ಗುರುವಾರ, ಸೆಪ್ಟೆಂಬರ್ 12, 2013


ಯಾಕೆ ಹೀಗೆ ?

ಓ ನೆನಪುಗಳೇ
ಯಾಕೆ ಹೀಗೆ ?
ಮಣ್ಣ ಮುದ್ದೆಯಾಗಿದ್ದರೆ ಗೊಂಬೆ ಮಾಡಿ
ನೋಡುತ್ತಾ ಕುಳಿತು ಸಂತೋಷ ಪಡುತ್ತಿದ್ದೆ,
ಚೆಂಡ ಕಟ್ಟಿ ಕಾಲಲ್ಲಿ ಒದ್ದು ಚೆಂಡಾಡುತ್ತಿದ್ದೆ.
ಆದರೆ ನಿ ಕಣ್ಣಂಚಿನ ಕಂಬನಿಯಾದೆ, ತುಟಿಯಂಚಿನ ನಗುವಾದೆ.

ಓ ನಲಿವುಗಳೇ
ಯಾಕೆ ಹೀಗೆ ?
ಗಿಡ-ಮರ-ಬಳ್ಳಿಗಳಾಗಿದ್ದರೆ ನಾ ನೀರಾಗಿ ಕರಗಿ ನೀರುಣಿಸಿ,
ಹೂ ಬಿಟ್ಟಾಗ ಸಂಭ್ರಮ ಪಡುತ್ತಿದ್ದೆ,
ಸೌಂದರ್ಯವ ಕಂಡು ಆನಂದ ಪಡುತ್ತಿದ್ದೆ
ಆದರೆ ನಿ ಭಾವಚಿತ್ರದಲ್ಲಿನ ನಗುವಾದೆ, ಕಣ್ಣಂಚಿನ ನೋಟವಾದೆ.

ಓ ಯೋಚನೆಗಳೇ
ಯಾಕೆ ಹೀಗೆ ?
ನಕಾಶೆಯಾಗಿದ್ದರೆ ವೇಗದಿಂದ ಗುರಿ ಮುಟ್ಟಿ ನಿನ್ನ ಗೆಲ್ಲುತ್ತಿದ್ದೆ,
ಗೆದ್ದು ಜಂಭ ಪಡುತ್ತಿದ್ದೆ.
ಆದರೆ ನಿ ಕವಲು ದಾರಿಗಳ ಜೇಡರ ಬಲೆಯಾದೆ.

ಓ ಮೌನವೇ
ಯಾಕೆ ಹೀಗೆ ?
ಶಿಲ್ಪವಾಗಿದ್ದರೆ ಕೆತ್ತಿ ಮೂರ್ತಿಯ ಮಾಡಿ ಪೂಜಿಸುತ್ತಿದ್ದೆ,
ತಲೆಯ ಮೇಲೆ ಹೊತ್ತು ಜಯಘೋಷ ಪಡುತ್ತಿದ್ದೆ.
ಆದರೆ ನಿ ಒಳಗೊಳಗೇ ದಡವ ಕೊರೆಯುವ ಸಾಗರದ ಅಲೆಯಾದೆ.

ಓ ನೋವುಗಳೇ
ಯಾಕೆ ಹೀಗೆ
ನದಿಯಾಗಿದ್ದರೆ ದಡದ ಮೇಲೆ ಕುಳಿತು
ಹಸಿರು ತಳದ ವಿಚಿತ್ರ ವಿಶ್ವವನ್ನು
ಸ್ವಪ್ನ ಜೀವಿಯಂತೆ ನಿರೀಕ್ಷಿಸುತ್ತಿದ್ದೆ.
ಆದರೆ ನಿ ಮಾತ್ರ ಸ್ಮಶಾನದಲ್ಲಿ ಬಡಿಸಿಟ್ಟ ಮ್ರಷ್ಟಾನ್ನವ
ನೋಡುತ್ತಾ ತಿನ್ನಲಾಗದ ಹಸುಗೂಸಿನಂತಾದೆ.

ಓ ಸ್ಪೂರ್ತಿಯೇ
ಯಾಕೆ ಹೀಗಾದೆ ?
ಹಗಲಲ್ಲಿ ಸೂರ್ಯನೂ ಆಗದೆ
ರಾತ್ರಿಯಲ್ಲಿ ಚಂದ್ರನೂ ಆಗದೆ
ಹೊತ್ತಿಸಿದಾಗ ಉರಿಯುವ
ಆರಿಸಿದಾಗ ಆರುವ ದೀಪವಾದೆ.

2 ಕಾಮೆಂಟ್‌ಗಳು:

  1. ಅದು ಹಾಗೆಯೇ, ಬದುಕಿನಲ್ಲಿ ಯಾವುದೂ ನಮ್ಮ ತೆಕ್ಕೆಗೆ ಸಿಕ್ಕೋದೇ ಇಲ್ಲ ನಾವು ಬಯಸಿದಂತೆ! "ಆಡಿಸುವಾತನ ಕೈ ಚಳಕಾದಲೇ ಎಲ್ಲ ಅಡಗಿದೇ!!!" ನಮ್ಮದೇನೂ ಇಲ್ಲ...

    ಪ್ರತ್ಯುತ್ತರಅಳಿಸಿ
  2. ಓ ಭಾವನೆಯೇ,
    ನೀನು ಉಕ್ಕಿದಾಗ
    ಚಂದ್ರಶೇಖರರ ಕವನವಾದೆ!

    ಪ್ರತ್ಯುತ್ತರಅಳಿಸಿ