ಅಭಿಮಾನಿಗಳಿಂದ ಕ್ರಿಕೆಟ್ ದೇವರೆಂದೇ ಬಿಂಬಿತರಾಗಿರುವ ಸಚಿನ್ ತೆಂಡೂಲ್ಕರ್ ಅವರು ಆಡುತ್ತಿರುವ ೨೦೦ನೇ ಟೆಸ್ಟ್ ಪಂದ್ಯದ ನಂತರ ಮೈದಾನದಲ್ಲಿ ಅವರ ಆಟ ನಮಗೆ ನೋಡಲು ಸಿಗುವುದಿಲ್ಲ. ಮತ್ತೇನಿದ್ದರೂ ತೆಂಡೂಲ್ಕರ್ ಇತಿಹಾಸ.
ಬಹುಶಃ ನಾನು ನನ್ನ ಶಾಲಾದಿನಗಳಲ್ಲಿ ರಜೆ ಹಾಕಿದೇನೆಂದರೆ ಅದು ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ನೋಡಲು ಇದ್ದಿರಬೇಕು. ನನ್ನ ಬಾಲ್ಯದ ದಿನಗಳಲ್ಲಿ ಯಾವುದಾದರು ಮನೆಯಲ್ಲಿ ಕ್ರಿಕೆಟ್ ನೋಡುತ್ತಿದ್ದರೆ, ಸಚಿನ್ ಬ್ಯಾಟಿಂಗ್ ಮಾಡುತ್ತಿದ್ದರೆ, ಅದು ಯಾವುದೇ ಮನೆಯಾಗಿರಲಿ ಒಳಗೆ ಹೋಗಿ ಕ್ರಿಕೆಟ್ ವೀಕ್ಷಿಸುತ್ತಿದ್ದೆ. ಪ್ರೀತಿಯ ಅಮ್ಮನಿಗಾಗಿ ಸಚಿನ್ ತೆಂಡೂಲ್ಕರ್ ಕೊನೆಯ ಆಟ. ಸಚಿನ್ ವಿದಾಯದ ಪಂದ್ಯವಿದೆಂದು ಕರೆದಿದ್ದರೂ, ಮಾಸ್ಟರ್ ಬ್ಲಾಸ್ಟರ್ ಮಟ್ಟಿಗೆ ಇದು ತಾಯಿಗಾಗಿ ಆಡುತ್ತಿರುವ ಕೊನೆಯ ಟೆಸ್ಟ್. ಬಾಲ್ಯದಲ್ಲಿ ಹಾಗೂ ಕ್ರಿಕೆಟ್ ಕ್ಷೇತ್ರದಲ್ಲಿ ಬೆಳವಣಿಗೆ ಕಾಣುತ್ತಿದ್ದ ಕಾಲದಲ್ಲಿ ಸಚಿನ್ ಆಟವನ್ನು ನೋಡಲು ಅವರ ತಾಯಿ ರಜನಿ ಅವರಿಗೆ ಸಮಯವೇ ಸಿಗುತ್ತಿರಲಿಲ್ಲ.ವಿಶ್ವ ಮೆಚ್ಚಿಕೊಂಡ ಆಟಗಾರನ ತಾಯಿ ರಜನಿ ಅವರು ಈಗ ವ್ಹೀಲ್ ಚೇರ್ ಅವಲಂಬಿಸಿದ್ದಾರೆ. ನಡೆಯುವುದು ಸಾಧ್ಯವಾಗದು.ಮುದ್ದಿನ ಮಗ ಕೊನೆಯ ಬಾರಿಗೆ ಆಡುವುದನ್ನು ನೋಡಲು ಬಯಸಿದ ತಾಯಿ ಆಸೆಗೆ ಸ್ಪಂದಿಸಿರುವ ದೇಶದ ಹೆಮ್ಮೆಯ ಪುತ್ರ ತನ್ನ ತಾಯಿಗೆ ಪಂದ್ಯ ನೋಡುವುದಕ್ಕೆ ಅನುಕೂಲವಾಗುವಂತೆ ಮಾಡಿರುವ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದ್ದಾರೆ.
1996 ವಿಶ್ವಕಪ್ ಸೆಮಿಫೈನಲ್ ನಲ್ಲಿ ಸಚಿನ್ ವಿಕೆಟ್ ಬೆನ್ನಿಗೆ 7 ವಿಕೆಟ್ ಒಮ್ಮೆಲೆ ಕಳೆದುಕೊಂಡಾಗ ನಾಟ್ ಔಟ್ ಆಗಿ ಕ್ರಿಸ್ ನಲ್ಲಿದ್ದ ಸಚಿನ್ ಗೆಳೆಯ ವಿನೋದ್ ಕಾಂಬ್ಲಿ ಕೊಲ್ಕತ್ತಾದ ಪ್ರೇಕ್ಷಕರ ದಾಂದಲೆಯಿಂದ ಪಂದ್ಯ ರದ್ದುಗೊಂಡಾಗ ಅತ್ತು ಬಿಟ್ಟ ಕ್ಷಣ.
ವಿಶ್ವಖ್ಯಾತ ಕ್ರಿಕೆಟಿಗ ಎನಿಸಿದರೂ ಅವರು ಮನೆಯಲ್ಲಿ ತಮ್ಮ ವಿಭಿನ್ನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಮಗನಾಗಿ, ಸಹೋದರನಾಗಿ, ಪತಿಯಾಗಿ, ತಂದೆಯಾಗಿ ಪ್ರಭಾವಿಯಾಗಿ ಹಾಗೂ ಮಾದರಿಯಾಗಿ ನಿಂತಿದ್ದಾರೆ. ಆದ್ದರಿಂದ ಸಚಿನ್ ವತ್ತಿ ಹಾಗೂ ವೈಯಕ್ತಿಕ ಜೀವನ ಎರಡೂ ಆದರ್ಶವಾಗುವಂಥದ್ದು.
ಸಚಿನ್ ಗೆ ಅಭಿಮಾನಿಗಳ ಅಂಕ:
ಬ್ಯಾಟಿಂಗ್ ಶೈಲಿ ಸ್ವಭಾವ ವ್ಯಕ್ತಿತ್ವ
35% 17% 48%
ಸಚಿನ್ ಆರಂಭದ ದಿನಗಳಲ್ಲಿ ಆಡುತ್ತಿದ್ದುದ್ದನ್ನು ನೆರೆಮನೆಯ ಚಿಕ್ಕ ಕಪ್ಪು ಬಿಳುಪು ದೂರದರ್ಶನದಲ್ಲಿ ನೋಡುತ್ತಿದ್ದರೆ,( ಕೆಲವೂಮ್ಮೆ ಆ ಮನೆಯವರು ನನಗೆ ಗೊತ್ತಾಗದ ಹಾಗೆ ಟಿ. ವಿ. ಆಫ್ ಮಾಡಿದ್ದು ಇದೆ) ಕೊನೆಯ ಆಟವನ್ನು ಕಂಪ್ಯೂಟರ್ ನಲ್ಲಿ ನೋಡಿ ಸಂತೋಷ ಪಟ್ಟೆ.
ಸಚಿನ್ ತನ್ನ ಕುಟುಂಬದ ಜೊತೆ |
ತನ್ನ ಬಾಲ್ಯದ ಗೆಳೆಯ ವಿನೋದ್ ಕಾಂಬ್ಲಿಯೊಂದಿಗೆ |
ಸರ್ ಡಾನ್ ಬ್ರಾಡ್ಮನ್ ನೊಂದಿಗೆ |
ಪತ್ನಿ ಅಂಜಲಿಯೊಂದಿಗೆ ತನ್ನ ಹುಟ್ಟು ಹಬ್ಬದ ಸಂದರ್ಭ |
ಬಾಲ್ಯದಲ್ಲಿ ಸಚಿನ್ |
ನಿರಂತರ ಆಟ ಹಾಗೂ ಪ್ರವಾಸದ ಒತ್ತಡದ ನಡುವೆಯೂ ತೆಂಡೂಲ್ಕರ್ ಸದಾ ಕುಟುಂಬದ ಜತೆಗೆ ಬಲವಾದ ಬೆಸುಗೆಯನ್ನು ಕಾಯ್ದುಕೊಂಡು ಬಂದವರು. ಕ್ರಿಕೆಟ್ ಸರಣಿಯಲ್ಲಿ ಆಡುತ್ತಿದ್ದ ಸಂದರ್ಭದಲ್ಲಿ ತಂದೆ ರಮೇಶ್ ನಿಧನರಾದಾಗ ಬ್ಯಾಟಿಂಗ್ ತಮ್ಮ ಕರ್ತವ್ಯವೆಂದು ಶತಕ ಗಳಿಸಿ, ಅದನ್ನು ತಂದೆಗೆ ಅರ್ಪಿಸಿದ್ದರು. ತನ್ನ ಸಹೋದರ ಅಜಿತ್ ಜತೆಗೆ ಬಾಲ್ಯದಿಂದ ಇಲ್ಲಿಯವರೆಗೆ ಆತ್ಮೀಯ ಬಾಂಧವ್ಯವನ್ನು ಕಾಯ್ದುಕೊಂಡು ಬಂದಿದ್ದಾರೆ.
ಸಚಿನ್ ತೆಂಡೂಲ್ಕರ್ ಹೇಳುವಂತೆ,
''24 ವರ್ಷ ನನ್ನ ಆಟಕ್ಕೆ ಬೆಂಬಲ ನೀಡಿದ ಎಲ್ಲರಿಗೂ ನನ್ನ ಹೃದಯಾಂತರಾಳದ ನಮನ. ನನ್ನ ಸಂದೇಶಗಳು ನಿಮಗೆ ಇಷ್ಟವಾದವೆಂದು ನಂಬುತ್ತೇನೆ..''
ಸಚಿನರ ಜೀವನದ ಆದರ್ಶವನ್ನು ನಿರೂಪಿಸುವದರ ಜೊತೆಗೆ ಉತ್ತಮ ಫೋಟೋಗಳನ್ನು ಕೊಟ್ಟಿದ್ದೀರಿ. ಧನ್ಯವಾದಗಳು.
ಪ್ರತ್ಯುತ್ತರಅಳಿಸಿಅದೆಷ್ಟೂ ಫೋಟೋಗಳನ್ನು ಹುಡುಕಿ ಕೊಟ್ಟೀದೀರಿ ಸರ್...ಚೆನಾಗಿದೆ ಬರಹ...
ಪ್ರತ್ಯುತ್ತರಅಳಿಸಿಸಚಿನ್,ದ್ರಾವಿಡ್,ಲಕ್ಶ್ಣಣ್,ಗಂಗೂಲಿಯಿಲ್ಲದ ಕ್ರಿಕೆಟ್ಟು ನೋಡಲು ಯಾಕೋ ಬೇಜಾರು ಅನ್ನಿಸ್ತಾ ಇದೆ ...
ತುಂಬಾ ಸಂತೋಷ ಗೆಳೆಯ ಸುನಾತ್ ರವರೆ,
ಪ್ರತ್ಯುತ್ತರಅಳಿಸಿ@ ಚಿನ್ಮಯ್ ನನ್ನ ಬ್ಲಾಗ್ ಗೆ ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದ ನಿಮ್ಮ ಬ್ಲಾಗನ್ನು ನಾನು ಓದಿದ್ದೆ ಅದರಲ್ಲಿನ ಬರಹಗಳು ತುಂಬಾ ಚೆನ್ನಾಗಿವೆ.
Sachin ranna miss maadkoteve...chennaagide
ಪ್ರತ್ಯುತ್ತರಅಳಿಸಿಸಚಿನ್ ಬಗ್ಗೆ ಆತನ ಆಟ ಮತ್ತು ವ್ಯಕ್ತಿತ್ವದ ಬಗ್ಗೆ..ನಿವೃತ್ತಿ ಘೋಷಣೆ ಹಿನ್ನೆಲೆಯ ಲೇಖನ ಬಹಳ ಚನ್ನಾಗಿದೆ ಚಂದ್ರು... ಜಲನಯನಕ್ಕೆ ಬಂದಿರಿ..ಧನ್ಯವಾದ...ಈಗಷ್ಟೇ ನೋಡಿದೆ...ಕ್ಷಮೆಯಿರಲಿ.
ಪ್ರತ್ಯುತ್ತರಅಳಿಸಿವಾಹ್ !
ಪ್ರತ್ಯುತ್ತರಅಳಿಸಿಇಡಿಯ ಸಚಿನ್ ಇದಾರೆ ಇಲ್ಲಿ ಅನ್ನಿಸಿಬಿಡ್ತು ..ಎಷ್ಟಂದ್ರೂ ಹೆಸರಲ್ಲೆ ಚಿನ್ನವಿದೆ ಅಲ್ವಾ ?
ಇಷ್ಟವಾಯ್ತು ...ಆಪ್ತವಾಯ್ತು ..
ಸಚಿನ್ ನ ಈ ವಿದಾಯ ಯಾಕೋ ಅವತ್ತು ದ್ರಾವಿಡ್ ನಾ ಮಿಸ್ ಮಾಡಿಕೊಂಡಷ್ಟೇ ಬೇಜಾರಾಯ್ತು