ಶನಿವಾರ, ಸೆಪ್ಟೆಂಬರ್ 2, 2017

ಸಂಚಾ..ರಿ.....

ನಾನು ಸಂಚಾ...ರಿ
ಹೊರಟಿದ್ದೇನೆ...ಮೆಟ್ರೋ ರೈಲಿನಲಿ
ಎರಡೂ ಬದಿ ಸರತಿ ಸಾಲಿನಲ್ಲಿ ಕುಳಿತವರು 
ಕತ್ತು ಬಾಗಿಸಿದ್ದಾರೆ.
ನನ್ನ ಯೋಚನಾಲಹರಿಯಲ್ಲಿ ಒಂದು ಪ್ರಶ್ನೆ..?
ಎಲ್ಲರೂ ಓದುತ್ತಿರಬಹುದೇ ಕಥೆ, ಕಾದಂಬರಿ, ಕವನಗಳನ್ನು..?
ಇಲ್ಲ ಜನರು ಸಂಚಾರಿ ಫೋನ್ ನಲ್ಲಿ ಖುಷಿಯನ್ನು ಹುಡುಕುತ್ತಿದ್ದಾರೆ.



ನಾನು ಸಂಚಾ...ರಿ 
ನಡೆಯುತ್ತಿದ್ದೇನೆ.. ತುಂತುರು ಮಳೆಯಲಿ    
ಬಂಡೆಗಕಲ್ಲುಗಳ ಮೇಲೆ..ಪೊದೆಗಿಡಗಳ ಪಕ್ಕ
ನನ್ನ ಯೋಚನಾಲಹರಿಯಲ್ಲಿ ಒಂದು ಪ್ರಶ್ನೆ..? 
ಲೇಖಕರು 'ಮಾಂಡೋವಿ' ಕಾದಂಬರಿಯನ್ನು ಇತ್ತೀಚಿನ ದಿನಗಳಲ್ಲಿ ಬರೆಯುತ್ತಿದ್ದರೆ..
ನಾಯಕಿ ಇಂದಿನ ಸಂಚಾರಿ ಫೋನ್ ಕೈಯಲ್ಲಿ ಹಿಡಿದು ನಡೆಯುವ ವರ್ಣನೆ ಚೆನ್ನ್ನಾಗಿರುತ್ತಿತ್ತೇ..?
ಅಥವಾ ಹಿಂದಿನ ಪ್ರೇಮಪತ್ರ  ಹಿಡಿದು ನಡೆಯುವ ಪರಿಯೇ ಚೆನ್ನಾಗಿರುತ್ತಿತ್ತೇ..?


ನಾನು ಸಂಚಾ...ರಿ
ಹೊರಟಿದ್ದೇನೆ...ಪಾದಚಾರಿಯಾಗಿ
ಬಯಲಿನಲ್ಲಿ ಒಂದು ಮರದ ಕೆಳಗೆ ನೆರಳಿನಲ್ಲಿ
ಗುಂಪಾಗಿದ್ದಾರೆ.. ಕಂದಮ್ಮಗಳು.
ನನ್ನ ಯೋಚನಾಲಹರಿಯಲ್ಲಿ ಒಂದು ಆತಂಕದ ಪ್ರಶ್ನೆ..?
ಸಂಚಾರಿ ಫೋನ್ ನಲ್ಲಿ 'ಬ್ಲೂವೆಲ್'ಆಡುತ್ತಿರಬಹುದೇ..?
ಅಲ್ಲ ಮಕ್ಕಳು ಲವಲವಿಕೆಯಿಂದ ಖುಷಿಯಾಗಿ 'ರಾಮಸೀತಾ' ಆಡುತ್ತಿದ್ದಾರೆ.

3 ಕಾಮೆಂಟ್‌ಗಳು: