ಹತ್ತು ದಿನಗಳ ಎನ್.ಎಸ್..ಎಸ್. ಶಿಬಿರದ ಒಂದು ನೆನಪು.
ರಾಷ್ಟ್ರೀಯ ಸೇವಾ ಯೋಜನಾ ಶಿಬಿರವನ್ನು,
ಅಜಾಜ್ ಅಹಮ್ಮದ್ ನೇತೃತ್ವ, ವನಿತ, ಕೃಷ್ಣ, ಗಂಗಾಧರರು
ಇದ್ದರು ನಮ್ಮೊಂದಿಗೆ ನಗುತ್ತಾ ನಗಿಸುತ್ತಾ
ಚಿತ್ರ: ಸಂತೋಷ್ ಜಿ.ಶೆಟ್ಟಿ
ಒಂದೇ ಗಿಡದಲ್ಲಿ ಅರಳಿದ ನೂರಾರು ಮಲ್ಲಿಗೆಗಳಂತೆ
ಕೆಲಸವ ಮಾಡುತ್ತಿದ್ದರು ನಮ್ಮ ಗೆಳೆಯರು
ಪರಸ್ಪರ ಅಣ್ಣ-ತಮ್ಮಂದಿರಂತೆ, ಅಕ್ಕ-ತಂಗಿಯರಂತೆ,
ಸುಪ್ತಪ್ರತಿಭೆಗಳ ಬಾಗಿಲುತೆರೆದು
ಮನರಂಜಿಸಿದರು
ನಮ್ಮ ಗೆಳೆಯರು ಅಂದು
ನೃತ್ಯದಲ್ಲಿ, ಸಂಗೀತದಲ್ಲಿ, ನಟನೆಗಳಲ್ಲಿ
ಚಿತ್ರ:ಚಂದ್ರಶೇಖರ್ ಈಶ್ವರ್ ನಾಯ್ಕ್
ಗಂಗಾಧರರ ಕ್ವಿಜ್ ಸ್ಪರ್ಧೆ
ಜೀವನವೆಂಬ ಪುಸ್ತಕದಲ್ಲಿ ಕಲಿಯಲು ಇನ್ನೂ ಇದೆ ಎನ್ನುತ್ತಿದ್ದರೆ,
ವನಿತರ ಅಂತ್ಯಾಕ್ಷರಿಯು
ಈ ಶಿಬಿರ ಅಂತ್ಯವಾಗದೆ ಮುಂದುವರೆಯುವಂತೆ ಹೇಳುತ್ತಿತ್ತು.
ರೆಂಜಾಳರ ಯೋಚನೆಗಳು
ನಮ್ಮನ್ನು ಭವಿಷ್ಯದ ಬಗ್ಗೆ ಯೋಚಿಸುವಂತೆ ಹೇಳುತ್ತಿದ್ದರೆ,
ಮಹಮ್ಮದಾಲಿಯವರು ದೈಹಿಕ ಶಿಕ್ಷಣದಿಂದ ನಮ್ಮನ್ನು ರಂಜಿಸಿದ್ದರು
ಪ್ರಪಂಚವನ್ನೇ ಮರೆತ್ತಿದ್ದರೂ ಕೆಲವರು
ಹುಟ್ಟುಹಬ್ಬವ ಮರೆಯದೆ ಆಚರಿಸುತ್ತಿದ್ದರು
ಉಲ್ಲಾಸದಿಂದ, ಸಂಭ್ರಮದಿಂದ, ಸಂತೋಷದಿಂದ,
ಸೂರ್ಯನ ಬಿಸಿಲಿಗೂ ಬಿಳಿಯಾಗೇ ಇದ್ದ ಮುಖಗಳು
ಬೇಸರದಿಂದ ತೊಳೆದ ಕೆಂಡದಂತ್ತಿದ್ದವು ಆ ಕೊನೆಯ ದಿನ
ಕಳೆದೇ ಹೋದವು ಎಂದಿಗೂ ನೆನಪಿಡಬೇಕಾದ
ಆ ದಿನಗಳು, ಗಂಟೆಗಳು, ಕ್ಷಣಗಳು.
ಸಾಂಘಿಕ ಮನೋವೃತ್ತಿಯನ್ನು ಉತ್ತೇಜಿಸುವ ಇಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ಅತ್ಯವಶ್ಯವಾಗಿವೆ.
ಪ್ರತ್ಯುತ್ತರಅಳಿಸಿಸುನಾತ್ ರವರೆ ನನ್ನ ಬ್ಲಾಗನ್ನು ಇಷ್ಟಪಟ್ಟು ಓದುವುದಕ್ಕೆ ನಿಮಗೆ ಧನ್ಯವಾದ. ಇದು ಸರಿ ಸುಮಾರು ಹದಿಮೂರು ವರ್ಷದ ಹಿಂದೆ ನಡೆದ ಎನ್.ಎಸ್.ಎಸ್. ಶಿಬಿರ. ಯಾಕೋ ಆ ದಿನಗಳ ಸುಂದರ ನೆನಪು ಕಾಡುತ್ತಲೇ ಇದೆ.
ಪ್ರತ್ಯುತ್ತರಅಳಿಸಿದಶಕಗಳ ಹಿಂದೆ ಓಡಿದ್ದಿರಿ ಚೆನ್ನಾಗಿದೆ
ಪ್ರತ್ಯುತ್ತರಅಳಿಸಿನೆನಪುಗಳೇ ಮಧುರ
ಎನ್ ಎಸ್ ಎಸ್ ಶಿಬಿರದ ಮಧಿರ ನೆನೆಪುಗಳಿಂದ ಹಿಂದಕ್ಕೆ ಕರೆದುಕೊಡು ಹೋಗುವ ನಿಮ್ಮ ಅಂಕಣ ಮನಸಿಗೆ ಹಿದಿಸಿತು.
ಪ್ರತ್ಯುತ್ತರಅಳಿಸಿ