್ಲಿದ್ದು, ಹಲವಾರು ವರ್ಷಗಳ ಹಿಂದೆ ಪ್ರೀತಿಸಿದ ಹುಡುಗಿ ಫೇಸ್ ಬುಕ್ ನಲ್ಲಿ
ಸಿಕ್ಕಾಗ, ಹುಡುಗಿಗೆ ಮದುವೆಯಾಗಿದ್ದರೂ, ಪತಿಯನ್ನು
ಭಯೋತ್ಪಾದಕಂತೆ ಬಿಂಬಿಸಿ ಜೈಲಿಗಟ್ಟಲು ಪ್ರಯತ್ನಿಸಿ ಹುಡುಗಿಯನ್ನು ಪಡೆಯಲು ಬಯಸುವಂತವನು ಈ ಸಿನೆಮಾವನ್ನೊಮ್ಮೆ
ನೋಡಬೇಕು. ಒಟ್ಟಾರೆ ಎಲ್ಲರು ಕುಟುಂಬ ಸಮೇತರಾಗಿ ನೋಡಬೇಕಾದ
ಒಂದು ಒಳ್ಳೆಯ ಸಿನೆಮಾ. ಒಂದು ಒಳ್ಳೆಯ ಮಾತು, ಒಂದು ಘಟನೆ ಜೀವನದ ದಿಕ್ಕನ್ನೇ ಬದಲಿಸಬಹುದು. ನಾವು
ನೋಡಿದ ಸಿನೆಮಾ ಹೇಗಿರಬೇಕೆಂದರೆ ಅದು ನಮ್ಮನ್ನು ಬಹಳ ದಿನಗಳವರೆಗೆ ಕಾಡುತ್ತಿರ ಬೇಕು.
ನನಗೆ ಯಾಕೋ ಈ
ಸಿನೆಮಾದ ಕಥೆ ಹೇಳಲೇ ಬೇಕೆನಿಸುತ್ತದೆ. ಕಥೆ ಹೀಗಿದೆ... ಕೇಳಿ:
ಮಲೇಷಿಯಾದಲ್ಲಿ
ನೆಲೆಸಿರುವ ನಾಯಕ ಗಣೇಶ್ ಐಷಾರಾಮಿ ಕಾರಿನಿಂದ ಇಳಿಯುತ್ತಾನೆ. ಹಿಂದೆಯೇ ಅವನ ಅಷಿಸ್ಟೆಂಟ್ ಸಾಧುಕೋಕಿಲ
ಶೂಟ್ ಕೇಸ್ ನೊಂದಿಗೆ ಇನ್ನೊಂದು ಕಾರಿನಿಂದ ಇಳಿಯುತ್ತಾನೆ. ’ಹಲೋ’ ಎನ್ನುವ ಸಾಫ್ಟ್ವೇರನ್ನು ಡೆವಲಪ್
ಮಾಡಿರುವ ನಾಯಕ ಆ ಸಾಫ್ಟ್ವೇರ್ ಇದ್ದರೆ ಮೊಬೈಲ್ ಬ್ಯಾಟರಿ ಚಾರ್ಜ್ ಮಾಡುವ ಅಗತ್ಯವಿಲ್ಲವೆಂದು ಕಂಡುಹಿಡಿಯುತ್ತಾನೆ.
ಈಗ ಒಳ್ಳೆಯ ಹೆಸರು ಮತ್ತು ಶ್ರಿಮಂತಿಕೆಯನ್ನು ಗಳಿಸಿರುತ್ತಾನೆ. ತನ್ನ ತಂಗಿಯ ಮದುವೆಯನ್ನು ಅದ್ದೂರಿಯಾಗಿಯೇ
ಮಾಡಿರುತ್ತಾನೆ. ನಾಯಕನ ಮದುವೆಯ ಸಿಧ್ದತೆ ನಡೆಯುತ್ತಿರುತ್ತದೆ. ಒಂದು ಬೆಟ್ಟದ ತುದಿಯಲ್ಲಿ ಪ್ರಕೃತಿಯ
ರಮಣೀಯ ವಾತಾವರಣದಲ್ಲಿ ತಾನು ಮದುವೆಯಾಗ ಬೇಕಾದ ಹುಡುಗಿ (ಎರಡನೆ ನಾಯಕಿ) ನಾಯಕನ ಹೆಸರನ್ನು ಜೋರಾಗಿ
ಕರೆಯುತ್ತಾಳೆ. ಅದು ಪ್ರತಿಧ್ವನಿಸುವುದನ್ನು ಕೇಳಿ ಅನಂದ ಪಡುತ್ತಾಳೆ. ಆಗ ನಾಯಕನೂ ಹುಡುಗಿಯ ಹೆಸರನ್ನು
ಜೋರಾಗಿ ಕರೆಯುತ್ತಿರುವಾಗಲೇ ತನಗೆ ಅರಿವಿಲ್ಲದಂತೆ ಬೇರೊಂದು ಹುಡುಗಿಯ ಹೆಸರನ್ನು ಕರೆಯುತ್ತಾನೆ.
ಅದನ್ನು ಕೇಳಿ ತಬ್ಬಿಬ್ಬಾದ ಹುಡುಗಿ, ಮೌನವಾದ ನಾಯಕ. ಐದು ವರ್ಷದ ಹಿಂದೆ ನಡೆದ ಕಥೆ ಹೇಳುತ್ತಾನೆ.
ನಾಯಕನ ತಂದೆ
ತನ್ನ ಮಗನ ಇಂಜಿನಿಯರಿಂಗ್ ಓದಿಗಾಗಿ ಲಕ್ಷಾಂತರ ಹಣ ಸಾಲ ಮಾಡಿ ತನ್ನ ಮಗನನ್ನು ದೊಡ್ಡ ಇಂಜಿನಿಯರ್
ಮಾಡುವ ಕನಸು ಕಂಡಿರುತ್ತಾನೆ. ತನ್ನ ಮಗನನ್ನು ತುಂಬಾ ಪ್ರೀತಿಸಿರುತ್ತಾನೆ. ತನ್ನ ಮಗನ ಇಂಜಿನಿಯರಿಂಗ್
ಕಲಿತು ಮುಗಿದರೆ ಸಾಕು ತಾನು ಮತ್ತೆ ನಿರಾಳವೆಂದು ಅಭಿಮಾನದಿಂದ ಹೇಳುತ್ತಿರುತ್ತಾನೆ. ಹುಡುಗಾಟದವನಾದ ನಾಯಕ ಜಾಲಿಯಾಗಿ ತನ್ನ ಗೆಳೆಯ ಸಾಧುಕೋಕಿಲನೊಂದಿಗೆ
ಸೇರಿ ಮಾಡುವ ವಿಭಿನ್ನ ನಡವಲಿಕೆಯಿಂದ ಒಂದು ಹುಡುಗಿಗೆ (ಮೊದಲನೆ ನಾಯಕಿ) ಹತ್ತಿರವಾಗುತ್ತಾ ಹೋಗುತ್ತಾನೆ. ಲಿಂಗು ಹೆಸರಿನ ಹುಡುಗಿ ನಾಯಕಿಯ ಸ್ನೇಹಿತೆ
ಮತ್ತು ನಾಯಕನ ಗೆಳೆಯ ಸಾಧುಕೋಕಿಲನ ನಡುವೆ ನಡೆಯುವ ನಗು ತರುವಂತ ದ್ರಶ್ಯಗಳು, ಮಾತುಗಳು ಎಂಥವರನ್ನೂ
ನಗಿಸುತ್ತದೆ. ನಾಯಕ ಮತ್ತು ನಾಯಕಿ ಗಾಢವಾಗಿ ಪ್ರೀತಿಸಿ, ಇನ್ನೇನು ನಾಯಕಿ ನಾಯಕನೊಂದಿಗೆ ಮನೆ ಬಿಟ್ಟು
ಬರಲು ತಯಾರಾಗಿರುತ್ತಾಳೆ.
ಇಂಜಿನಿಯರಿಂಗ್
ಪದವಿಯ ಫಲಿತಾಂಶ ನೋಡಿ ಮನೆಯ ಒಳಗೆ ನಿಧಾನವಾಗಿ ಕಾಲಿಡುತ್ತಿರುವ ನಾಯಕನ ಮುಖ ಬಾಡಿ ಹೋಗಿದೆ. ಮೌನವಾಗಿದ್ದಾನೆ.
ಮನೆಯ ಒಳಗೆ ಎಲ್ಲರೂ ನಾಯಕನ ಪದವಿಯ ಫಲಿತಾಂಶ ತಿಳಿದುಕೊಳ್ಳಲು ಕಾಯುತ್ತಾ, ಸಂಭ್ರಮದಿಂದ ಹಬ್ಬ ಮಾಡಲು
ಕಾಯುತ್ತಿರುತ್ತಾರೆ. ನಾಯಕನ ತಂದೆಯಂತು ಮಗನ ಫಲಿತಾಂಶದ ಸುದ್ದಿ ಕೇಳಲು ತುದಿಗಾಲಲ್ಲಿ ನಿಂತಿರುತ್ತಾರೆ.
’ಇಲ್ಲಾ.. ನಾನು ಫೇಲಾಗಿ ಬಿಟ್ಟೆ’ ಎಂಬ ನಡುಗುವ ಧ್ವನಿ ನಾಯಕನ ಬಾಯಿಯಿಂದ ಹೊರ ಬಿದ್ದದ್ದೆ ತಡ ಮನೆಯವರೆಲ್ಲ
ಹತಾಶರಾಗುತ್ತಾರೆ. ನಾಯಕನ ತಂದೆ ಕುರ್ಚಿಯಲ್ಲಿ ಕುಸಿದು ಕುಳಿಯುತ್ತಾರೆ. ನಾಯಕ ತನ್ನ ತಂದೆಯನ್ನು
ಸಮಧಾನ ಪಡಿಸಲು, ಮುಂದೆ ತಾನು ಚೆನ್ನಾಗಿ ಓದಿ ಪಾಸಾಗುತ್ತೇನೆ ಎಂದು ತಂದೆಯನ್ನು ಸ್ಪರ್ಶಿಸುವಾಗುವಾಗ
ತಂದೆಯ ಪ್ರಾಣ ಪಕ್ಷಿ ಹೋಗಿರುತ್ತದೆ. ನಾಯಕ ಆಘಾತಗೊಳ್ಳುತ್ತಾನೆ. ಎಲ್ಲರು ನಾಯಕನನ್ನು ಶಪಿಸುತ್ತಾರೆ.
ಊರಿಗೆ ಊರೇ ತಂದೆಯನ್ನು ಬಲಿ ತೆಗೆದುಕೊಂಡನೆಂದು ಬೊಬ್ಬಿಡುತ್ತಾರೆ.
ಒಂದು ಬಯಲಿನಲ್ಲಿ
ತಾನು ಪ್ರೀತಿಸಿದ ಹುಡುಗಿಯನ್ನು ಮಾತಾಡಿಸುತ್ತಿರುವ ನಾಯಕ ನನ್ನ ಒಂದೇ ಒಂದು ಸೋಲು ನನ್ನನ್ನೇ ಬದಲಾಯಿಸಿ
ಬಿಟ್ಟಿತು. ಜೀವನದಲ್ಲಿ ಒಳ್ಳೆಯ ಪಾಠವನ್ನೇ ಕಲಿಸಿ ಬಿಟ್ಟಿತು. ಈ ಕ್ಷಣದಿಂದ ನಿನ್ನಿಂದ ದೂರ ಹೋಗಲು
ಬಯಸುತ್ತೇನೆ. ನನ್ನನ್ನು ಮರೆತು ಬಿಡು ಎನ್ನುತ್ತಾನೆ. ನಾಯಕಿ ಕೋಪಗೊಂಡು ತನ್ನ ಮೇಲೆ ಎಗರಾಡುತ್ತಾಳೆ
ಎಂದು ಕೊಂಡ್ದಿದ್ದ ನಾಯಕನ ನಿರೀಕ್ಷೆ ಸುಳ್ಳಾಗುತ್ತದೆ. ನಾಯಕಿಯೂ ಅದೇ ಮಾತನ್ನಾಡಲು ತಯಾರಾಗಿರುತ್ತಾಳೆ.
ಕಾರಣ ಅವಳ ಸಂಭಂದಿಕಳು ಮನೆ ಬಿಟ್ಟು ಹೋಗಿ ಅವಳ ತಂದೆಗೆ ಲಘು ಹ್ರದಯಾಘಾತವಾಗಿ ಆಸ್ಪತ್ರೆ ಸೇರಿರುತ್ತಾನೆ.
ಅತ್ತ ಲಿಂಗುವಿಗೂ ಬೇರೆ ಹುಡುಗನೊಂದಿಗೆ ಮದುವೆ ನಿಶ್ಚಯವಾಗುತ್ತದೆ. ಇಲ್ಲಿಗೆ ನಾಯಕ ತಾನು ಮದುವೆಯಾಗಲು
ನಿಶ್ಚಯಿಸಿದ್ದ ಹುಡುಗಿಗೆ ಹೇಳುತ್ತಿರುವ ಕಥೆ ಮುಗಿಯುತ್ತದೆ.
ಮುಂದಿನದು ಸಿನೆಮಾದ
ಸೆಕೆಂಡ್ ಹಾಫ್. ಈ ಹಾಫ್ ನಲ್ಲಿ ನಾಯಕ ತುಂಬಾ ಜವಾಬ್ದಾರಿಯುತನಾಗಿರುತ್ತಾನೆ.ತಾನು ಆಂದುಕೊಂಡದ್ದು
ಸಾಧಿಸುವ ಮೂಲಕ ಜೀವನದಲ್ಲಿ ಒಂದನ್ನು ಪಡೆದುಕೊಂಡಿದ್ದ ನಾಯಕ ಇನ್ನೊಂದನ್ನು ಅಂದರೆ ತಾನು ಪ್ರೀತಿಸಿದ
ಹುಡುಗಿಯನ್ನು ಕಳೆದುಕೊಂಡಿರುತ್ತಾನೆ. ಒಂದು ದಿನ ನಾಯಕನಿಗೆ ತಾನು ಹಿಂದೆ ಪ್ರೀತಿಸಿದ ಹುಡುಗಿ, ಐದು
ವರ್ಷದ ಹಿಂದೆ ಕಳೆದ ದಿನಗಳು ತುಂಬಾ ಕಾಡುತ್ತವೆ. ತಾನು ಮದುವೆಯಾಗಲು ಹೊರಟಿರುವ ಹುಡುಗಿಗೆ ತಾನು
ಐದು ವರ್ಷದ ಹಿಂದೆ ಪ್ರೀತಿಸಿದ್ದ ಹುಡುಗಿಯನ್ನು ಒಮ್ಮೆ ನೋಡ ಬೇಕೆಂದು ಹೇಳಿ ತನ್ನ ಗೆಳೆಯನೊಂದಿಗೆ
ತಾನು ಈಗ ವಾಸವಾಗಿರುವ ದೇಶ ಮಲೇಷಿಯಾದಿಂದ ನೇರವಾಗಿ ಭಾರತದ ಮಂಗಳೂರಿಗೆ ವಿಮಾನ ಏರುತ್ತಾನೆ. ಇಲ್ಲಿ
ನಾಯಕ ಮತ್ತು ಅವನ ಅಸಿಸ್ಟೆಂಟ್ ಆಗಿರುವ ಗೆಳೆಯ, ಹುಡುಗಿಯನ್ನು ಹುಡುಕುವ ಹುಡುಕಾಟ, ಕುಳಿತು ನೋಡುವ
ಪ್ರೇಕ್ಷಕರಲ್ಲಿ ಕುತೂಹಲವನ್ನುಂಟು ಮಾಡುತ್ತದೆ. ಕುಳಿತು ನೋಡುತ್ತಿದ್ದ ನಾನೂ ಕೆಲವು ಕ್ಷಣ ಎಲ್ಲಿ
ಇದ್ದೇನೆ ಎಂಬುದನ್ನು ಮರೆತು ಮುಂದೆ ಏನಾಗ ಬಹುದೆಂದು ಕಾತರನಾಗಿದ್ದೆ. ಮಂಗಳೂರಿಗೆ ಬಂದ ನಾಯಕ ಮತ್ತು
ಅವನ ಅಸಿಸ್ಟೆಂಟ್ ನೇರವಾಗಿ ನಾಯಕ ಹಿಂದೆ ಪ್ರೀತಿಸಿದ್ದ ಹುಡುಗಿಯ ಮನೆಗೆ ಹೋಗುತ್ತಾರೆ. ಆದರೆ ಆ ಮನೆ
ಮಾರಟವಾಗಿ ಬೇರೆ ಯಾರೊ ಕೊಂಡು ಕೊಂಡಿರುತ್ತಾರೆ. ಸಾಧುಕೋಕಿಲನ ಬಳಿ ಅವನು ಹಿಂದೆ ಇಷ್ಟಪಟ್ಟಿದ್ದ ಹುಡುಗಿಯ
ಹಳೆಯ ಫೋನ್ ನಂಬರ್ ಇರುತ್ತದೆ. ಅದು ಚಾಲ್ತಿಯಲ್ಲಿ ಇದೆಯ ಇಲ್ವಾ ಎಂದು ಪರೀಕ್ಷಿಸಲು ಡಯಲು ಮಾಡುತ್ತಾನೆ.
ಪೋನ್ ರಿಂಗಾಗುತ್ತದೆ. ಅತ್ತ ಕಡೆಯಿಂದ ಹಲೋ ಎನ್ನುವ ಲಿಂಗುವಿನ ಧ್ವನಿ ಕೇಳಿ ಇಬ್ಬರೂ ಸಂತೋಷಗೊಳ್ಳುತ್ತಾರೆ.
ಲಿಂಗುವಿಗೆ ಮದುವೆಯಾಗಿ ಇಬ್ಬರು ಮಕ್ಕಳಿರುತ್ತಾರೆ. ಗಂಡ ಕುಳಿತುಕೊಂಡು ಶರಾಬು ಕುಡಿಯುತ್ತಾ ತೂರಾಡುತ್ತಿರುತ್ತಾನೆ.
ಆದರೆ ನಾಯಕ ಪ್ರೀತಿಸಿದ ಹುಡುಗಿಯ ಪತ್ತೆಯಾಗುವುದಿಲ್ಲ. ತಮ್ಮ ಐಷಾರಾಮಿ ಕಾರಿನಲ್ಲಿ ಸೀದಾ ಹುಡುಗಿಯ
ಎರಡನೆ ಗೆಳತಿಯಲ್ಲಿಗೆ ಬರುತ್ತಾರೆ. ಆಕೆ ನಾಟ್ಯ ಶಿಕ್ಷಕಿಯಾಗಿ ನಾಟ್ಯ ಕಲಿಸುತ್ತಿರುತ್ತಾಳೆ. ಈ ಇಬ್ಬರು
ಗೆಳೆಯರನ್ನು ಕಂಡಾಗ ತುಂಬಾ ಸಂತೋಷಗೊಳ್ಳುತ್ತಾಳೆ. ಆದರೆ ನಾಯಕ ಪ್ರೀತಿಸಿದ ಹುಡುಗಿಯ ಬಗ್ಗೆ ಕೇಳಿದಾಗ,
ಐದು ವರ್ಷದ ಹಿಂದೆಯೇ ಅವಳ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಹೇಳುತ್ತಾಳೆ. ಯಾರನ್ನು ವಿಚಾರಿಸಿದಾಗಲೂ
ಯಾವುದೇ ಸುಲಿವು ಸಿಗುವುದಿಲ್ಲ. ಫೇಸ್ಬುಕ್, ವಾಟ್ಸಪ್, ಗೂಗಲ್.....ಎಲ್ಲದರಲ್ಲೂ ಹುಡುಕುತ್ತಾರೆ.
ಇಲ್ಲ.. ಅವಳನ್ನು ನೋಡಲು ಸಾಧ್ಯನೇ ಇಲ್ಲ ಎಂದು ನೋವು, ಹತಾಶೆಯಿಂದ ಮೌನವಾಗಿ ನಾಯಕ ಮತ್ತು ಅವನ ಗೆಳೆಯ
ಒಂದು ಕಡೆ ಕುಳಿತುಕೊಳ್ಳುತ್ತಾರೆ.
ಈಗ ಥಿಯೇಟರ್
ನ ಕತ್ತಲಮಯ ವಾತಾವರಣದಲ್ಲಿ ನಮ್ಮ ಎದುರಿಗೆ ಸಾಲಾಗಿ ಕುಳಿತ ಹುಡುಗಿಯರ ಹರಟೆ, ಕಿಲಕಿಲ ನಗು ಕೇಳಿಸುತ್ತಿಲ್ಲ.
ಹಿಂದಿನ ಸೀಟ್ ಗಳಲ್ಲಿ ಕುಳಿತಿರುವ ಹುಡುಗರ ಸಿಳ್ಳೆ, ಚಪ್ಪಾಳೆ ನಿಂತಿದೆ. ಎಲ್ಲರ ಮುಂದೇನಾಗಬಹುದು
ಎಂಬ ನೀರವ ಮೌನದಲ್ಲಿ ಸೊಳ್ಳೆಯ ಹಾರ್ಮೋನಿಯಮ್ ವಾದನ ಸ್ಪಷ್ಟವಾಗಿ ಕೇಳುತ್ತದೆ.
ಬೇಸರದಿಂದ
ಮನಸ್ಸು ಭಾರ ಮಾಡಿಕೊಂಡು ಕಾರಿನಲ್ಲಿ ಹಿಂತಿರುಗಿ ಹೊರಟ ಗೆಳೆಯರಿಗೆ ಸಿಗ್ನಲಲ್ಲಿ ಒಂದು ಕಪ್ಪು ಬಣ್ಣದ
ಬೆಂಜ್ ಕಾರು ಸಮನಾಂತರ ದೂರದಲ್ಲಿ ನಿಲ್ಲುತ್ತದೆ. ಅದರಲ್ಲಿದ್ದ ನಾಯಿ ನಾಯಕನನ್ನು ನೋಡಿದ ಕೂಡಲೇ ಕಾರಿನಿಂದ
ಹಾರಿ ನಾಯಕನ ಕಾರನ್ನು ಹಿಂಬಾಲಿಸುತ್ತದೆ. ಆ ನಾಯಿ ನಾಯಕ ಹಿಂದೆ ನಾಯಕಿಗೆ ಪ್ರೀತಿಯಿಂದ ಕೊಟ್ಟ ಉಡುಗೊರೆಯಾಗಿರುತ್ತದೆ.
ಇಬ್ಬರ ಕಾರುಗಳೂ ಒಂದು ಕಡೆ ನಿಲ್ಲುತ್ತವೆ. ನಾಯಕ ಮತ್ತು ನಾಯಕಿ ಇಬ್ಬರೂ ಪರಸ್ಪರ ಮುಖಾಮುಖಿಯಾಗುತ್ತಾರೆ.
ಇಬ್ಬರಲ್ಲೂ ಅಜಗಜಾಂತರ ಬದಲಾವಣೆಯಾಗಿರುತ್ತದೆ. ಇಬ್ಬರೂ ಒಂದು ಕ್ಷಣ ಮೌನವಾಗುತ್ತಾರೆ. ಖುಷಿಯಿಂದ
ಅಪ್ಪಿಕೊಳ್ಳುತ್ತಾರೆ. ನಾಯಕ ಮತ್ತು ಅವನ ಗೆಳೆಯನನ್ನು ಮನೆಗೆ ಕರೆದುಕೊಂಡು ಹೋದ ನಾಯಕಿ ಅವರನ್ನು
ತನ್ನ ತಂದೆ ಮತ್ತು ಅತ್ತೆಗೆ ಪರಿಚಯಿಸುತ್ತಾಳೆ.
ಒಂದು ಕಡೆ ಎಲ್ಲವನ್ನೂ ಪಡೆಯುತ್ತಾ
ಹೋದ ನಾಯಕನ ಕಥೆಯಾದರೆ, ಇನ್ನೊಂದು ಕಡೆ ಎಲ್ಲವನ್ನೂ
ಕಳೆಯುತ್ತಾ ಹೋದ ನಾಯಕಿ. ತನ್ನ ತಂದೆ ಉದ್ಯಮದಲ್ಲಿ ನಷ್ಟ ಅನುಭವಿಸಿ ಎಲ್ಲವನ್ನೂ ಕಳಕೊಂಡಾಗ ತಂದೆಯ
ತಂಗಿ ಅಂದರೆ ಅತ್ತೆ ನೆರವಿಗೆ ಬರುತ್ತಾಳೆ. ತನ್ನ ಒಬ್ಬನೇ ಮಗನನ್ನು ಮಗಳಿಗೆ ಅಂದರೆ ನಾಯಕಿಗೆ ಮದುವೆ
ಮಾಡಿಸುವಂತೆಯೂ ಕೇಳಿಕೊಂಡಿರುತ್ತಾಳೆ.
ಈಗ ನಾಯಕಿ ನಾಯಕನನ್ನು
ಏನ್ ಮಾಡ್ ಕೊಂಡಿದ್ದೀಯ ಎಂದು ಕೇಳುತ್ತಾಳೆ. ಆಗ ನಾಯಕನ ಅಸಿಸ್ಟೆಂಟ್ ಅವನ್ಗೇನು ಈಗ ಮಿಲಿಯನೇರ್,
’ಹಲೋ’
ಸಾಫ್ಟ್ವೇರ್ ನ ಜನಕ ಎಂದು ಅಭಿಮಾನದಿಂದ ಹೇಳುತ್ತಾನೆ. ಓಹ್...ಎಂದು ಸಂತೋಷಪಡುತ್ತಾಳೆ. ನಿನ್ನ ಹೆಂಡತಿ ಪುಣ್ಯ ಮಾಡಿರ್ ಬೇಕು ಒಳ್ಳೆಯ ಗಂಡನನ್ನೇ ಪಡೆದಿದ್ದಾಳೆ ಎನ್ನುತ್ತಾಳೆ. ಆಗ ನಾಯಕನ ಅಸಿಸ್ಟೆಂಟ್ ನಾಯಕಿಗೆ ಕೇಳದಂತೆ ನಿನಗೆ ಇನ್ನೂ ಮದುವೆಯಾಗಲಿಲ್ಲವೆಂದು ಹೇಳು ಹೇಳು ಎಂದು ನಾಯಕನನ್ನು ಅವಸರಿಸುತ್ತಾನೆ. ಅಸಿಸ್ಟೆಂಟನ್ನು ಕೈಹಿಡಿದು ಆಚೆ ಕರೆದುಕೊಂಡು ಹೋದ ನಾಯಕ ಇಲ್ಲ... ಕಳೆದ ಐದು ವರ್ಷಗಳ ಕಾಲದಲ್ಲಿ ಅವಳ ಕಷ್ಟ ಸುಖಗಳಲ್ಲಿ ಇದ್ದದ್ದು ನಾನಲ್ಲ. ಬದಲಾಗಿ ಅವಳ ಅತ್ತೆಯ ಮಗ. ಆದುದರಿಂದ ನನಗೆ ಅವಳನ್ನು ಮದುವೆಯಾಗುವ ಅಹೃತೆ ಇಲ್ಲ ಎನ್ನುತ್ತಾನೆ. ಮದುವೆಯಾಗುವ ಹುಡುಗನಿಗೆ ನಾಯಕನನ್ನು ನಾಯಕಿ ಪರಿಚಯಿಸುತ್ತಾಳೆ. ತನ್ನ ಮದುವೆ ಮುಗಿದ ಮೇಲೇನೆ ಹಿಂದೆ ಹೋಗ ಬೇಕೆನ್ನುತ್ತಾಳೆ. ನಾಯಕ ಆಯ್ತೆನ್ನುತ್ತಾನೆ. ಆದರೆ ನಾಯಕನ ಅಸಿಸ್ಟೆಂಟ್ ಸಾಧುಕೋಕಿಲನಿಗೆ ನಾಯಕ ನಾಯಕಿಯೊಂದಿಗೆ ಮದುವೆಯಾಗದ ಹೊರತು ಒಂದು ಕ್ಷಣನೂ ಇಲ್ಲಿ ನಿಲ್ಲುವುದು ಬೇಡವೆನ್ನುತ್ತಾನೆ.
ನೀವೂ ಒಮ್ಮೆ ಸಿನೆಮಾ ನೋಡಿ
ಅಯ್ಯೋ, ಚಂದ್ರಶೇಖರರೆ,
ಪ್ರತ್ಯುತ್ತರಅಳಿಸಿನಮ್ಮನ್ನು suspenseನಲ್ಲಿ ಇಟ್ಟುಬಿಟ್ಟಿರಲ್ಲ!
ಸುನಾತರೆ, ಸಿನೆಮಾ ನೋಡುವಾಗ ಕುತೂಹಲದಿಂದ ನನ್ನನ್ನು ನೀವು ನೆನೆಪಿಸಲಿ ಎಂದು....
ಅಳಿಸಿ