ಭಾನುವಾರ, ಅಕ್ಟೋಬರ್ 6, 2013

ಕಳೆದೇ ಹೋದವು ಆ ದಿನಗಳು, ಗಂಟೆಗಳು, ಕ್ಷಣಗಳು

ಹತ್ತು ದಿನಗಳ ಎನ್.ಎಸ್..ಎಸ್. ಶಿಬಿರದ ಒಂದು ನೆನಪು.

ಹರ್ಷೋಲ್ಲಾಸದಿಂದ ಕಳೆದೆವು ನಾವು
ರಾಷ್ಟ್ರೀಯ ಸೇವಾ ಯೋಜನಾ ಶಿಬಿರವನ್ನು,
ಅಜಾಜ್ ಅಹಮ್ಮದ್ ನೇತೃತ್ವ, ವನಿತ, ಕೃಷ್ಣ, ಗಂಗಾಧರರು
ಇದ್ದರು ನಮ್ಮೊಂದಿಗೆ ನಗುತ್ತಾ ನಗಿಸುತ್ತಾ

                                 ಚಿತ್ರ: ಸಂತೋಷ್ ಜಿ.ಶೆಟ್ಟಿ

ಒಂದೇ ಗಿಡದಲ್ಲಿ ಅರಳಿದ ನೂರಾರು ಮಲ್ಲಿಗೆಗಳಂತೆ
ಕೆಲಸವ ಮಾಡುತ್ತಿದ್ದರು ನಮ್ಮ ಗೆಳೆಯರು
ಪರಸ್ಪರ ಅಣ್ಣ-ತಮ್ಮಂದಿರಂತೆ, ಅಕ್ಕ-ತಂಗಿಯರಂತೆ,

ಸುಪ್ತಪ್ರತಿಭೆಗಳ ಬಾಗಿಲುತೆರೆದು
ಮನರಂಜಿಸಿದರು ನಮ್ಮ ಗೆಳೆಯರು ಅಂದು
ನೃತ್ಯದಲ್ಲಿ, ಸಂಗೀತದಲ್ಲಿ, ನಟನೆಗಳಲ್ಲಿ

                                       ಚಿತ್ರ:ಚಂದ್ರಶೇಖರ್ ಈಶ್ವರ್ ನಾಯ್ಕ್

ಗಂಗಾಧರರ ಕ್ವಿಜ್ ಸ್ಪರ್ಧೆ
ಜೀವನವೆಂಬ ಪುಸ್ತಕದಲ್ಲಿ ಕಲಿಯಲು ಇನ್ನೂ ಇದೆ ಎನ್ನುತ್ತಿದ್ದರೆ,
ವನಿತರ ಅಂತ್ಯಾಕ್ಷರಿಯು
ಈ ಶಿಬಿರ ಅಂತ್ಯವಾಗದೆ ಮುಂದುವರೆಯುವಂತೆ ಹೇಳುತ್ತಿತ್ತು.

ರೆಂಜಾಳರ ಯೋಚನೆಗಳು
ನಮ್ಮನ್ನು ಭವಿಷ್ಯದ ಬಗ್ಗೆ ಯೋಚಿಸುವಂತೆ ಹೇಳುತ್ತಿದ್ದರೆ,
ಮಹಮ್ಮದಾಲಿಯವರು ದೈಹಿಕ ಶಿಕ್ಷಣದಿಂದ ನಮ್ಮನ್ನು ರಂಜಿಸಿದ್ದರು

ಪ್ರಪಂಚವನ್ನೇ ಮರೆತ್ತಿದ್ದರೂ ಕೆಲವರು
ಹುಟ್ಟುಹಬ್ಬವ ಮರೆಯದೆ ಆಚರಿಸುತ್ತಿದ್ದರು
ಉಲ್ಲಾಸದಿಂದ, ಸಂಭ್ರಮದಿಂದ, ಸಂತೋಷದಿಂದ,

                                       ಚಿತ್ರ:ಚಂದ್ರಶೇಖರ್ ಈಶ್ವರ್ ನಾಯ್ಕ್

ಸೂರ್ಯನ ಬಿಸಿಲಿಗೂ ಬಿಳಿಯಾಗೇ ಇದ್ದ ಮುಖಗಳು
ಬೇಸರದಿಂದ ತೊಳೆದ ಕೆಂಡದಂತ್ತಿದ್ದವು ಆ ಕೊನೆಯ ದಿನ
ಕಳೆದೇ ಹೋದವು ಎಂದಿಗೂ ನೆನಪಿಡಬೇಕಾದ
ಆ ದಿನಗಳು, ಗಂಟೆಗಳು, ಕ್ಷಣಗಳು.

4 ಕಾಮೆಂಟ್‌ಗಳು:

  1. ಸಾಂಘಿಕ ಮನೋವೃತ್ತಿಯನ್ನು ಉತ್ತೇಜಿಸುವ ಇಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ಅತ್ಯವಶ್ಯವಾಗಿವೆ.

    ಪ್ರತ್ಯುತ್ತರಅಳಿಸಿ
  2. ಸುನಾತ್ ರವರೆ ನನ್ನ ಬ್ಲಾಗನ್ನು ಇಷ್ಟಪಟ್ಟು ಓದುವುದಕ್ಕೆ ನಿಮಗೆ ಧನ್ಯವಾದ. ಇದು ಸರಿ ಸುಮಾರು ಹದಿಮೂರು ವರ್ಷದ ಹಿಂದೆ ನಡೆದ ಎನ್.ಎಸ್.ಎಸ್. ಶಿಬಿರ. ಯಾಕೋ ಆ ದಿನಗಳ ಸುಂದರ ನೆನಪು ಕಾಡುತ್ತಲೇ ಇದೆ.

    ಪ್ರತ್ಯುತ್ತರಅಳಿಸಿ
  3. ದಶಕಗಳ ಹಿಂದೆ ಓಡಿದ್ದಿರಿ ಚೆನ್ನಾಗಿದೆ
    ನೆನಪುಗಳೇ ಮಧುರ

    ಪ್ರತ್ಯುತ್ತರಅಳಿಸಿ
  4. ಎನ್ ಎಸ್ ಎಸ್ ಶಿಬಿರದ ಮಧಿರ ನೆನೆಪುಗಳಿಂದ ಹಿಂದಕ್ಕೆ ಕರೆದುಕೊಡು ಹೋಗುವ ನಿಮ್ಮ ಅಂಕಣ ಮನಸಿಗೆ ಹಿದಿಸಿತು.

    ಪ್ರತ್ಯುತ್ತರಅಳಿಸಿ