ಸೋಮವಾರ, ಸೆಪ್ಟೆಂಬರ್ 30, 2013

ಹೀಗೇ.....ಕಾವ್ಯವಾಗಿರ ಬೇಕು

                   ಹದಿಮೂರು ವರ್ಷಗಳ ಹಿಂದೆ ಬರೆದ ನನ್ನ ಮೊದಲ ಕವನ.

ನೂರಾರು ಮಲ್ಲಿಗೆಗಳು ಒಮ್ಮೆಲೆ.....
ಅರಳಿದಂತೆ ಕಾಣುವ ನಿನ್ನ ನಗುವನ್ನು
ಕಂಡಾಗ ನನಗನಿಸುತ್ತದೆ,
ನೀನು ಮಲ್ಲಿಗೆಯ ಹೂವಾಗಿರ ಬೇಕಿತ್ತು.

ಸಂಜೆ ಸೂರ್ಯ ಭೂಮಿಗೆ ಮುತ್ತಿಡುವಾಗ
ಕೆಂಪೇರಿದ ಬಾನಿನಂತಹ ನಿನ್ನ
ಕೆನ್ನೆಗಳನ್ನು ನೋಡಿದಾಗ ನನಗನಿಸುತ್ತದೆ,
ನೀನೊಂದು ನೀಲಾಕಾಶವಾಗಿರ ಬೇಕಿತ್ತು.

ಬೆಳದಿಂಗಳನ್ನು ತುಂಬಿರುವ ನಿನ್ನ
ಕಣ್ಣುಗಳನ್ನು ನೋಡಿದಾಗ
ನನಗನಿಸುತ್ತದೆ, ನೀನೊಂದು
ಬೆಳದಿಂಗಳ ರಾತ್ರಿಯಾಗಿರ ಬೇಕಿತ್ತು.                                                                                                                                              ಚಿತ್ರ ಕೃಪೆ: ಅಂತರ್ಜಾಲ
ಶ್ರೀಗಂಧದ ಬಣ್ಣದ ನಿನ್ನ
ತುಟಿಗಳನ್ನು ಕಂಡಾಗ
ನನಗನಿಸುತ್ತದೆ, ನೀನೊಂದು
ಚಂದನವಾಗಿರ ಬೇಕಿತ್ತು.

ಹೃದಯವೆರಡರಲಸುವೊಂದು ಬಿಂದು
ಹರಡುವ ನಿನ್ನ ಮಾತುಗಳನ್ನು
ಕೇಳಿದಾಗ ನನಗನಿಸುತ್ತದೆ,
ನೀನೊಂದು ಸುಂದರ ಗಿಳಿಯಾಗಿರ ಬೇಕಿತ್ತು.

ನನ್ನ ಅಂತರಾಳದಲ್ಲಿ ನಿನ್ನ
ನೆನಪು ಮತ್ತೆ ಮತ್ತೆ ಕಾಡಿದಾದ,
ನನಗನಿಸುತ್ತದೆ, ನೀನು
ಹೀಗೇ....ಹೀಗೇ....ಕಾವ್ಯವಾಗಿರ ಬೇಕು ಎಂದು.



9 ಕಾಮೆಂಟ್‌ಗಳು:

  1. ಮೇಲಿನ ಉಲ್ಲೇಖಗಳೆಲ್ಲ ಬಯಸುವ ಮನವು ಅವೆಲ್ಲವನ್ನೂ ಒಟ್ಟಾರೆಯಾಗಿ ಕಾವ್ಯವಾಗಿ ಸಾಂದ್ರಗೊಳಿಸಿದ ನಿಮ್ಮ ಪ್ರತಿಭೆಗೆ ಶರಣು.

    ಪ್ರತ್ಯುತ್ತರಅಳಿಸಿ
  2. ತುಂಬಾ ಚೆನ್ನಾಗಿದೆ ...ಖಂಡಿತಾ ಹೀಗೆ ಕಾವ್ಯವಾಗಿದ್ದು ಅನ್ನಿಸತ್ತೆ

    ಪ್ರತ್ಯುತ್ತರಅಳಿಸಿ
  3. ಎಳೆಯ ವಯಸ್ಸಿನಲ್ಲಿಯೆ ತುಂಬ romantic ಹಾಗು ಸುಂದರವಾದ ಕವನವನ್ನು ಬರೆದಿದ್ದೀರಿ.

    ಪ್ರತ್ಯುತ್ತರಅಳಿಸಿ
  4. ಅದಾಗಿರಬೇಕಿತ್ತು ಇದಾಗಿರಬೇಕಿತ್ತು ಎಂದು ಮನಸಿನ ಭಾವನೆಗಳಿಗೆ ಅಕ್ಷರ ರೂಪವನ್ನು ನೀಡಿರುವುದು ಸುಂದರವಾಗಿದೆ.. ಶುಭವಾಗಲಿ... ಮುಂದುವರೆಸಿರಿ.

    ಪ್ರತ್ಯುತ್ತರಅಳಿಸಿ
  5. ಸುಂದರ ಕವಿತೆ.. ಚಂದ್ರಶೇಖರ್ ನಾಯ್ಕ್ ರವರೆ...

    ಪ್ರತ್ಯುತ್ತರಅಳಿಸಿ
  6. ಬಣ್ಣನೆಯೇ ಈಗಿರಬೇಕಾದರೆ, ಇನ್ನು ಆ ಚೆಲುವೆ ಖಂಡಿತ ಬೆಳದಿಂಗಳ ತಿಳಿ ಬೆಳಕಂತೆ; ಶರ ಸುಮವ ಸುರಿಸುವವಳೇ ಆಗಿರಬೇಕು.

    ಪ್ರತ್ಯುತ್ತರಅಳಿಸಿ
  7. ವಾಹ್ ! ಅದ್ಭುತವಾದ ಕವನ ...ಎಷ್ಟು ಸುಂದರವಾದ ಕಲ್ಪನೆ...

    ಪ್ರತ್ಯುತ್ತರಅಳಿಸಿ