ಶುಕ್ರವಾರ, ಸೆಪ್ಟೆಂಬರ್ 27, 2013

ಒಂದು ವಿಲಕ್ಷಣ ವೃತ್ತಿ

                           ಮೂಲ: ಗ್ರಹಾಂ ಚಾಪ್ ಮ್ಯಾನ್ (1971 ಬ್ರಿಟಿಷ್ ಲೇಖಕ)         
(ಇದು ನಮ್ಮೆಲ್ಲರ ಕತೆ. ಬದುಕು ಸುಧಾರಿಸುತ್ತಾ ಹೋಗುತ್ತಿದ್ದಂತೆ ಸಾವಿನ ಭಯದಲ್ಲಿ ಬದುಕುವ ಎಲ್ಲರ ಕತೆಯೂ ಹೌದು. ಆಶೆಗಳಿಗೆ, ಅತೃಪ್ತಿಗೆ, ಒತ್ತಡಕ್ಕೆ, ಸಿಟ್ಟಿಗೆ, ಹೊಟ್ಟೆಕಿಚ್ಚಿಗೆ, ಅನಾರೋಗ್ಯ ಹವ್ಯಾಸಗಳಿಗೆ ಸುಫಾರಿ ಕೊಟ್ಟು ನಾವೇ ನೇಮಿಸಿದ ಸೀಕ್ರೆಟ್ ಏಜೆಂಟ್ ಗಳಾದ ಉದ್ವೇಗ, ರೋಷ, ಅಕ್ರೋಶ, ಭಾವುಕತೆ, ಅಸೂಯೆ, ಅಮಲು, ಅವಿಶ್ರಾಂತ ಎಂಬ ಗೂಢಾಚಾರ ಹೇಗೆ ಬೇಕಾದರೂ ನಮ್ಮನ್ನು ಮುಗಿಸಿ ಬಿಡುವಂತೆ ಮಾಡುತ್ತೇವೆ.)

   
   ಅರ್ಥರ್ ಅವನ ಪತ್ನಿ ಫಿಯಾನಳೊಂದಿಗೆ ಹತ್ತಿರದ ರೆಸ್ಟೋರೆಂಟೊಂದಕ್ಕೆ  ಹೊರಟಿದ್ದಾನೆ. ಫಿಯಾನ ಇವತ್ತು ತುಂಬಾ ಖುಶಿಯಾಗಿದ್ದಾಳೆ. ಅರ್ಥರ್ ನ ಇಂದಿನ ನಡೆಯುವ ನಡೆ, ಆಡುವ ಮಾತು ಯಾಕೋ ಅಸಾಮಾನ್ಯವಾಗಿದೆ. ಮುಖದಲ್ಲಿ ಭಯ ಆವರಿಸಿದೆ. ತನ್ನನ್ನು ಯಾರೂ ಗುರುತು ಹಿಡಿಯಬಾರದು ಎನ್ನುವ ಹಾಗೆ ಡ್ರೆಸ್ ಹಾಕಿಕೊಂಡಿದ್ದಾನೆ. ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎನ್ನುವಂತೆ ವರ್ತಿಸುತ್ತಿದ್ದಾನೆ. ಕಾರಿನ ಡ್ರೈವಿಂಗ್ ಸೀಟಲ್ಲಿ ಕುಳಿತ ಅರ್ಥರ್ ಸ್ವಲ್ಪ ಯೋಚಿಸಿ, ಕಾರಿನಿಂದ ಎದ್ದು ಹಿಂದಿನಿಂದ ಒಂದು ಸುತ್ತು ಬಂದು, ಫಿಯಾನಳಲ್ಲಿ ಕಾರ್ ಡ್ರವ್ ಮಾಡಲು ಹೇಳಿದ.
  "ಯಾಕೆ ಡಿಯರ್..? ಏನಾಯ್ತು ?" ಫಿಯಾನ ಆಶ್ಚರ್ಯದಿಂದ ಕೇಳಿದಳು
  "ನಾನು ನಿನ್ನ ಡ್ರೈವಿಂಗನ್ನು ಇಷ್ಟ ಪಡುತ್ತೇನೆ." ಅರ್ಥರ್ ನ ಜಾಣ್ಮೆಯ ಉತ್ತರ.


                                                 ಚಿತ್ರ ಕೃಪೆ:ಅಂತರ್ಜಾಲ.

ರೆಸ್ಟೋರೆಂಟಿನಲ್ಲಿ ಟೇಬಲ್ ನ ಎದುರು ಕುಳಿತ್ತಿದ್ದ ಅರ್ಥರ್ ಇಲ್ಲೂ ಜಾಗ ಬದಲಾಯಿಸಿ ಫಿಯಾನಳನ್ನು ತಾನು ಕುಳಿತುಕೊಂಡಲ್ಲಿಗೆ ಕರೆದು ಅವನು ಅವಳು ಕುಳಿತುಕೊಂಡಿದ್ದ ಜಾಗದಲ್ಲಿ ಕುಳಿತುಕೊಂಡ. ಅವರ ಆರ್ಡರ ಪ್ರಕಾರ ಸರ್ವ್ ಮಾಡುತ್ತಿದ್ದ ವೈಟರ್ ವೈನ್ ಬಾಟಲಿಯನ್ನು ಅವನ ಮುಂದೆ ಹಿಡಿದುಕೊಂಡಿದ್ದಾನೆ.
"ಅದನ್ನು ಓಪನ್ ಮಾಡಿದ್ದೀಯ ?" ಅರ್ಥರ್ ನ ದ್ವನಿಯಲ್ಲಿ ಸಂಶಯವಿತ್ತು.
"ಹೌದು"
"ನನಗೆ ಓಪನ್ ಮಾಡದ ಹೊಸ ಬಾಟಲಿ ಇಲ್ಲಿ ಬೇಕು"
ಅಲ್ಲೇ ಪಕ್ಕದಲ್ಲಿ ಇದ್ದ ಮ್ಯಾನೆಜರ್ ವೈಟರನ್ನುದ್ದೇಶಿಸಿ ಮೆಲ್ಲನೆ ಹೋಗು ಹೋಗು ಬೇಗ ತಾ ಅಂದ. 
ಈಗ ಅರ್ಥರ್ ನ ಕಡೆಗೆ ತಿರುಗಿ "ಅವನು ಹೊಸಬ.ಅಂದ ಹಾಗೆ ಹೇಗಿತ್ತು  ಸರ್ ನಿಮ್ಮ ಪ್ರಯಾಣ ?"
"ಚೆನ್ನಾಗಿತ್ತು"
ವೈಟರ್ ತಂದ ಬಾಟಲಿಯನ್ನು ಸೂಕ್ಷ್ಮವಾಗಿ ನೋಡಿದ ನಂತರ ಅರ್ಥರ್ ಅದನ್ನು ಓಪನ್ ಮಾಡಿಸಿದ. ಅದನ್ನು ಗ್ಲಾಸಿಗೆ ಹಾಕಿದ ವೈಟರ್, ಸರ್.. ಎಂದ.
"ಅದನ್ನು ಟೇಸ್ಟ್ ಮಾಡು"
"ಅಲ್ಲಿಗೆ ಬಂದ ಮ್ಯನೇಜರ್ ಹೇಗಿದೆ ಸರ್ ವೈನ್ ?" ಎಂದ
 “ಅವನು ಟೇಸ್ಟೇ ಮಾಡಲಿಲ್ಲ ನಾನೇಗೆ ಹೇಳಲಿ” ಅರ್ಥರ್ ನ ಮಾತಿನಿಂದ ವೈಟರ್ ಒಮ್ಮೆ ಅವಕ್ಕಾದ.
ಮ್ಯಾನೆಜರ್ ಬಾಟಲಿಯಿಂದ ಸ್ವಲ್ಪ ವೈನನ್ನು ಬಾಯಿಗೆ ಹಾಕಿ ಕೆಮ್ಮುತ್ತಾ 'ಇಟ್ಸ್ ಫರ್ಫೆಕ್ಟ್' ಎಂದ. ಅರ್ಥರ್ ಮತ್ತು ಫಿಯಾನ ಊಟ ಮುಗಿಸಿದ ನಂತರ ಮ್ಯಾನೇಜರ್ ಅಲ್ಲಿಗೆ ಬಂದು 
"ಹೇಗಿತ್ತು ಸರ್ ಊಟ ?"
"ಚೆನ್ನಾಗಿತ್ತು"
"ಏನಾದರೂ ಕಂಪ್ಲೆಂಟ್ ಇದೆಯೇ ?"
"ಇಲ್ಲ"
ವೈಟರ್...ಎಂದು ಜೋರು ದ್ವನಿಯಲ್ಲಿ ವೈಟರನ್ನು ಕರೆದ ಮ್ಯಾನೇಜರ್ ಅವರ ಬಿಲ್ಲ್ ಹಣವನ್ನು ಸ್ವೀಕರಿಸಿ, ಅವರನ್ನು ಅಲ್ಲಿಂದ ಕಳುಹಿಸಿ ಕೊಟ್ಟ.
 ರೆಸ್ಟೋರೆಂಟ್ ನಿಂದ ಹೊರಗೆ ಬಂದ ಅರ್ಥರ್ ಮತ್ತು ಫಿಯಾನಳಿಗೆ ಒಂದು ಆಶ್ಚರ್ಯ ಕಾದಿತ್ತು. ಅವರು ನಿಲ್ಲಿಸಿದ ಜಾಗದಲ್ಲಿ ಅವರ ಕಾರು ಇಲ್ಲ. ಎಲ್ಲಿ ಹೋಗಿದೆ ಕಾರು ? ಅವರೊಂದಿಗೆ ಇವರೊಂದಿಗೆ ಅಲ್ಲಿ ಸುತ್ತಾಡುವ ಎಲ್ಲರೊಂದಿಗೆ ವಿಚಾರಿಸುತ್ತಾರೆ. ಸ್ವಲ್ಪ ದೂರ ನಡೆದು ಹುಡುಕುತ್ತಾರೆ.ಎಲ್ಲಿ ಹುಡುಕಿದರೂ ಅವರ ಕಾರು ಕಾಣ ಸಿಗುತ್ತಿಲ್ಲ. ಕೊನೆಗೆ ವಿಧಿ ಇಲ್ಲದೆ ಪೋಲಿಸ್ ಸ್ಟೇಶನ್ ಗೆ ಹೋಗಿ ಕಂಪ್ಲೆಂಟ್ ಕೊಡುತ್ತಾರೆ. ಕಂಪ್ಲೆಂಟ್ ಸ್ವೀಕರಿಸಿದ ಇನ್ಸ್ ಪೆಕ್ಟರ್ ತನ್ನ ಎಡ ಕಾಲನ್ನು ಬಲ ಕಾಲಿನ ಮೇಲೆ ಇಟ್ಟು ಕುರ್ಚಿಯಲ್ಲಿ ಹಿಂದಕ್ಕೆ ಬಾಗುತ್ತಾ ಕೇಳುತ್ತಾನೆ
"ನಿಮ್ಮ ಕಾರಿನ ನಂಬರ್ ಏನು ?"
  ZY 989
 "ನಿಮ್ಮ ಕಾರು ಸಿಕ್ಕಿದೆ".
 "ಎಲ್ಲಿದೆ ಸರ್ ?" ಪಿಯಾನ ಮತ್ತು ಅರ್ಥರ್ ಆತುರದಿಂದ ಕೇಳುತ್ತಾರೆ.
 "ಇಲ್ಲೇ ಪಕ್ಕದ ಕೆರೆಯಲ್ಲಿ ಅದರೊಂದಿಗೆ ನಮ್ಮ ಒಬ್ಬ ಪೋಲಿಸ್ ಪ್ರಾಣ ಕಳಕೊಂಡಿದ್ದಾನೆ".
 "ಕೆರೆಯಲ್ಲಾ"!? "ಪೋಲಿಸ್ ನಮ್ಮ ಕಾರನ್ನು ಹೇಗೆ ಕೊಂಡೊಗಿದ್ದಾನೆ ?" ಪಿಯಾನ ಮತ್ತು ಅರ್ಥರ್ ಆತಂಕದಿಂದ ಕೇಳುತ್ತಾರೆ.
 "ಹೌದು ನಾವು ರೆಸ್ಟೋರೆಂಟಿನ ಎದುರು ನಿಲ್ಲಿಸಿರುವ ಎಲ್ಲಾ ಕಾರುಗಳ ಡುಪ್ಲಿಕೇಟ್ ಕೀಯನ್ನು ತೆಗೆದುಕೊಂಡು ಒಂದು ಸರ್ ಪ್ರೈಸ್ ಅನ್ಫೋರ್ಚುನೇಟ್ ಆಕ್ಸಿಡೆಂಟನ್ನು ತನಿಖೆ ನಡೆಸುತ್ತಿದ್ದೆವು ಈಗ ಅನ್ಫೋರ್ಚುನೇಟ್ ಮರ್ಡರನ್ನು ತನಿಖೆ ನಡೆಸಬೇಕಾಗಿದೆ."
"ಅಂದರೆ ಅರ್ಥವಾಗಲಿಲ್ಲ" ಫಿಯಾನ ಭಯ ಕುತೂಹಲದಿಂದ ಕೇಳುತ್ತಾಳೆ
"ಅಂದರೆ  ಕಾರಿನ ಬ್ರೇಕ್ ಫೇಲ್ ಮಾಡಿ ಅರ್ಥರನ್ನು ಯಾರೋ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ."
"ಯಾಕೆ ಅರ್ಥರನ್ನು ಕೊಲ್ಲುತ್ತಾರೆ"
"ಕಾರಣ ಏನೇ ಆಗಿರಬಹುದು" 
ಇಲ್ಲ.. ಸಾಧ್ಯನೇ ಇಲ್ಲ ಎನ್ನುತ್ತಾಳೆ ಫಿಯಾನ.ಅರ್ಥರ್ ಕೂಡ ಸಾಧ್ಯವಿಲ್ಲ ಅನ್ನುತಾನೆ
ಪ್ಲಾಟ್ ಗೆ ಹಿಂತಿರುಗಿ ಹೋಗುತ್ತಿದ್ದ ಅರ್ಥರ್ ಅಟ್ಟದಲ್ಲಿನ ಇಲಿಯನ್ನು ಕಂಡು ಜೀವ ಕೈಯಲ್ಲಿ ಹಿಡಿದುಕೊಂಡು ಓಡುವ ಇಲಿಯಂತೆ ನಡೆಯುತ್ತಾನೆ. ಲಿಫ್ಟನ್ನು ಪ್ರವೇಶಿಸುವಾಗ ತನ್ನ ಪತ್ನಿ ಫಿಯಾನಳನ್ನು ಮೊದಲು ಕಳುಹಿಸಿ ಅದರಲ್ಲಿ ಯಾರೂ ಇಲ್ಲ ಎಂದು ಖಚಿತ ಪಡಿಸಿ ಕೊಂಡ  ನಂತರ ಒಳ ಪ್ರವೇಶಿಸುತ್ತಾನೆ. ರಾತ್ರಿ ಮಲಗಿರುವಾಗ ಖಡ್ಗವನ್ನು ತನ್ನ ಪಕ್ಕದಲ್ಲಿ ಇಟ್ಟು ಕೊಂಡು ಮಂಚದ ಮೇಲಿಂದಲೇ ಬಗ್ಗಿ ನೋಡಿ ಕೆಳಗೆ ಯಾರಾದರೂ ಅಡಗಿಕೊಂಡಿದ್ದಾರೆಯೇ ಎಂದು ನೋಡುತ್ತಾನೆ. ರಾತ್ರಿ ನಿದ್ದೆಯಿಂದ ಒಮ್ಮೆಲೇ ಎಚ್ಚರಗೊಂಡು ಕಿಟಕಿಯ ಪಕ್ಕ ಯಾರೋ ನಿಂತು ಕೊಂಡಂತೆ ಭಾಸವಾದಾಗ ತನ್ನ ಖಡ್ಗದಿಂದ ಅಲ್ಲಿರುವ ವಸ್ತುಗಳನ್ನೆಲ್ಲ ಪುಡಿ ಪುಡಿ ಮಾಡುತ್ತಾನೆ.
ಎಚ್ಚರಗೊಂಡ ಫಿಯಾನ ಗಾಳಿಗೆ ಹಾರಾಡುವ ಕಿಟಕಿಯ ಪರದೆಯನ್ನು ತೋರಿಸಿ ಸರಿಪಡಿಸುತ್ತಾಳೆ.
ಮುಂಜಾನೆ ಪ್ಲಾಟ್ ನ ಎಲ್ಲಾ ರೂಮ್ ಗಳಿಗೆ ಹಾಲನ್ನು ತಲುಪಿಸುತ್ತಿದ್ದ ಹುಡುಗನಿಗೆ ಪ್ಲಾಟ್ ನ ಕೇರ್ ಟೇಕರ್ ಸಹಾಯ ಮಾಡುತ್ತಾನೆ. ಹಾಲಿನ ಎರಡು ಬಾಟಲನ್ನು ಅಲ್ಲೇ ಪ್ರಿಮೈಸಸ್ ನಲ್ಲಿ ಇಟ್ಟು ಹಾಲು ಹಸ್ತಾಂತರಿಸುವುದರಲ್ಲಿ ಪ್ಲಾಟ್ ನ ಕೇರ್ ಟೇಕರ್ ಕೂಡಾ ನಿರತನಾಗಿರುತ್ತಾನೆ. ಅಲ್ಲಿ ಯಾರೂ ಇಲ್ಲದಾಗ ಅಲ್ಲಿಗೆ ಎಂಟ್ರಿ ಕೊಟ್ಟ ಲೆದರ್ ಕೋಟಿನ ದಪ್ಪ ಪ್ರೇಮ್ ಇರುವ ಕನ್ನಡಕಧಾರಿ ಮನುಷ್ಯ ಅಲಿರುವ ಎರಡು ಬಾಟಲ್ ಹಾಲಿಗೆ ಕೈ ಕೊಡುತ್ತಾನೆ. ಕ್ಷಣ ಮಾತ್ರದಲ್ಲಿ ಅದೇ ಎರಡು ಬಾಟಲಿ ಹಾಲನ್ನು ಅದೇ ಜಾಗದಲ್ಲಿ ಇಡುತ್ತಾನೆ. ಬೆಳಿಗ್ಗೆ ಎದ್ದ ಅರ್ಥರ್ ತನ್ನ ಖಡ್ಗವನ್ನು ಹಿಡಿದು ಬೆಕ್ಕಿನ ಹೆಜ್ಜೆ ಇಡುತ್ತಾ ಬಾಗಿಲು ತೆರೆದಿದ್ದಾನೆ. ಆಗ ಬಾಗಿಲಿನ ಬುಡದಲ್ಲಿ ತಮಗೆ ಬಂದಿರುವ ಹಾಲಿನ ಬಾಟಲಿಯನ್ನು ಎತ್ತಿ ಕೊಂಡವನೇ ಬಾಗಿಲನ್ನು ಕೂಡಲೇ ಭದ್ರಪಡಿಸಿ ತನ್ನ ಪತ್ನಿ ಫಿಯಾನಳ ಕೈಯಲ್ಲಿ ಕೊಟ್ಟು ಇಬ್ಬರೂ ಒಟ್ಟಿಗೆ ಕುಳಿತು ಕೊಳ್ಳುತ್ತಾರೆ. 
  "ನಿನ್ನನ್ನು ಯಾರೋ ಕೊಲ್ಲಲು ಪ್ರತ್ನಿಸುತ್ತಿದ್ದಾರೆ". ನಿನಗೆ ಗೊತ್ತು. "ಯಾರವನು ?" ಎಂದು ಗದ್ಗದಿತ ದ್ವನಿಯಲ್ಲಿ ಫಿಯಾನ ಕೇಳುತ್ತಾಳೆ.
"ನನಗೆ ಗೊತ್ತಿದ್ದರೆ ನಾನು ಪೋಲಿಸರಿಗೆ ತಿಳಿಸುತ್ತಿರಲಿಲ್ಲವೇ ?" ಎಂದು ಉದಾಸೀನವಾಗಿ ಉತ್ತರಿಸುತ್ತಾ  ಬಾಟಲಿಯ ಹಾಲನ್ನು ಟ್ಟೆಗೆ ಹಾಕುತ್ತಿದ್ದಾಗ, ಒಮ್ಮೆಲೇ ಬೃಹದಾಕಾರದ ಹೊಗೆ ಬರುತ್ತದೆ. ಅದು ಇಡೀ ಕೋಣೆಯನ್ನು ಸುತ್ತುವರಿಯುತ್ತದೆ.
ಇದು ಆಸಿಡ್.... ಆಸಿಡ್.... ಎಂದು ಅರ್ಥರ್ ಬೊಬ್ಬೆ ಹಾಕುತ್ತಾನೆ. ಜೊತೆಗೆ ಫಿಯಾನಳ ಆರ್ತನಾದ.
ಬಾಟಲಿಯಲ್ಲಿದ್ದುದು ಹಾಲಾಗಿರಲಿಲ್ಲ. ಅದು ಹೈಡ್ರೋಕ್ಲೋರಿಕ್ ಆಸಿಡ್. ಹಾಲೆಂದು ಕುಡಿದ ಪ್ಲಾಟ್ ನ ಕೇರ್ ಟೇಕರ್ ಕುಳಿತ ಕುರ್ಚಿಯಲ್ಲಿಯೇ ಬಾಯಿಂದ ಹೊಗೆ ಬಂದು ಜೀವ ಬಿಡುತ್ತಾನೆ.

ಅಂದರೆ ನಿಜವಾದ ಕಥೆ ಏನು ? ಅರ್ಥರನ್ನು ಕೊಲ್ಲಲು ಪ್ರಯತ್ನಿಸುವವರು ಯಾರು ? ಅರ್ಥರ್ ಗೆ ತನ್ನನ್ನು ಕೊಲ್ಲಲು ಪ್ರಯತ್ನಿಸುವವರು ಯಾರೆಂದು ಗೊತ್ತಿದೆಯಾ ?  

ಫಿಯಾನ:(ತುಂಬಾ ಸಿಟ್ಟಿನಿಂದ) "ನಾನು ನಿನ್ನಿಂದ ದೂರ ಹೋಗುತ್ತಿದ್ದೇನೆ".
ಅರ್ಥರ್: "ನೀನು ಯಾವಾಗ ಹಿಂತಿರುಗಿ ಬರುತ್ತೀಯಾ ?" ಸಾವಧಾನವಾಗಿ ಕೇಳುತ್ತಾನೆ.
ಫಿಯಾನ: "ನಾನು ಹಿಂದೆ ನಿನ್ನಲ್ಲಿಗೆ ಬರುವುದಿಲ್ಲ. ನಾನು ನನ್ನ ಮುಂದಿನ ಒಳ್ಳೆಯ ಜೀವನಕ್ಕೆ ಹೋಗುತ್ತಿದ್ದೇನೆ".(ತೀಕ್ಷ್ಣ ಉತ್ತರ)
ಅರ್ಥರ್: ಯಾಕೆ..ಏನಾಯ್ತು..?
ಫಿಯಾನ:"ನಮಗೆ ಸರಿ ಬರುವುದಿಲ್ಲ"
ಅರ್ಥರ್: ರಬ್ಬಿಶ್..ಸರಿ ಬರುವುದಿಲ್ಲವೆಂದರೆ...? ನಾವು ಇಷ್ಟಪಟ್ಟೇ ಮದುವೆಯಾಗಿದ್ದೇವೆಯಲ್ಲವೇ ? ಸಂತೋಷವಾಗಿಯೇ ಇದ್ದೇವೆಯಲ್ಲವೇ ?" ಅರ್ಥರ್ ಈಗ ಕೋಪಗೊಂಡಿದ್ದಾನೆ.
ಫಿಯಾನ: ನಾನು ಸಂತೋಷವಾಗಿಲ್ಲ.
ಅರ್ಥರ್: ಓಹ್..ಅಂದರೆ ನಾವು ಸಂತೋಷವಾಗಿಲ್ಲ ಎಂಬ ಪ್ರಶ್ನೆಯಲ್ಲ. ನೀನು ಮಾತ್ರ ಸಂತೋಷವಾಗಿಲ್ಲ.
ಫಿಯಾನ: (ಕಿರುಚಾಡುತ್ತಾ) ನಾವು ಯಾವಾಗಲೂ ವಾದಮಾಡುತ್ತಿರುತ್ತೇವೆ. ಈಗಲೂ ವಾದ ಮಾಡುತ್ತಿದ್ದೇವೆ.
ಅರ್ಥರ್: (ಕ್ಷೀಣ ಧ್ವನಿಯಲ್ಲಿ) ಅಲ್ಲ ನಾವು ದಿಸ್ಕಸ್ ಮಾಡುತ್ತಿದ್ದೇವೆ.
ಫಿಯಾನ:(ಜೋರಾಗಿ) ಇಲ್ಲ ವಾದ ಮಾಡುತ್ತಿದ್ದೇವೆ.

                                                   ಚಿತ್ರ ಕೃಪೆ:ಅಂತರ್ಜಾಲ.
   
ಇದು ಅರ್ಥರ್ ತಮ್ಮ ಮದುವೆಯ 5ನೇ ವರ್ಷದ ಸಂಭ್ರಮ ಆಚರಿಸಲು ಮನೆಗೆ ಬಂದಾಗ ತನ್ನ ಹೆಂಡತಿ ಫಿಯಾನಳೊಂದಿಗೆ ನಡೆದ ವಾಗ್ವಾದ. ತನ್ನ ಗೆಳೆಯ ಸಿಮನ್ಸ್ ನೊಂದಿಗೆ ಜೀವಿಸಲು ತನ್ನ ಐದು ವರ್ಷದ ದಾಂಪತ್ಯವನ್ನು ವೀಳ್ಯದೆಲೆಯ ತೊಟ್ಟನ್ನು ಚಿವುಟಿ ಹಿಂದಕ್ಕೆ ಬಿಸಾಡಿದಂತೆ ತ್ಯಜಿಸಿ ತನ್ನ ಬಟ್ಟೆ ಬರೆಗಳನ್ನು ಜೋಡಿಸುವುದರಲ್ಲಿ ನಿರತಳಾಗಿರುತ್ತಾಳೆ. ಕೋಪ ಉದ್ವೇಗದಿಂದ ಆಚೆ ಈಚೆ ಸಂಚರಿಸುವ ಅರ್ಥರ್ ಅಲ್ಲೇ ಕುಳಿತುಕೊಂಡಿರುವ, ಸೂರ್ಯರಶ್ಮಿಗೆ ಸುಟ್ಟು ಕರಕಲಾಗಿರುವ ಕಪ್ಪು ಮುಖದ, ದಪ್ಪ ತುಟಿಯ ವ್ಯಕ್ತಿಯನ್ನು ಗಮನಿಸುತ್ತಾನೆ. ಕೋಪದ ಕೈಗೆ ಬುದ್ದಿಯನ್ನು ಕೊಟ್ಟ ಅರ್ಥರ್ ಒಂದೇ ಸವನೆ ಮುಖ ಮೂತಿ ನೋಡದೆ ಹೊಡೆಯಲು ಶುರುಮಾಡುತ್ತಾನೆ. ನನ್ನ ಹೆಂಡತಿಯನ್ನು ನನ್ನಿಂದ ದೂರ ಮಾಡಲು ಎಷ್ಟು ದೈರ್ಯ ನಿನಗೆ, ಹೋಗು ಹೊರಗೆ ಎಂದು ಎಳೆದುಕೊಂಡು ಹೋಗುತ್ತಿರಲು, ಗಮನಿಸಿದ ಫಿಯಾನ ಅವನು ಕಾರಿನ ಡ್ರೈವರ್ ನನ್ನ ಬರುವಿಕೆಗಾಗಿ ಕಾಯುತ್ತಿದ್ದಾನೆ. ನಾನು ಸೇರಿಕೊಳ್ಳಲು ಹೋಗುತ್ತಿರುವ ವ್ಯಕ್ತಿ ಇವನಲ್ಲ ಎನ್ನುತ್ತಾಳೆ. ಏನೂ ಅರ್ಥವಾಗದ ಕಾರಿನ ಡ್ರೈವರ್ ಹೆದರಿಕೆಯಿಂದ ನಡುಗುತ್ತಾ ನಿಂತುಕೊಳ್ಳಲೋ ಹೋಗಲೋ ಎಂಬ ದ್ವಂದ್ವದಲ್ಲಿ ತಬ್ಬಿಬ್ಬಾಗಿರುತ್ತಾನೆ.    

   ಅರ್ಥರ್  ತನ್ನ ಹೆಂಡತಿ ಬಿಟ್ಟು ಹೋದ ನಂತರ ಧೃತಿಗೆಡುತ್ತಾನೆ. ಮಾನಸಿಕ ಆಘಾತಕ್ಕೊಳಗಾಗುತ್ತಾನೆ. ಮಾನಸಿಕ ಕ್ಷೋಭೆಯಿಂದ ಕುಡಿತ ಶುರು ಮಾಡುತ್ತಾನೆ. ಹತಾಶನಾದ ಅರ್ಥರ್ ತನಗೆ ಸಾಂತ್ವಾನ ಸಿಗಬಹುದೆಂಬ ನಿರೀಕ್ಷೆಯಿಂದ   ತನ್ನ ಗೆಳೆಯ ಸಿಮನ್ಸ್ ಗೆ ಫೋನ್ ಮಾಡುತ್ತಾನೆ. ತನ್ನ ಹೆಂಡತಿ ತನ್ನಿಂದ ದೂರವಾದ ವಿಷಯವನ್ನು ಅತ್ಯಂತ ಬೇಸರದಿಂದ ವಿವರಿಸುತ್ತಾನೆ. ಆದರೆ ಅವನನ್ನೇ ಸೇರಲು ಹೋದ ಫಿಯಾನ ಹತ್ತಿರದಲ್ಲೇ ಇದ್ದರೂ ಅವಳಿಗೆ ಗೊತ್ತಾಗದಂತೆ  ನೀನು ಅವಳಿಂದ ದೂರವಾಗುವುದೇ ಒಳ್ಳೆಯದು ಎಂದು ಹೇಳಿ ಫೋನನ್ನು ಇಟ್ಟು ಬಿಡುತ್ತಾನೆ.

  ಈಗ ಅರ್ಥರ್ ಸಾಯಲು ನಿರ್ಧರಿಸಿದ್ದಾನೆ.ಆದರೆ ಆತ್ಮಹತ್ಯೆ ಮಾಡಿಕೊಳ್ಳಲು ಭಯ. ಧೈರ್ಯ ಮಾಡಿ ಪ್ಲಾಟ್ ನ ಮಹಡಿಯ ತಡೆ ಗೋಡೆಯ ಹೊರಗೆ ಒಂದು ಕಾಲನ್ನು ಹಾಕಿ ಇನ್ನೇನು ಜಿಗಿಯಲು ಪ್ರಯತ್ನಿಸುತ್ತಿರಲು, ಕೆಳಗೆ ಇದ್ದ ಪ್ಲಾಟ್ ನ ಕೇರ್ ಟೇಕರ್ ಬೊಬ್ಬೆ ಹೊಡೆದು ತಡೆಯುತ್ತಾನೆ.ರೂಮ್ ನ ಒಳಗೆ ಬಂದ ಅರ್ಥರ್ ಒಂದು ಬ್ಲೇಡನ್ನು ಹಿಡಿದು ಕೈಯನ್ನು ಇರಿದುಕೊಳ್ಳಲು ಯತ್ನಿಸುತ್ತಿರುವಾಗ ಫೋನ್ ರಿಂಗಾಗುತ್ತದೆ.
“ತನ್ನ ಹೆಂಡತಿ ಫಿಯಾನಳಿಂದ ಬಂದ ಫೋನನ್ನು ರಿಸೀವ್ ಮಾಡಿದ ಅರ್ಥರ್ ಹೇಗಿದ್ದಿಯಾ ಡಾರ್ಲಿಂಗ್ ? ಇತ್ತೀಚೆಗೆ ಯಾವುದಾದರೂ ಮೂವಿ ನೋಡಿದ್ದೀಯಾ ? ನಾನು ಈಗ ಸಾಯಲು ಹೊರಟಿದ್ದೇನೆ.”
“ಏನು ಸಾಯಲು ಹೊರಟಿದ್ದೀಯ ?”  ಫಿಯಾನ ಉದ್ವೇಗದಿಂದ ಕೇಳುತ್ತಾಳೆ.
 “ಹೌದು ಬಾತ್ ರೂಮ್ ಬಾಟಲಿಯಲ್ಲಿರುವ ಎಲ್ಲಾ ಮಾತ್ರೆಗಳನ್ನು ನುಂಗುತ್ತಿದ್ದೇನೆ.”
“ಅದು ನೋವು ಕಡಿಮೆ ಮಾಡುವ ಔಷಧಿ ಕೇವಲ ಐದು ಮಾತ್ರ ಇದೆ” ಫಿಯಾನ ವ್ಯಂಗ್ಯದ ಧ್ವನಿಯಲ್ಲಿ ಹೇಳುತ್ತಾಳೆ
“ಶಿಫಾರಸ್ಸು ಮಾಡಿದುದಕ್ಕಿಂತ ಇನ್ನು ಮೂರು ಹೆಚ್ಚೇ ಇದೆ” ಅರ್ಥರ್ ತುಸು ಅವಿನಯವಾಗಿ ಉತ್ತರಿಸುತ್ತಾನೆ.


   ವಯರನ್ನು ತನ್ನ ಕೈಗೆ ಸುತ್ತಿಕೊಂಡು ವಿದ್ಯುತ್ ಪ್ರವಹಿಸಿ ಕುರ್ಚಿಯಲ್ಲಿ ಕುಳಿತು ಕುರ್ಚಿಯನ್ನು ನಿಧಾನ ಹಿಂದಕ್ಕೆ ಸರಿಸಿ ಸ್ವಿಚ್ ಒತ್ತಲು ವಿದ್ಯುತ್ ಸ್ವಿಚ್ ನ ಕಡೆಗೆ ಅರ್ಥರ್ ಕೈ ಆಡಿಸುತ್ತಾನೆ. ಇನ್ನೇನು ಸ್ವಿಚ್ ಒತ್ತಬೇಕು ಎನ್ನುವಷ್ಟರಲ್ಲಿ ರೂಮ್ ಬಾಗಿಲಿನ ಬೆಲ್ ರಿಂಗ್ ಆಗುತ್ತದೆ. ಮಾಡಲು ಯಾವುದಾದರೂ “ವಿಲಕ್ಷಣ ವೃತ್ತಿ ಇದೆಯೇ ?” ಎಂದು ಲೆದರ್ ಕೋಟ್ ನ ದಪ್ಪ ಕನ್ನಡಕದ ಒಬ್ಬ ವ್ಯಕ್ತಿ ಒಳ ಪ್ರವೇಶಿಸುತ್ತಾನೆ. ಇಲ್ಲ ಎಂದ ಅರ್ಥರ್, ಸ್ವಲ್ಪ ಯೋಚಿಸಿ ಹೊರ ಹೋಗುತ್ತಿರುವ ಲೆದರ್ ಕೋಟ್ ನ ವ್ಯಕ್ತಿಯನ್ನು ತಡೆದು ಒಳಗೆ ಬರಮಾಡಿಕೊಳ್ಳುತ್ತಾನೆ. ತನ್ನ ಪರ್ಸಿನಿಂದ ಕೆಲವು ನೋಟುಗಳನ್ನು ತೆಗೆದು ಆ ಕಪ್ಪು ಕೋಟ್ ನ ವ್ಯಕ್ತಿಗೆ ಕೊಟ್ಟ ಅರ್ಥರ್ ನೋಡು ನಾನು ಆ ಕುರ್ಚಿಯಲ್ಲಿ ಕುಳಿತ ಕೂಡಲೇ ನೀನು ಈ ಸ್ವಿಚ್ಚನ್ನು ಒತ್ತಬೇಕು. ಓಕೆ ಎಂದು ನೋಟನ್ನು ಆಡಿಸುತ್ತಾ ಸ್ವಿಚ್ ನ ಕಡೆಗೆ ನಿಧಾನವಾಗಿ ಹೆಜ್ಜೆ ಹಾಕಿದ ವ್ಯಕ್ತಿ ತಲೆ ಆಡಿಸುತ್ತಾ ಹಿಂದಕ್ಕೆ ತಿರುಗಿ ಬರುತ್ತಾನೆ.
“ನಾನು ಈ ಸ್ವಿಚ್ಚನ್ನು ಒತ್ತಿದ ಕೂಡಲೇ ನೀನು ಸಾಯುತ್ತೀಯ. ಕೇವಲ ಕೆಲವು ರೂಪೈಗಳಿಗೆ ನಾನು ನಿನ್ನನ್ನು ಮರ್ಡರ್ ಮಾಡಬೇಕೆ ?”
ಕುರ್ಚಿಯಿಂದ ಎದ್ದ ಅರ್ಥರ್ "ನೋಡು ಈ ಟಿ.ವಿ. ಚೆನ್ನಾಗಿದೆ ಎಂದು ಆನ್ ಮಾಡಿ ತೋರಿಸುತ್ತಾ, ಆ ವಾಸಿಂಗ್ ಮೆಸಿನ್, ಈ ಪ್ರಿಜ್ ಮತ್ತು ಇಲ್ಲಿರುವ ಎಲ್ಲಾ ಬೆಳೆಬಾಳುವ ವಸ್ತುಗಳನ್ನು ನಿನಗೆ ಕೊಡುತ್ತೇನೆ. ನಿನಗೆ ಹಣನೂ ಕೊಡುತ್ತೇನೆ. ನೀನು ನನಗೆ ಗೊತ್ತಾಗದಂತೆ ನನ್ನ ಕಣ್ಣ ಮುಂದೆ ಬಾರದೆ ನನ್ನನ್ನು ಕೊಲ್ಲಬೇಕು".

   ಅರ್ಥರ್ ಮತ್ತು ಕಪ್ಪು ಕೋಟಿನ ವ್ಯಕ್ತಿಯ ಜೊತೆ ನಡೆದ ಒಪ್ಪಂದದಂತೆ ಆ ದಿನ ಸಂಜೆ ಅರ್ಥರ್ ಪಾರ್ಕಳ್ಳಿ ಓಡಾಡಬೇಕು ಆಗ ಆ ವ್ಯಕ್ತಿ ಅರ್ಥರ್ ಗೆ ಗೊತ್ತಾಗದಂತೆ ಅರ್ಥರನ್ನು ಈ ಪ್ರಪಂಚದಿಂದ ಕಳಿಸಿಕೊಡುತ್ತಾನೆ. ಸಂಜೆ ಪಾರ್ಕ್ ನ ಒಂದು  ಬದಿಯಲ್ಲಿ ಗುಂಡಿಯೊಂದನ್ನು ತೋಡಿ ಕಾಯುತ್ತಿದ್ದ ಕೋಟ್ ಧಾರಿ ವ್ಯಕ್ತಿಗೆ ಅರ್ಥರ್ ದೂರದಲ್ಲಿ ಬರುವುದು ಕಂಡು ಹಿಂದಿನಿಂದ ಹೋಗಿ ತಾನು ಗುಂಡಿ ತೆಗೆದ ಆಯುಧದಲ್ಲಿ ಹೊಡೆಯುತ್ತಾನೆ. ಆಗ ನೆಲಕ್ಕೆ ಬಿದ್ದ ಅರ್ಥರನ್ನು ಎತ್ತಲು ಆಗದೆ ವ್ಹೀಲ್ ಚೇರ್ ತರಲು ಓಡುತ್ತಾನೆ. ಆಗ ಆ ವ್ಯಕ್ತಿ ತೋಡಿದ್ದ ಗುಂಡಿಯಲ್ಲಿ ಇನ್ಯಾರೋ ಬಿದ್ದು ಸೃತಿ ತಪ್ಪಿರುತ್ತಾರೆ. ಗುಂಡಿಯಲ್ಲಿ ಬಿದ್ದ ಮನುಷ್ಯನನ್ನು ಎಬ್ಬಿಸಲು ಕೋಟ್ ಧಾರಿ ವ್ಯಕ್ತಿ ಪ್ರಯತ್ನ ಪಡುತ್ತಿರುವಾಗಲೇ, ಆ ಕಡೆಯಿಂದ ಪ್ರಜ್ಣೆ ಬಂದ ಅರ್ಥರ್ ಆಚಿಚೆ ನೋಡಿ ನಿದ್ದೆಯಿಂದ ಎದ್ದು ಹೋದ ಹಾಗೆ ಹೋದದ್ದು ಕೋಟ್ ಧಾರಿ ವ್ಯಕ್ತಿಗೆ ಗೊತ್ತೇ ಆಗಿರುವುದಿಲ್ಲ.
   
   ತಾನು ಸೇರಲು ಹೋದ ಸಿಮನ್ಸ್ ತನ್ನನ್ನು ದೇಹ ಸಂಪರ್ಕಕ್ಕೆ ಮಾತ್ರ ಬಳಸಲು ಯತ್ನಿಸುತ್ತಿದ್ದಾನೆಯೇ ಹೊರತು ಅವನಲ್ಲಿ ತನ್ನ ಬಗ್ಗೆ ಯಾವುದೇ ಪ್ರೀತಿ ಇಲ್ಲ ಎಂಬುವುದನ್ನು ಅರಿತ ಫಿಯಾನ ತನ್ನ ಮನೆಗೆ ಹಿಂತಿರುಗುತ್ತಾಳೆ. ಹೇಗಿದ್ದರೂ ತಾನು ಇನ್ನು ಯಾವಾಗ ಬೇಕಾದರೂ ತನಗೆ ಗೊತ್ತಿಲ್ಲದೆ ನೆಮ್ಮದಿಯಿಂದ ನಿದ್ದೆ ಮಾಡಿದ ಹಾಗೆ ಸಾಯುತ್ತೇನೆ ಎಂದುಕೊಂಡು ಮನೆಯ ಒಳಗೆ ಪ್ರವೇಶಿಸಿದ ಅರ್ಥರ್ ಗೆ ಆಶ್ಚರ್ಯ. ತನ್ನನ್ನು ಧಿಕ್ಕರಿಸಿ ಹೋಗಿದ್ದ ಫಿಯಾನ ಮನೆಯ ಸೋಫಾದಲ್ಲಿ ಕುಳಿತು ಕೊಂಡಿದ್ದಾಳೆ.
“ಫಿಯಾನ ಏನಾದರೂ ಬಿಟ್ಟು ಹೋಗಿದ್ದೀಯಾ ?”
“ಹೌದು ನಾನು ನಿನ್ನ ಪ್ರೀತಿಯನ್ನು ಬಿಟ್ಟು ಹೋಗಿದ್ದೇನೆ.” ಎಂದು ಅರ್ಥರನ್ನು ತಬ್ಬಿಕೊಂಡು ಮುತ್ತಿಕ್ಕುತ್ತಾಳೆ. ತನ್ನ ತಪ್ಪಿನ ಬಗ್ಗೆ ಪಶ್ಚಾತ್ತಾಪ ಪಟ್ಟು ಕ್ಷಮೆ ಕೇಳುತ್ತಾಳೆ. ಸಂತೋಷಗೊಂಡ ಅರ್ಥರ್ ತನ್ನ ಹೆಂಡತಿ ತನ್ನನ್ನು ಬಿಟ್ಟು ಹೋದ ದಿನದಿಂದ ತಾನು ಅನುಭವಿಸಿದ ಎಲ್ಲಾ ನೋವುಗಳನ್ನು ಒಂದೇ ಕ್ಷಣದಲ್ಲಿ ಮರೆಯುತ್ತಾನೆ. ಕೂಡಲೇ ತಾನು ವಿಲಕ್ಷಣ ವ್ರತ್ತಿಯ ವ್ಯಕ್ತಿಯೊಂದಿಗೆ ತನ್ನನ್ನು ಕೊಲ್ಲಲು ಮಾಡಿಕೊಂಡ ಒಪ್ಪಂದದ ಬಗ್ಗೆ ನೆನಪು ಮಾಡಿಕೊಳ್ಳುತ್ತಾನೆ. ಈಗಲೇ ತಾನು ಮಾಡಿದ್ದ ಒಪ್ಪಂದವನ್ನು ರದ್ದು ಮಾಡಬೇಕೆಂದುಕೊಳ್ಳುತ್ತಿರುವಾಗಲೇ, ಆ ವ್ಯಕ್ತಿಯ ವಿಳಾಸವೆಲ್ಲಿದೆ ? ಆ ವ್ಯಕ್ತಿಯ ಹೆಸರೇ ಗೊತ್ತಿಲ್ಲದ ಮೇಲೆ ವಿಳಾಸವೆಲ್ಲಿಂದ ಬಂತು ? ಈಗ ಅವನಿಗೆ ತಾನು ಸಾಯುತ್ತೇನಲ್ಲ ಎಂಬ ಭಯ ಶುರುವಾಗಿದೆ. ಇಷ್ಟರವರೆಗೆ ಇದ್ದದ್ದು ಸಾಯಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಭಯ. ಇತ್ತ ತನ್ನನ್ನು ಪ್ರೀತಿಸುವ ಹೆಂಡತಿ ಸಿಕ್ಕಿದ್ದಾಳೆ. ಬದುಕು ಇದ್ದಕ್ಕಿದ್ದ ಹಾಗೆ ಬದಲಾಗಿ ಹೋಗಿದೆ. ಆದರೆ ಎಷ್ಟು ದಿನವೋ ಗೊತ್ತಿಲ್ಲ. ಯಾಕೆಂದರೆ ಆ ವಿಲಕ್ಷಣ ವ್ರತ್ತಿಯ ಮನುಷ್ಯ ತನ್ನನ್ನು ಯಾವಾಗ ಬೇಕಾದರೂ ಬಂದು ಕೊಲ್ಲಬಹುದು. ಕೊಲ್ಲೇ ಕೊಲ್ಲುತ್ತಾನೆ.  
    ತಾನು ಮನೆ ಬಿಟ್ಟು ಹೋದ ನಂತರ ಆದ ಘಟನಾವಳಿಯನ್ನು ಕೇಳಿದ ಫಿಯಾನ ಕುಸಿದು ಹೋಗುತ್ತಾಳೆ.ತನ್ನನ್ನು ಕೊಲ್ಲಲು ಅರ್ಥರ್ ತಾನೆ ಒಬ್ಬ ವ್ಯಕಿಯನ್ನು ನೇಮಿಸಿದ್ದಾನೆ ಎಂದು ತಿಳಿದಾಗ ಆರ್ಥರನ್ನು ತಬ್ಬಿಕೊಳ್ಳುತ್ತಾಳೆ.ತನ್ನ ಗಂಡನ ಮೇಲಿನ ಅವಳ ಪ್ರೀತಿ ಈಗ ಹೆಚ್ಚಾಗಿದೆ.ಈಗ ಗಂಡನನ್ನು ಅವಳು ಯಾವ ರೀತಿಯಿಂದಲೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅರ್ಥರಲ್ಲಿ ಆ ವ್ಯಕ್ತಿಯೊಂದಿಗಿನ ತನ್ನ ಮರ್ಡರ್ ಮಾಡುವ ಒಪ್ಪಂದವನ್ನು ಕೂಡಲೇ ರದ್ದು ಮಾಡಲು ಹೇಳುತ್ತಾಳೆ.
" ಅವನನ್ನು ನೋಡಿದುದು ಬಿಟ್ಟರೆ ನನಗೆ ಅವನ ಯಾವುದೇ ವಿಳಾಸವಾಗಲಿ ಹೆಸರಾಗಲಿ ಗೊತ್ತಿಲ್ಲ" ಅರ್ಥರ್ ನೋವಿನಂದ ಹೇಳುತ್ತಾನೆ.
"ಈಗಲೇ ಪೋಲಿಸರಿಗೆ ತಿಳಿಸು"
"ನಾನು ನೇಮಿಸಿದ ವ್ಯಕ್ತಿ ಈಗಾಗಲೇ ಒಬ್ಬ ಪೋಲಿಸ್ ನ್ ಸಾವಿಗೆ ಕಾರಣನಾಗಿದ್ದಾನೆ ಆದುದರಿಂದ ನಾನೇ ತಪ್ಪಿತಸ್ಥನಾಗುತ್ತೇನೆ"
  ತನ್ನ ಗೆಳೆಯ ಸಿಮನ್ಸ್ ಗೆ ಪೋನ್ ಮಾಡಿದ ಫಿಯಾನ ತಕ್ಷಣ ನಮ್ಮ ಮನೆಗೆ ಹೊರಟು ಬರಬೇಕೆಂದು ಯಾವುದೇ ಕಾರಣ ಕೇಳಬಾರದೆಂದು ಹೇಳುತ್ತಾಳೆ. ಆಗ ಮನೆಯ ಬಾಗಿಲಿನ ಬೆಲ್ ರಿಂಗ್ ಆಗುತ್ತದೆ. ತನ್ನಖಡ್ಗವನ್ನುಹಿಡಿದು ಬಾಗಿಲಿನ ಒಂದು ಕಡೆ ಅರ್ಥರ್ ಮತ್ತೊಂದು ಕಡೆ ಫಿಯಾನ ನಿಲ್ಲುತ್ತಾರೆ.  
"ಹೇಗಿದ್ದ ಆ ವ್ಯಕ್ತಿ ?"  ಫಿಯಾನ ಪಿಸುಗುಡುತ್ತಾಳೆ.
"ದಪ್ಪ ಕುಳ್ಳಗೆ" ಎಂದು ಅರ್ಥರ್ ಕೈ ಸನ್ನೆ ಮಾಡುತ್ತಾನೆ.
ಬಾಗಿಲು ತೆರೆದಾಗ ಪ್ಲಾಟ್ ನ ಕೇರ್ ಟೇಕರ್ ನ ಸಾವಿನ ಬಗ್ಗೆ ವಿಚಾರಿಸಲು ಪೋಲಿಸರು ಮನೆಯ ಒಳ ಪ್ರವೇಶಿಸುತ್ತಾರೆ.
"ನೇರವಾಗಿ ಉತ್ತರಿಸಿ ಮಿಸ್ಟರ್ ಅರ್ಥರ್ ಅಂಡ್ ಮಿಸಸ್ ಫಿಯಾನ" ಇನ್ಸ್ ಪೆಕ್ಟರ್ ನ ನೇರ ನುಡಿ.
"ನೀವು ಪ್ಲಾಟ್ ನ ಕೇರ್ ಟೇಕರನ್ನು ಕೊನೆಯ ಸಲ ಯಾವಾಗ ಎಲ್ಲಿ ನೊಡಿದ್ದು ?"
" ನಿನ್ನೆ ನಾವು ರೆಸ್ಟೋರೆಂಟಿನಿಂದ ಹಿಂದೆ ಬರುವಾಗ ನಾನು ಅವನನ್ನು ತಪ್ಪಾಗಿ ತಿಳಿದು ಅವನ ಕುತ್ತಿಗೆ ಹಿಡಿದಿದ್ದೆ. ನಂತರ ಅವನಲ್ಲಿ ಕ್ಷಮೆ ಕೇಳಿದ್ದೆ." ಅರ್ಥರ್ ಹೇಳುತ್ತಾನೆ.
"ಅಂದರೆ ಕೇರ್ ಟೇಕರ್ ಇಂದು ಬೆಳಿಗ್ಗೆ ಹಾಲಿನೊಂದಿಗೆ ಬೆರೆಸಿರುವ ಹೈಡ್ರೋಕ್ಲೋರಿಕ್ ಆಸಿಡ್ ಕುಡಿದು ಸತ್ತದ್ದು ನಿಮಗೆ ಗೊತ್ತಿಲ್ಲ."
"ವಾಟ್..!? ಕೇರ್ ಟೇಕರ್ ಡೈಯಿಡ್ ?" ಫಿಯಾನ ಕಿರುಚಿದ ಧ್ವನಿಯಲ್ಲಿ ಕೇಳುತ್ತಾಳೆ.
"ಅರ್ಥರ್ "ನಿನಗೆ ಅನಿಸಲ್ವ ನಿನ್ನನ್ನು ಕೊಲ್ಲಲು ಪ್ರತ್ನಿಸುವವನೇ ಹಾಲಿನೊಂದಿಗೆ ವಿಷ ಬೆರೆಸಿರಬಹುದೆಂದು ?"
"ನಾನು ನಿನ್ನೆ ಅವನಿಗೆ ನನ್ನ ಹತ್ಯಾ ಪ್ರಯತ್ನದ ಬಗ್ಗೆ ತಿಳಿಸಿದ್ದೆ."
"ನೀನೇ ಯಾಕೆ ಕೇರ್ ಟೇಕರನ್ನು ಕೊಂದಿರಬಾರದು?"
"ಎಸ್..ನೋ.." ಅರ್ಥರ್ ಆತಂಕದಿಂದ ಉತ್ತರಿಸುತ್ತಾನೆ.
"ಏನು ಎಸ್ ನೊ ಎಸ್ ನೊ" ಇನ್ಸ್ ಪೆಕ್ಟರ್ ಗದರಿಸುತ್ತಾನೆ.
ಅಲ್ಲೇ ಇರುವ ವಯರನ್ನು ನೋಡಿ "ಏನಿದು ವಯರ್ "
"ನಾನು ಮತ್ತು ಫಿಯಾನ ಸ್ಕಿಪ್ಪಿಂಗ್ ಮಾಡುತ್ತಿದ್ದೆವು"
"ಇಲ್ಲಿ ಸ್ಕಿಪ್ಪಿಂಗ್ ಮಾಡುವುದಾ ?"
"ಹೌದು ಕೆಲವೊಮ್ಮೆ ಬೆಡ್ ರೂಮಲ್ಲೂ ಸ್ಕಿಪ್ಪಿಂಗ್ ಮಾಡುತ್ತೇವೆ." ಅರ್ಥರ್ ಗಡಿಬಿಡಿಯಿಂದ ಹೇಳುತ್ತಾನೆ. 
ಏನಾದರೂ ವಿಷಯವಿದ್ದರೆ ನಮಗೆ ತಿಳಿಸಿ ಎಂದು ಪೋಲಿಸರು ಅಲ್ಲಿಂದ ಹೊರಡುತ್ತಾರೆ.

  ಫಿಯಾನಳಿಗಾಗಿಯೇ ಬಂದ ಅವಳ ಗೆಳೆಯ ಸಿಮನ್ಸ್, ಫಿಯಾನ ಮತ್ತು ಅರ್ಥರ್ ನೊಂದಿಗೆ ಸಿನಿಕಲ್ ಪೋಲಿಸರನ್ನು ಭೇಟಿ ಮಾಡಿ ಅರ್ಥರ್ ಮೇಲೆ ನಡೆಯುತ್ತಿರುವ ನಿರಂತರ ಹತ್ಯಾ ಪ್ರಯತ್ನಗಳ ತನಿಖೆ ನಡೆಸಲು ಕೇಳಿಕೊಳ್ಳುತ್ತಾರೆ.
ಫಿಯಾನಳನ್ನು ಪಡೆಯಲು ಹಂಬಲಿಸುತ್ತಿರುವ ಸಿಮನ್ಸ್ ಆ ದಿನ ಅರ್ಥರ್ ಕಾರನ್ನು ಡ್ರೈವ್ ಮಾಡುತ್ತಾ ಎಲ್ಲಿಗೋ ಹೊರಟಿದ್ದಾನೆ. ಟ್ರಾಫಿಕ್ ಮಧ್ಯೆ ಕಾರು ಒಮ್ಮೆಲೇ ನಿಲ್ಲುತ್ತದೆ. ಹಿಂದಿನ ವಾಹನಗಳ ಹಾರ್ನ್ ಶಬ್ಧಗಳು ಒಂದೇ ಸವನೆ ಕೇಳಿ ಬರುತ್ತಿರುವಾಗಲೇ ಲೆದರ್ ಕೋಟಿನ ವ್ಯಕ್ತಿ ಗ್ಲೌಸ್ ಹಾಕಿದ ಕೈಯಿಂದ ಕಾರ್ ಡ್ರೈವ್ ಮಾಡುತ್ತಿರುವ ವ್ಯಕ್ತಿಯ ಕುತ್ತಿಗೆಯನ್ನು ಅದುಮಿ ಹಿಡಿದು ಮರ್ಡರ್ ಮಾಡಿ ಕಾರಿನಿಂದ ಕೆಳಗಿಳಿದು ಹೋಗಲು, ಹೊರಡುವ ಮುಂಚೆ ಒಮ್ಮೆ ಒಳಗೆ ಇಣುಕುತ್ತಾನೆ. ಸತ್ತಿರುವವನು ಅರ್ಥರ್ ಆಗಿರಲಿಲ್ಲ. ಮನಸ್ಸಿನಲ್ಲಿ ಶಪಿಸುತ್ತಾ ಟ್ರಾಫಿಕ್ ಮಧ್ಯೆ ವೇಗದ ಹೆಜ್ಜೆ ಹಾಕುತ್ತಾನೆ.

    ತನ್ನ ಎಲ್ಲಾ ಹತ್ಯಾ ಪ್ರಯತ್ನಗಳು ವಿಫಲವಾಗುತ್ತಿರುವಾಗ ಅರ್ಥರ್ ಗೆ ಫೋನ್ ಮಾಡಿದ ವ್ಯಕ್ತಿ ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿಕೊಡುವಂತೆ ಅರ್ಥರ್ ಗೆ ಹೇಳುತ್ತಾನೆ. ಸಿನಿಕಲ್ ಪೋಲಿಸರೊಂದಿಗೆ ಪ್ರಾಣಿ ಸಂಗ್ರಹಾಲಯದಲ್ಲಿ ಹೆಜ್ಜೆ ಹಾಕುತ್ತಿರುವ ಅರ್ಥರ್ ಗೆ ಅಲ್ಲಿ ಹುಲಿಯ ವೇಷ ಧರಿಸಿ ಕುಳಿತುಕೊಂಡಿರುವ ವಿಲಕ್ಷಣ ವೃತ್ತಿಯ ವ್ಯಕ್ತಿ ಅರ್ಥರ್ ಕಡೆಗೆ ಗುಂಡು ಹಾರಿಸುತ್ತಾನೆ. ಮಧ್ಯದಲ್ಲಿ ಪ್ರವಾಸದ ಬಸ್ಸು ಹೋದದ್ದರಿಂದ ಅದರಲ್ಲಿರುವ ಜನರಿಗೆ ಗುಂಡು ತಾಗಿ ಹಲವಾರು ಜನರು ಸಾವನ್ನಪ್ಪುತ್ತಾರೆ. ಬಸ್ಸಿನ ಮೇಲೆ ನಡೆದ ಗುಂಡಿನ ದಾಳಿಯಿಂದಾಗಿ ಅಲ್ಲಿರುವವರ ಓಡಾಟದ ಮಧ್ಯೆ ತಪ್ಪಿಸಿಕೊಂಡು ಲಿಫ್ಟ್ ನಲ್ಲಿ ಅಡಗಿಕೊಂಡಿರುವ ಕಪ್ಪು ಕೋಟಿನ ವ್ಯಕ್ತಿಯನ್ನು ಅರ್ಥರ್ ಮತ್ತು ಫಿಯಾನ ಸೇರಿ ಹಿಡಿದು ಕೊನೆಗೂ ಅರ್ಥರನ್ನು ಕೊಲ್ಲುವ ಒಪ್ಪಂದವನ್ನು ರದ್ದು ಮಾಡುತ್ತಾರೆ. ಆ ವಿಲಕ್ಷಣ ವೃತ್ತಿ ಮಾಡುವ ವ್ಯಕ್ತಿ ಇಬ್ಬರಿಗೂ ಕೈಕುಲುಕಿ ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ. ಆ ವ್ಯಕ್ತಿಯ ಪಿಸ್ತೂಲ್ ಫಿಯಾನಳ ಕೈಯಲ್ಲೇ ಉಳಿದುದರಿಂದ ತಾವು ನಿಂತುಕೊಂಡಿರುವ 5ನೇ ಮಹಡಿಯ ವರಾಂಡಕ್ಕೆ ಬಂದ ಫಿಯಾನ ಮತ್ತು ಅರ್ಥರ್ ಕೆಳಗಡೆ ಹೋಗುತ್ತಿರುವ ವಿಲಕ್ಷಣ ವೃತ್ತಿಯ ವ್ಯಕ್ತಿಯನ್ನು ಕೂಗಿ ಕರೆದು ಆತ ಪಿಸ್ತೂಲ್ ಬಿಟ್ಟು ಹೊಗಿರುವುದನ್ನು ಹೇಳುತ್ತಿರುತ್ತಾರೆ. ಕೆಳಗಿನಿಂದ ಜೋರಾಗಿ ಬೊಬ್ಬೆ ಹಾಕುತ್ತಿದ್ದ ಆ ವ್ಯಕ್ತಿ ಬಾಲ್ಕನಿಯಲ್ಲಿ ಒರಗ ಬೇಡಿ ಎಂದು ಕೂಗಿಕೊಳ್ಳುತ್ತಾನೆ. ಯಾಕೆಂದರೆ ಅದಕ್ಕಿಂತ ಮುಂಚೆ ಆ ವ್ಯಕ್ತಿ ಒಳ ಬರುವಾಗ ಅವರು ಒರಗುತ್ತಿರುವ ತಡೆಗೋಡೆ ಮುರಿದಿತ್ತು. ಸರಿಯಾಗಿ ಕೇಳಿಸದ ಅರ್ಥರ್ ಮತ್ತು ಫಿಯಾನ ಒರಗಿಯೇ ಬಿಡುತ್ತಾರೆ.


8 ಕಾಮೆಂಟ್‌ಗಳು:

  1. ಕಥೆ ತುಂಬ ಚೆನ್ನಾಗಿದೆ.ಕೊನೆಗು ಆರ್ಥರ್ ತನ್ನ ಪತ್ನಿಜೊತೆ ಬದುಕುವ ಆಸೆ ಈಡೆರಲಿಲ್ಲವೆನ್ನುವುದು ಬೇಸರದ ಸಂಗತಿ..

    ಪ್ರತ್ಯುತ್ತರಅಳಿಸಿ
  2. ಭಿನ್ನವಾದ ಕಥೆ.
    ಕನ್ನಡದಲ್ಲಿ ಇಂಥಾ ಕಥೆಗಳನ್ನು ನಾನು ಓದಿರುವುದು ಕಡಿಮೆ
    ನಿಮ್ಮ ಶೀರ್ಷಿಕೆಗಳು ಕಾಣುತ್ತಿಲ್ಲ
    ಬದಲಾಯಿಸಬೇಕೆನಿಸುತ್ತದೆ ನೋಡಿ.

    ಪ್ರತ್ಯುತ್ತರಅಳಿಸಿ
  3. ತುಂಬ ವಿಭಿನ್ನವಾದ ಕಥೆಯನ್ನು ಕನ್ನಡಕ್ಕೆ ತಂದುಕೊಟ್ಟ ನಿಮಗೆ ಧನ್ಯವಾದಗಳು. ಇಂತಹ ಇನ್ನಿಷ್ಟು ಕಥೆಗಳನ್ನು ನೀವು ಅನುವಾದಿಸಿ ಕೊಟ್ಟರೆ, ಖುಶಿಯಿಂದ ಓದುವೆನು.

    ಪ್ರತ್ಯುತ್ತರಅಳಿಸಿ
  4. ಇತ್ತೀಚೆಗೆ ನನ್ನ ಗಮನಕ್ಕೆ ಬಂದ ವಿಶಿಷ್ಟ ಕಥೆ ಇದು. ತುಂಬಾ ವಿಭಿನ್ನವಾಗಿದೆ.
    ಗ್ರಹಾಂ ಚಾಪ್ ಮ್ಯಾನ್ ಬಗ್ಗೆ ತುಸು ಕೇಳಿದ್ದೆ, ಈಗ ಅವರ ಕೃತಿಗಳನ್ನು ಸಾದ್ಯಂತ ಓದುವ ಆಸೆ ಮೂಡಿದೆ. ನಿಮ್ಮ ಭಾಷಾಂತರ ಸರಳ ಶೈಲಿ - ನೇರ. excellent.

    ಪ್ರತ್ಯುತ್ತರಅಳಿಸಿ
  5. bEra taraha ide kate.
    Hydrogen Oxide andre neeru. bahushya adu hydrochloric acid aagabeku annisutte.
    matte nimma comment nalli obbara hesaru tappagi haakiddeera. dayaviTTu saripaDisi.

    ಪ್ರತ್ಯುತ್ತರಅಳಿಸಿ
  6. ಮಾಲತಿ ಮೇಡಮ್ ನಿಮ್ಮ ಅಮೂಲ್ಯ ಸಲಹೆಗೆ ಧನ್ಯವಾದ. ನೀವು ತಿಳಿಸಿದ ನನ್ನ ತಪ್ಪುಗಳನ್ನು ಸರಿಪಡಿಸಿದ್ದೇನೆ.
    @ ಸ್ವರ್ಣರವರೆ ನಿಮ್ಮ ಸಲಹೆಗೆ ಧನ್ಯವಾದ
    @ ಮೊಹಮ್ಮದ್ ರಶೀಧ್ ಮತ್ತು ಸುನಾತ್ ರಿಗೆ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  7. ಸಖತ್ತಾಗಿದೆ ರೀ..
    ಲೇಖನ ಉದ್ದವಾದಷ್ಟೂ ಆಸಕ್ತಿ ಕ್ಷೀಣವಾಗುತ್ತಾ ಹೋಗುತ್ತೆ. ಆದ್ರೆ ಇಲ್ಲಿ ಹಾಗಾಗಲಿಲ್ಲ. ಅನುವಾದ ಸಖತ್ತಾಗಿತ್ತು..

    ಪ್ರತ್ಯುತ್ತರಅಳಿಸಿ
  8. ಭರವಣಿಗೆಯ ರೂಪ ಸುಂದರವಾಗಿದೆ. ಉತ್ತಮ ಭಾಷಾಂತರ ಬರಹ. ಒಳ್ಳೆಯ ಪ್ರಯತ್ನ.

    ಪ್ರತ್ಯುತ್ತರಅಳಿಸಿ