ಭಾನುವಾರ, ಡಿಸೆಂಬರ್ 1, 2013

ಆಘಾತ


ಪಾರತಂತ್ರ್ಯವಾಗಿ ಸಾಕಿದ ಮುದ್ದಿನ ಹಕ್ಕಿ
ಇಂದು ದೂಡಿತೇ ಶರಪಂಜರಕೆ
ತಲ್ವಾರ್ ದಂಪತಿಗಳು ತಮ್ಮ ಮಗಳು ಆರುಷಿಯೊಂದಿಗೆ
ಅಂದು ತೇಲಿತು ಖುಷಿಯ ಲಹರಿ
ಇಂದು ಬರೀ ಹತಾಶೆ, ಆಘಾತ
ಜೇನಗೂಡಿನಂತಹ ಬಾಳು
ಇಂದು ಆಯಿತೇ ಹೋಳು
ನುಚ್ಚುನೂರಾಯಿತೇ ಕಟ್ಟಿಕೊಂಡ ಕನಸು
ಮಣ್ಣುಪಾಲಾಯಿತೇ ಬೆಳೆಸಿಕೊಂಡ ಪ್ರತಿಷ್ಠೆ
ಒಮ್ಮೊಮ್ಮೆ ಶೂನ್ಯವಾಗುವುದೇ  ಬದುಕಿನಲಿ
ಬುದ್ದಿವಂತಿಕೆ, ಪ್ರತಿಭೆ
ಜೀವನ ಹಾವು-ಏಣಿ  ಆಟದಲ್ಲಿ ಪ್ರತ್ಯಕ್ಷ ಸಾಕ್ಷ್ಯವೇ ಬೇಕಿಲ್ಲ ನ್ಯಾಯ-ಅನ್ಯಾಯ ತೀರ್ಮಾನದಲಿ
ಮಾನವೀಯತೆಗೆ ಬೆಲೆ ಕೊಡಲಾದಿತೇ ?
ಸಾಂಧರ್ಬಿಕ ಸಾಕ್ಷ್ಯವೂ ಸಾಕು ಶಿಕ್ಷೆಗೆ ನೂಕಲು
ಕಳೆದು ಹೋದ ಮೇಲೆ ಈ ಪ್ರಪಂಚದಿಂದ
ಬರಬಹುದೇ ಯಾವ ಪ್ರಭಾವದಲ್ಲಾದರೂ ಈ ಭೂಮಿಗೆ
ಮತ್ತೊಮ್ಮೆ ಹೊಸ ಜೀವನಕೆ ?
ಮುಂದುವರಿದಿದೆ ಬದುಕು,
ಪುಸ್ತಕಗಳ ಓದಿಗೆ ಶರಣಾಗಿ ನೋವನು ಮರೆತಿದೆ ಮನಸು
ಅದೇ ವೈದ್ಯ ವ್ರತ್ತಿ ಸೆರೆಮನೆಯಲಿ
ಕೊನೆಯಲ್ಲದ ತೀರ್ಪಿಗೆ ಹೊಸ ತಿರುವಿನ ನಿರೀಕ್ಷೆಯಲಿ.

4 ಕಾಮೆಂಟ್‌ಗಳು:

  1. ಸದರಿ ಪ್ರಕರಣದಲ್ಲಿ ಎರಡೆರಡು ರಾಜಕೀಯ ಆಯಾಮವಿದೆ. ಸತ್ಯವು ಗೆಲ್ಲಲಿ ಕಡೆಗೆ.

    ಪ್ರತ್ಯುತ್ತರಅಳಿಸಿ
  2. ಮನ ಕರಗಿಸುವ ಸಮಾಚಾರವನ್ನು ಮನ ಕರಗಿಸುವ ಕವನವನ್ನಾಗಿ ಹೆಣೆದಿದ್ದೀರಿ. ಜೊತೆಯಲ್ಲಿ ನೀಡಿದ ಚಿತ್ರವೂ ಸಹ ಮನಸ್ಸನ್ನು ತಟ್ಟುತ್ತದೆ.

    ಪ್ರತ್ಯುತ್ತರಅಳಿಸಿ
  3. ಹೌದು ಸುನಾತರೆ, ಈ ಘಟನೆ ಮನಕಲಕುವಂತದ್ದು. ಈ ದುರಂತ ಸಂಭವಿಸಬಾರದಿತ್ತು ಅನ್ನಿಸುತ್ತಿರುತ್ತದೆ.

    ಪ್ರತ್ಯುತ್ತರಅಳಿಸಿ