ಭಾನುವಾರ, ಸೆಪ್ಟೆಂಬರ್ 22, 2013

ನೀ ಮರೆತು ಹೋಗುವ ಮುನ್ನ....

ನೀ ಮರೆತು ಹೋಗುವ ಮುನ್ನ
ನನ್ನ ಹ್ರದಯಂಗಳದಿ ನೀ ಬರೆದ
ಸುಂದರ ಚಿತ್ರವ ಅಳಿಸಿ ಹೋಗು
ನಾನು ನಿನ್ನ ಮನಸ್ಸಿನ ಒಂದು ಅಂಶ ಅಥವಾ
ನಿನ್ನಾತ್ಮದ ಒಂದು ಅಂಗ
ಎಂದೆಲ್ಲಾ ಸುಳ್ಳು ಹೇಳಿದ  
ನನ್ನ ನಂಬಿಕೆಗಳಿಗೆ ಬೆಂಕಿ ಹಚ್ಚಿ ಹೋಗು !
ನನ್ನ ಮಾನಸಿಕ ಉದ್ವೇಗಕ್ಕೆ
ಅನಂತ ಕನಸುಗಳಿಗೆ
ತಿಳಿ ಹೇಳಿ ಹೋಗು
ಆತ್ಮ-ಅಕ್ಷರದಗಳ ಸಂಹನದ
ಮಾಧ್ಯಮವಾಗಿ ಹರಿದು ಬಂದ
ನನ್ನ ಕವಿತೆಗಳಿಗೆ ಪೂರ್ಣ ವಿರಾಮ ಹಾಕಿ ಹೋಗು
ಅಮೂರ್ತ ಕಲ್ಪನೆಗಳನ್ನು ಮೂರ್ತೀಕರಿಸಿದ
ಈ ಹ್ರದಯದ ಬಡಿತಗಳ ನಿಲ್ಲಿಸಿ ಹೋಗು !!!
ನೋಡು ಹುಡುಗಿ
ನನ್ನ ರಚನೆಗಳಿಗೆ ನೀನೇ ಸಂಪಾದಕಿ
ನೀ ಮುಖ ಹಾಳೆಯಲ್ಲಿ ಪ್ರಕಟಿಸುವ
ನನ್ನ ಬರಹ ಪ್ರಕಾರಗಳ ನಾನೇ ಓದಿ ಬಲೂನಾಗಿ
ಸಾಹಿತ್ಯ ಲೋಕದಲ್ಲೆಲ್ಲಾ ಸುತ್ತಾಡಿ ಬಂದಂತೆ ಅನುಭವಿಸಲು
ಇದೋ ನಿನಗೆ ಧನ್ಯವಾದ.   5 ಕಾಮೆಂಟ್‌ಗಳು:

  1. ಅವಳಿಗಾಗಿಯೇ ಬರೆದರೂ, ನಮಗಾಗಿಯೇ ಬರೆದಂತಿದೆ. ನಿಜವಾಗಲೂ ಮನಸ್ಸಿಗೆ ಮುಟ್ಟಿತು.

    ಪ್ರತ್ಯುತ್ತರಅಳಿಸಿ
  2. ಹೇಳಿ ಹೋಗು ಕಾರಣದ ಮುಂದಿನ ಭಾಗ ಚೆನ್ನಾಗಿದೆ

    ಪ್ರತ್ಯುತ್ತರಅಳಿಸಿ
  3. ಒಲವಿನೊಲೆ ಬರೆದ ನಲ್ಲನಿಗೆ ಬರದೆ, ಎದೆಯ ಒಳಗೆ ಮಧುರ ನೆನಪುಗಳ ಬಿತ್ತುವ ನಿಮ್ಮವಳ ಸ್ನೇಹ ಬೇಗ ಸಿಗಲಿ.

    ಪ್ರತ್ಯುತ್ತರಅಳಿಸಿ