ಕಳೆದು ಹೋಗಿದೆ ನಿದ್ದೆ ಇಲ್ಲದ ರಾತ್ರಿಗಳು
ಊಟ ಸೇರದ ಸಮಯಗಳು
ಈ ಸೌಮ್ಯ ವರ್ಣ ಸಂಯೋಜನೆ
ರೂಪಲಾಲಿತ್ಯದ ಸೊಬಗಿಗೆ
ನನ್ನ ಒಂದು ಕಣ್ಣಂಚಿನ ನೋಟ ತಾಕಲು
ಪುಟ್ಟ ಹ್ರದಯ ಮುಟ್ಟಲು
ಮೂಡಿದ ಕುಂಚದ ಕಲಾ ಕುಸುಮಗೆ.
ಚಿತ್ರ ಕೃಪೆ: ಅಂತರ್ಜಾಲ
ಈಗ ಅವನ ಕೈ ಬೆರಳುಗಳು ಚಿತ್ರ ಬರೆಯುತ್ತಿಲ್ಲಮೆದುಳು ಯೋಚಿಸುತ್ತಿಲ್ಲ
ಹ್ರದಯ ಮಿಡಿಯುತ್ತಿಲ್ಲ
ಮುಖದಲ್ಲಿ ಬೆಳೆದ ಕುರುಚಲು ಗಡ್ಡ
ಕೊಳಕು ಬಟ್ಟೆ, ಉದ್ದುದ್ದ ಉಗುರುಗಳು,
ಸ್ವಾಧೀನ ಕಳೆದುಕೊಂಡ ಬುದ್ಧಿ
ಎಲ್ಲ ಬಂಧಗಳು ಕಳಚಿ ದೂರವಾಗಿ ಬಿಟ್ಟಿವೆ
ಅವನಿಗೆ ವೈದ್ಯೆಯಾಗಿ ಉತ್ಸುಕತೆಯಿಂದ ಕಾಯುತ್ತಿರುವೆ
ಚಡಪಡಿಸುತ್ತೇನೆ, ಉದ್ವಿಗ್ನಳಾಗಿ ಶತಪಥ ಹಾಕುತ್ತೇನೆ. ನನ್ನ ಹಿತೈಷಿಯಾಗಿ, ಅಭಿಮಾನಿಯಾಗಿ
ಒಮ್ಮೆ ನನ್ನ ಗುರುತಿಸಬೇಕು
ಬರೆಯಬೇಕು ಇಂತಹ ಒಂದೇ ಒಂದು ಕಲಾಕ್ರತಿ
ನನಗಾಗಿ...
Superb
ಪ್ರತ್ಯುತ್ತರಅಳಿಸಿಚಂದದ ಭಾವ ಬರಹ :)
ಪ್ರತ್ಯುತ್ತರಅಳಿಸಿಇಷ್ಟ ಆಯ್ತು